ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ): ತಾಲ್ಲೂಕಿನ ಚಲ್ಡಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿದೇವಮ್ಮ ಚುನಾಯಿತರಾಗಿದ್ದಾರೆ .
ಹಿಂದಿನ ಅಧ್ಯಕ್ಷೆ ರವಣಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು . ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೮ ಸದಸ್ಯರಿದ್ದು , ವಿಜೇತ ಅಭ್ಯರ್ಥಿ ಲಕ್ಷ್ಮಿದೇವಮ್ಮ ೧೦ ಮತಗಳನ್ನು ಪಡೆದುಕೊಂಡಿದ್ದಾರೆ. ಅವರ ಪ್ರತಿಸರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿ ದೇವಿ ೭ ಮತಗಳನ್ನು ಪಡೆದುಕೊಂಡಿದ್ದಾರೆ . ೧ ಮತ ತಿರಸ್ಕೃತಗೊಂಡಿದೆ. ಚುನಾವಣಾಧಿಕಾರಿ ಎನ್.ನಾರಾಯಣಸ್ವಾಮಿ , ಸಹಾಯಕ ಚುನಾವಣಾಧಿಕಾರಿ ಕೃಷ್ಣ , ಪಿಡಿಒ ಸವಿತ ಇದರು .
ಚುನಾವಣೆ ಬಳಿಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ವಿಜಯೋತ್ಸವ ಆಚರಿಸಿದರು . ಮುಖಂಡರಾದ ವೆಂಕಟರಾಮರೆಡ್ಡಿ , ಬೈರೆಡ್ಡಿ , ಒ.ಎಂ.ನಾರಾಯಣಸ್ವಾಮಿ , ಗಿರಿಯಪ್ಪ , ಶ್ರೀನಿವಾಸ್ , ಶ್ರೀನಿವಾಸರೆಡಿ ಇದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.