ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಶಾಹೀನ್ ಚಂಡಮಾರುತವು ಒಮಾನ್ ಕಡೆಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯ ಮೇರೆಗೆ ಸಲ್ತಾನತ್ ಓಫ್ ಒಮಾನಿನಲ್ಲಿ ಎಲ್ಲಾ ರೀತಿಯ ಕಟ್ಟೆಚ್ಚರದೊಂದಿಗೆ ಎರಡು ದಿನ ರಜೆಯನ್ನು ಘೋಷಿಸಲಾಗಿದೆ.
ಜನರ ಸುರಕ್ಷತೆಯನ್ನು ಆದರಿಸಿ ಅಕ್ಟೋಬರ್ 3 ಮತ್ತು 4 ನೇ ತಾರೀಕಿನಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಲಯಗಳಿಗೆ ರಜೆ ಘೋಷಿಸಿದ್ದು, ಎಚ್ಚರಿಕೆಯಿಂದರಬೇಕಾಗಿ ಸೂಚನೆ ನೀಡಿದ್ದಾರೆ.
ಖಾಸಗಿ ವಲಯದ ವ್ಯಾಪಾರ ಮಾಲೀಕರು ಈ ರಜಾದಿನಗಳಲ್ಲಿ ಕೆಲಸ ಮುಂದುವರಿಸಲು ಅಗತ್ಯ ಎನಿಸಿದಲ್ಲಿ ಮೇಲೆ ತಿಳಿಸಿದ ದಿನಗಳಲ್ಲಿ ತಮ್ಮ ಉದ್ಯೋಗಿಗಳನ್ನು ಕೆಲಸದಲ್ಲಿ ಇರಿಸಿಕೊಳ್ಳಬಹುದು. ಇದು ಆರೋಗ್ಯ ಮತ್ತು ಔದ್ಯೋಗಿಕ ಸುರಕ್ಷತೆಯ ಕ್ರಮಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲ. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.