ಜೆದ್ದಾ(www.Vknews.in): ಎರಡನೇ ಹಂತದ ರೂಪಾಂತರಿತ ಕೊವಿಡ್ ಹರಡುವುದನ್ನು ತಡೆಗಟ್ಟಲು ಸೌದಿ ಅರೇಬಿಯಾ ಮುಂದಿನ 10 ದಿನಗಳವರೆಗೆ ರಾಷ್ಟ್ರದ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಆಂತರಿಕ ಸಚಿವಾಲಯವು ಆದೇಶ ಹೊರಡಿಸಿದೆ.
ಈ ಆದೇಶವು ಫೆಬ್ರವರಿ 4ರ ಗುರುವಾರ ರಾತ್ರಿ 10 ರಿಂದ ಜಾರಿಗೆ ಬರಲಿದೆ. ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಹೊಸ ಆದೇಶವು ಈ ಕೆಳಗಿನಂತಿವೆ.
1. ಮದುವೆಗಳು, ಸಭೆಗಳು ಮತ್ತು ಸಭಾಂಗಣಗಳಲ್ಲಿ ನಡೆಯುವ ಔತಣಕೂಟ ವಿವಾಹ ಅಥವಾ ಹೋಟೆಲ್ಗಳೊಂದಿಗೆ ಸಂಯೋಜಿತವಾಗಿರುವ ಎಲ್ಲಾ ಪಾರ್ಟಿಗಳನ್ನು ಅಮಾನತುಗೊಳಿಸುವುದು, ಹಾಗೆಯೇ ವಿಶ್ರಾಂತಿ ಗೃಹಗಳ ಚಟುವಟಿಕೆಗಳನ್ನು ಮುಂದಿವ 30 ದಿನಗಳವರೆಗೆ ಸ್ಥಗಿತಗೊಳಿಸುವುದು.
2. ಸಭೆ ಸಮಾರಂಭಗಳಲ್ಲಿ ಗರಿಷ್ಠ ಸಂಖ್ಯೆಯ 20 ಜನರನ್ನು ಮೀರಬಾರದು.
3. 10 ದಿನಗಳ ಅವಧಿಗೆ ಎಲ್ಲಾ ಮನರಂಜನಾ ಚಟುವಟಿಕೆಗಳ ತಾತ್ಕಾಲಿಕ ಅಮಾನತು.
4. ಚಿತ್ರಮಂದಿರಗಳು, ಒಳಾಂಗಣ ಮನರಂಜನಾ ಕೇಂದ್ರಗಳು, ಸ್ವತಂತ್ರ ಒಳಾಂಗಣ ಆಟಗಳ ಸ್ಥಳಗಳು ಅಥವಾ ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್ಗಳು, ಜಿಮ್ಗಳು ಮತ್ತು ಕ್ರೀಡಾ ಕೇಂದ್ರಗಳಲ್ಲಿ 10 ದಿನಗಳ ಅವಧಿಗೆ ಸ್ಥಗಿತ.
5: ರೆಸ್ಟೋರೆಂಟ್ಗಳು, ಕೆಫೆಗಳು ಮತ್ತು ಮುಂತಾದವುಗಳಲ್ಲಿ ಸೇವೆಗಳನ್ನು ಒದಗಿಸುವುದನ್ನು ಸ್ಥಗಿತಗೊಳಿಸುವುದು ಮತ್ತು 10 ದಿನಗಳ ಅವಧಿಗೆ ಪಾರ್ಸೆಲ್ ಸೇವೆಗೆ ಸೀಮಿತಗೊಳಿಸುವುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.