ಕುವೈತ್(www.vknews.in): ಸ್ವದೇಶಿಕರಣ ಮತ್ತಷ್ಟು ಹೆಚ್ಚಿಸಲು ಕುವೈತ್ ಸರ್ಕಾರ ಯೋಚಿಸುತ್ತಿರುವುದರಿಂದ ರಾಷ್ಟ್ರದ ಹೊರಗಿರುವ ಸಾವಿರಾರು ವಲಸಿಗ ಕಾರ್ಮಿಕರ ಮರಳುವಿಕೆಯ ಕುರಿತು ಅನಿಶ್ಚಿತತೆ ಉಂಟಾಗಿದೆ. ಕುವೈತ್ ಟೈಮ್ಸ್ ಪತ್ರಿಕೆಯ ಪ್ರಕಾರ, ಕುವೈತ್ ಆಂತರಿಕ ಸಚಿವಾಲಯವು 70,000 ಕ್ಕೂ ಹೆಚ್ಚು ವಲಸಿಗರ ರೆಸಿಡೆನ್ಸಿ ವೀಸಾಗಳನ್ನು ರದ್ದು ಪಡಿಸುವ ಬಗ್ಗೆ ಅಧ್ಯಯನ ಮಾಡಲು ಸಮಗ್ರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವಲಸಿಗರ ಒಟ್ಟು ಸಂಖ್ಯೆಯನ್ನು ವರ್ಗಗಳಾಗಿ ವಿಂಗಡಿಸಲಾಗಿದ್ದು, ಇವರ ಪೈಕಿ ಯಾರಿಗೆ ಕುವೈತ್ ಗೆ ಮರಳಲು ಅನುಮತಿಸಬೇಕು ಎಂಬ ಕುರಿತು ವರದಿಯನ್ನು ತಯಾರಿಸಲಾಗಿದೆ.
ದೇಶದಿಂದ ಹೊರಗಿರುವ ವಲಸಿಗರ ವೀಸಾ ಮಾನ್ಯತೆಯನ್ನು ಆಧಾರವಾಗಿಸಿಕೊಂಡು ಯಾರನ್ನು ದೇಶಕ್ಕೆ ಮರಳಿ ಅನುಮತಿಸಬೇಕು ಎಂಬ ಶಿಫಾರಸುಗಳನ್ನು ಒಳಗೊಂಡಂತೆ ಮುಂದಿನ ವಾರ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.