1. ಹಿಯಾಳಿಸುವರು ನಿನ್ನ ಹಿಂದೆ ಪ್ರೀತಿಸುವರು ನಿನ್ನ ಮುಂದೆ ಕುಗ್ಗಬೇಡ ಹಿಗ್ಗಲೂ ಬೇಡ ರಫಿ ತಿಳಿಯಿತೇ? ಅವರ್ಯಾರು ನಿನ್ನವರಲ್ಲ
2. ಎಲ್ಲೆಡೆ ಗೊಂದಲವೆದ್ದಿತು ಅನ್ಯಾಯದ ವಿರುದ್ಧವಲ್ಲ ಏನೆಂದು ತಿಳಿದೆಯಾ ? ರಫೀ ಹೆಣ್ಣಿನ ಹಕ್ಕಿನ ಹಿಜಾಬಿನ ವಿರುದ್ಧ
3. ಕೊರೋನಾದ ಸಮಯದಲ್ಲಿ ಇಸ್ಲಾಂ ಮಾನವೀಯತೆಯ ಧರ್ಮ ಎಂಬ ಪ್ರಶಂಸೆ ಎಲ್ಲೆಡೆ ಮೊಳಗುತ್ತಿತ್ತು ರಫೀ ಈಗ ಅದೇ ಧರ್ಮದ ಮೇಲೆ ಹರಿಹಾಯುವುದೇ ?
4. ಅಂದು ಒಟ್ಟಾಗಿ ಕೈ-ಕೈ ಹಿಡಿದು ಸ್ನೇಹದಿಂದ ಶಾಲೆಗೆ ನಡೆದೆವು ಈಗ ವಿಧ್ಯೆ ಕಲಿತು, ಬುದ್ದಿ ಬಲಿತು ರಫೀ ಧರ್ಮದ ಹೆಸರಿನಲಿ ದ್ವೇಷ ಬೆಳೆಯಿತೆ ?
ಕವಯತ್ರಿಯ ಪರಿಚಯ:
ರಫೀಝಾ ವಿ.ಕೆ; ನನ್ನ ಊರು ಬಂಟ್ವಾಳ ತಾಲೂಕಿನ ವೀರಕಂಬ. ಈಗ ಕಲ್ಲಡ್ಕದ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದೇನೆ . ನನಗೆ ಬಾಲ್ಯದಿಂದಲೂ ಸಾಹಿತ್ಯವೆಂದರೆ ತುಂಬಾ ಇಷ್ಟ. ನನ್ನ ಚಿಕ್ಕಂದಿನಲ್ಲಿಯೇ ನಾನು ಕಥೆ-ಕವನಗಳನ್ನು ಬರೆಯುತ್ತಿದ್ದೇನೆ.
ಇದೀಗ ನಾನು ಅಬಾಬಿ ಎಂಬ ಹೊಸ ಕಾವ್ಯರೂಪಕವನ್ನು ಕಲಿತಿದ್ದೇನೆ. ಈ ಕಾವ್ಯರೂಪಕದಲ್ಲಿ ಏನೋ ಒಂದು ಹೊಸತನವು ನನಗೆ ಕಾಣಿಸಿತು. ಅಬಾಬಿ ಎನ್ನುವ ಹೆಸರೇ ನನಗೆ ಆಕರ್ಷಣೆಯನ್ನು ಉಂಟುಮಾಡಿತು. ಹಾಗಾಗಿ ನಾನೀಗ ಈ ಸುಂದರವಾದ ಅಬಾಬಿಯನ್ನು ಬರೆಯಲು ತೊಡಗಿರುವೆನು.
✒️ ರಫೀಝಾ ವಿ ಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.