ಎನ್ಐಟಿಕೆ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟ ಹತ್ತನೇ ದಿನಕ್ಕೆ
ಸುರತ್ಕಲ್ (www.vknews.in) ; ಟೋಲ್ ಗೇಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಹೋರಾಟವು ಬುಧವಾರ ಒಂಭತ್ತನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಮಧ್ಯರಾತ್ರಿ ಧರಣಿ ವೇದಿಕೆಗೆ ನುಗ್ಗಿದ ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ಬೈದು ಆಸಿಫ್ ಆಪದ್ಬಾಂಧವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಘಟನೆಯ ಬಗ್ಗೆ ಇಂದು ಮುಂಜಾನೆ ಘಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ಸಹಾಯಕ ಪೊಲೀಸ್ ಆಯುಕ್ತರು ಮಹೇಶ್ ಕುಮಾರ್ ಹಾಗೂ ಸುರತ್ಕಲ್ ಠಾಣೆಯ ವೃತ್ತ ನಿರೀಕ್ಷಕರು ಚಂದ್ರಪ್ಪ ಅವರುಗಳು ಘಟನಾ ಸ್ಥಳಕ್ಕೆ ಬಂದು ಆಸಿಫ್ ಅವರಿಂದ ದೂರು ಸ್ವೀಕರಿಸಿದರು.
ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ನಂದಿನಿ ನದಿಯಲ್ಲಿ ತೇಲುತ್ತಿದ್ದ ಶವವನ್ನು ಮೇಲೆತ್ತಿ ಮಾನವೀಯತೆ ಮೆರೆದಿದ್ದಾರೆ
ಮಂಗಳಮುಖಿಯರ ದಾಂಧಲೆಯನ್ನು ಖಂಡಿಸಿ ಸಾಯಂಕಾಲದ ವಿಭಿನ್ನ ಕಾರ್ಯಕ್ರಮದಲ್ಲಿ ಎದೆ ಮೇಲೆ ಕಲ್ಲುಗಳನ್ನು ಇಟ್ಟು ವಿಶಿಷ್ಟವಾಗಿ ಪ್ರತಿಭಟಿಸಲಾಯಿತು
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕಲ್ಯಾಣ್, ಸಾಡ್’ ಇದರ ಕಾರ್ಯದರ್ಶಿ ಹಾಗೂ ಉದ್ಯಮಿ ಚಂದ್ರಕಾಂತ್ ಶೆಟ್ಟಿ ಹಾಗು ಅವರ ಬಳಗ ಆಸಿಫ್ ಅವರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಗುರ್ಡ್ಸ್ ಟೆಂಪೋ ಮಾಲಕರು ಮತ್ತು ಚಾಲಕರ ಸಂಘ ಮಂಗಳೂರು ಇದರ ಅಧ್ಯಕ್ಷರು ಕೆ.ಮಹಮ್ಮದ್ ಸಿರಾಜ್ ಹಾಗೂ ಸದಸ್ಯರು, ಉಡುಪಿ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರು ಅಬ್ದುಲ್ ಮುತ್ತಲಿಬ್ ವಂಡ್ಸೆ, ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಳೆಯಂಗಡಿ ಇಂದರ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ, ಹಿರಿಯ ಹೋರಾಟಗಾರರ ಪುರಂದರ ಕೋಟ್ಯಾನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾದರು.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.