ಗಂಡನ ಎದೆಗೆ ಚುಚ್ಚಿದ ಎರಡು ಗುಂಡುಗಳು ಸಾವಿಗೆ ಕಾರಣವಾದ್ದವು..
(ವಿಶ್ವ ಕನ್ನಡಿಗ ನ್ಯೂಸ್) : ಹೌ ಟು ಕಿಲ್ ಯುವರ್ ಹೆಸ್ಬೆಂಡ್ ಎಂಬ ತಲೆಬರಹದ ಲೇಖನ ಬರೆದಿದಿದ್ದ ಲೇಖಕಿಯೋರ್ವರು ತನ್ನ ಗಂಡನನ್ನು ಕೊಲೆ ಮಾಡಿದ ತಪ್ಪಿತಸ್ಥಳೆಂದು ಸಾಬೀತಾಗಿದೆ. ಈ ಘಟನೆ ಪೋರ್ಟ್ ಲ್ಯಾಂಡ್ ನಲ್ಲಿ ನಡೆದಿದೆ. ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ (71) ತನ್ನ ಪತಿಯನ್ನು ಗುಂಡಿಕ್ಕಿ ಕೊಂದಿದ್ದಾಳೆ.
ಏಳು ಮಹಿಳೆಯರು ಮತ್ತು ಐದು ಪುರುಷರನ್ನು ಒಳಗೊಂಡ ನ್ಯಾಯಾಲಯದ ತೀರ್ಪುಗಾರರು ನ್ಯಾನ್ಸಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು. ಜೂನ್ 2, 2018 ರಂದು, ನ್ಯಾನ್ಸಿಯ ಪತಿ ಡೇನಿಯಲ್ ಬ್ರೋಫಿ (63) ಅವರನ್ನು ಕೊಲ್ಲಲಾಯಿತು. ನೈಋತ್ಯ ಪೋರ್ಟ್ಲ್ಯಾಂಡ್ನ ಪಾಕಶಾಲೆ ಇನ್ಸ್ಟಿಟ್ಯೂಟ್ನಲ್ಲಿ ಡೇನಿಯಲ್ ಬಾಣಸಿಗನಾಗಿದ್ದರು. ಅದೇ ಸಂಸ್ಥೆಯಲ್ಲಿ ಈ ಕೊಲೆ ನಡೆದಿದೆ.
ವರದಿಗಳ ಪ್ರಕಾರ, ಡೇನಿಯಲ್ ಬೆನ್ನಿಗೆ ಗುಂಡು ಹಾರಿಸಲಾಯಿತು. ಅವರ ಎದೆಗೆ ಚುಚ್ಚಿದ ಎರಡು ಗುಂಡುಗಳು ಸಾವಿಗೆ ಕಾರಣವಾಗಿವೆ. ದೇಹವನ್ನು ಮೊದಲು ಸಂಸ್ಥೆಯ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಗುರುತಿಸಿದ್ದರು. ಏತನ್ಮಧ್ಯೆ, ನ್ಯಾನ್ಸಿಯ ವಕೀಲರು ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಈ ಹಿಂದೆ ನ್ಯಾನ್ಸಿ ತನ್ನ ಗಂಡನನ್ನು ಕೊಲ್ಲುವುದು ಹೇಗೆ ಎಂಬ ಲೇಖನವನ್ನು ಬರೆದಿದ್ದಳು. ತೀರ್ಪಿನ ನಂತರ ಲೇಖನದ ಕೆಲವು ಭಾಗಗಳು ಸಹ ಸುದ್ದಿಯಲ್ಲಿವೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಡೇನಿಯಲ್ ಹತ್ಯೆಯ ನಂತರ ನ್ಯಾನ್ಸಿಯ ಕಾರನ್ನು ಹೋಲುವ ಟೊಯೊಟಾ ಮಿನಿವ್ಯಾನ್ ಘಟನಾ ಸ್ಥಳದಲ್ಲಿ ಕಂಡುಬಂದಿದೆ. ನ್ಯಾನ್ಸಿ ಆನ್ ಲೈನ್ ನಲ್ಲಿ ಒಂದು ಬಂದೂಕನ್ನು ಖರೀದಿಸಿದ್ದಳು ಎಂದು ನಂತರದ ತನಿಖೆಯಿಂದ ತಿಳಿದುಬಂದಿದೆ. ಇದನ್ನು ಬಳಸಿಕೊಂಡು ಆಕೆಯ ಪತಿಯನ್ನು ಕೊಲ್ಲಲಾಗಿದೆ ಎಂದು ಪೊಲೀಸರು ಕಂಡುಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.