ಜೆದ್ದಾ(www.vknews.in): ಸೌದಿಯಾದ್ಯಂತ ಮೂರು ತಿಂಗಳ ಕೊರೊನಾ ವೈರಸ್ ಲಾಕ್ ಡೌನ್ ಇಂದಿನಿಂದ ಸಂಪೂರ್ಣವಾಗಿ ಸಡಿಲಿಕೆ ಮಾಡಲಾಗಿದ್ದು, ಜನಜೀವನ ಯಥಾ ಸ್ಥಿತಿಗೆ ಮರಳ ತೊಡಗಿದೆ. ಬಿಕೋ ಎನ್ನುತ್ತಿದ್ದ ವ್ಯಾಪಾರ ಮಳಿಗೆಗಳು ಜನರಿಂದ ತುಂಬಿ ತುಳುಕತೊಡಗಿದೆ. ಕರ್ಫ್ಯೂ ಸಡಿಲಿಕೆಯ ಪ್ರಥಮ ದಿನವಾದ ಇಂದು ಸೌದಿಯಲ್ಲಿ ಒಟ್ಟು 3379 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, 37 ಮಂದಿ ಇಂದು ಕೊವಿಡ್ ಗೆ ಬಲಿಯಾಗಿದ್ದಾರೆ. ಇದರಿಂದಾಗಿ ಸೌದಿಯಲ್ಲಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 157612 ವಾಗಿದ್ದು, ಇವರಲ್ಲಿ 101130 ಮಂದಿ ಈಗಾಗಲೇ ರೋಗಮುಕ್ತಿ ಹೊಂದಿದ್ದು, ಒಟ್ಟು ಮೃತರ ಸಂಖ್ಯೆ 1267ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.