ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಮನೆಯ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಪೋಟಗೊಂಡು ಆರ್ ಎಸ್ ಎಸ್ ಕಾರ್ಯಕರ್ತನಿಗೆ ಗಂಭೀರ ಗಾಯವಾದ ಘಟನೆ ಬುಧವಾರ ಸಂಜೆ 6:30 ಕ್ಕೆ ನಡೆದಿದೆ. ಗಾಯಗೊಂಡವನನ್ನು ಮಣಿಯೂರು ಚೇರಂಡೂರಿನ ಹರಿಪ್ರಸಾದ್ (30) ಎಂದು ಗುರುತಿಸಲಾಗಿದೆ.
ಹರಿಪ್ರಸಾದ್ ಅವರ ಎರಡು ಅಂಗೈಗಳು ಸ್ಫೋಟದಲ್ಲಿ ಚೂರುಚೂರಾಗಿವೆ. ದೇಹದಾದ್ಯಂತ ಗಾಯಗೊಂಡ ಅವರನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಡಕರ ಮತ್ತು ಪಯೋಲಿಯ ಪೊಲೀಸರು ಸ್ಥಳ ಶೋಧಿಸಿ, ಟೆರೇಸ್ ನಲ್ಲಿ ಎರಡು ದೊಡ್ಡ ಊಲಾ ಪಟಾಕಿಗಳು, ತೈಲ ಪಟಾಕಿಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಮದ್ದುಗುಂಡುಗಳನ್ನು ಸಂಗ್ರಹಿಸುವಾಗ ಮತ್ತು ಎಲೆಗಳನ್ನು ಬಿಚ್ಚಿ ಬಾಂಬ್ ಗಳನ್ನು ತಯಾರಿಸುವಾಗ ಅವಘಡ ಸಂಭವಿಸಿದೆ. ಹರಿಪ್ರಸಾದ್ ಅವರನ್ನು ವಿವರವಾಗಿ ಪ್ರಶ್ನಿಸಿದರೆ ಮಾತ್ರ ಇದರ ಹಿಂದೆ ಇರುವ ಶಕ್ತಿಗಳ ಬಗ್ಗೆ ವಿವರಗಳು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.