ವಿಶ್ವ ಸಿಕಲ್ ಸೆಲ್ ಡಿಸೀಸ್ ದಿನ: ರಾಜ್ಯದಲ್ಲಿ SCD ಜಾಗೃತಿ ಕುರಿತು ತಜ್ಞರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ..
ಬೆಂಗಳೂರು, (www.vknews.in): ಸಿಕಲ್ ಸೆಲ್ ಡಿಸೀಸ್ (SCD), ಒಂದು ಅನುವಂಶಿಕವಾದ ರಕ್ತದ ಕಾಯಿಲೆಯಾಗಿದ್ದು, ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಸವಾಲಾಗಿ ಉಳಿದಿದೆ. ಮಧ್ಯಂತರ ಅವಧಿಗಳಲ್ಲಿ ಪದೇ ಪದೇ ನಿತ್ರಾಣಗೊಳಿಸುವ ನೋವಿನ ಗುಣಲಕ್ಷಣಗಳನ್ನು ಹೊಂದಿದ್ದು, ನ್ಯುಮೋನಿಯಾ, ರಕ್ತದ ಹರಿವಿನ ಸೋಂಕುಗಳು, ಪಾಶ್ರ್ವವಾಯು ಮತ್ತು ದೀರ್ಘಕಾಲದ ತೀವ್ರತರ ನೋವು ಸೇರಿದಂತೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. SCD ಯ ಅತಿ ಹೆಚ್ಚು ತೊಂದರೆಗಳಲ್ಲಿ ನೈಜೀರಿಯಾದ ನಂತರ ಭಾರತವು ಎರಡನೇ ಸ್ಥಾನದಲ್ಲಿವೆ ಎಂದು ಅಂದಾಜಿಸಲಾಗಿದೆ – ಬುಡಕಟ್ಟು ಜನಾಂಗದಲ್ಲಿ 18 ಮಿಲಿಯನ್ SCT ಮತ್ತು 1.4 ಮಿಲಿಯನ್ SCD ರೋಗಿಗಳು ಇರಬಹುದು ಎಂದು ಅಂದಾಜಿಸಲಾಗಿದೆ .
ಬುಡಕಟ್ಟು ವ್ಯವಹಾರಗಳ ಸಚಿವಾಲಯದ (MoTA) ಪ್ರಕಾರ, ಪರಿಶಿಷ್ಟ ಪಂಗಡಗಳಲ್ಲಿ 86 ಜನರಲ್ಲಿ ಒಬ್ಬರಿಗೆ SCD ಇದೆ. ಈ ಹೆಚ್ಚುತ್ತಿರುವ ಹೊರೆಯನ್ನು ಗುರುತಿಸಿ, ಬುಡಕಟ್ಟು ಪ್ರದೇಶಗಳಲ್ಲಿ ರೋಗಿಗಳು ಮತ್ತು ಆರೋಗ್ಯ ಸೇವೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು MoTA ಸಿಕಲ್ ಸೆಲ್ ಡಿಸೀಸ್ ಸಪೋರ್ಟ್ ಕಾರ್ನರ್ ಅನ್ನು ಸ್ಥಾಪಿಸಿದೆ. ಕರ್ನಾಟಕದಲ್ಲಿ, ರಾಜ್ಯ ಸರ್ಕಾರವು ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ರಾಜ್ಯದ ರಕ್ತಹೀನತೆಯ ಹೊರೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಪ್ರಾರಂಭಿಸಿದೆ. ಇಂತಹ ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಸಹಾಯಧನ ನೀಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರದ ಉಪಕ್ರಮಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯವು ಪೂರ್ವಭಾವಿಯಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ವೈದ್ಯಕೀಯ ಶಿಕ್ಷಣಸಂಸ್ಥೆಗಳು ಸಹ ರೋಗದ ಅರಿವು ಮೂಡಿಸಲು ಸಹಾಯ ಮಾಡಿವೆ ಮತ್ತು SCD ಯನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ವೈದ್ಯರಿಗೆ ತಾಂತ್ರಿಕ ತರಬೇತಿಯನ್ನು ನೀಡಿವೆ.
ವಿಕ್ಟೋರಿಯಾ ಆಸ್ಪತ್ರೆಯ ಕ್ಲಿನಿಕಲ್ ಹೆಮಟಾಲಜಿಸ್ಟ್ ಮತ್ತು ಹೆಮಟೋ-ಆಂಕೊಲಾಜಿಸ್ಟ್ ಡಾ. ಮೀರಾ ವರದರಾಜನ್ ಹೀಗೆ ಹಂಚಿಕೊಂಡರು, “ಇಂದು ನಾವು ನಿರಂತರ ಪ್ರಯತ್ನಗಳಿಂದ ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡಬಹುದಾದ ಕಾಯಿಲೆಯೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ. ಕೆಲವು ನಿಯಮಗಳನ್ನು ಜಾರಿಗೆ ತಂದರೆ, ನಾವು ವಾಹಕಗಳನ್ನು ಮೊದಲೇ ಪತ್ತೆಹಚ್ಚಲು ಸಾಧ್ಯವಾಗುವುದಲ್ಲದೆ, ಸಲಹೆಯನ್ನು ನೀಡುವುದರೊಂದಿಗೆ ರೋಗವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಡುವುದನ್ನು ತಡೆಯಬಹುದು. ಕೇಂದ್ರ ಸರ್ಕಾರ ಮತ್ತು ರಾಜ್ಯವು ಸ್ಕ್ರೀನಿಂಗ್ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದರೂ, ಪರಿಸ್ಥಿತಿಯ ಕುರಿತು ಇನ್ನೂ ಹೆಚ್ಚಿನ ಜಾಗೃತಿಯ ಅಗತ್ಯವಿದೆ. ಸರಳವಾದ ರಕ್ತ ಪರೀಕ್ಷೆಯು ಹಿಮೋಗ್ಲೋಬಿನ್ನಲ್ಲಿನ ಈ ಸೂಚನೆಗಳನ್ನು ನಿರ್ಧರಿಸಬಹುದು, ಅದು ಸಿಕಲ್ ಸೆಲ್ ಡಿಸೀಸ್ ರಕ್ತಹೀನತೆಯ ಸೂಚಕಗಳನ್ನು ಗುರುತಿಸುತ್ತದೆ. ಮತ್ತು ನವಜಾತ ಶಿಶುವಿನ ತಪಾಸಣೆಗಾಗಿ ಈ ರಕ್ತ ಪರೀಕ್ಷೆಯನ್ನು ನಿಯಮಿತ ಭಾಗವಾಗಿ ಮಾಡಬಹುದಾದರೂ, ಅದೇ ಪರೀಕ್ಷೆಯನ್ನು ವಯಸ್ಕರಿಗೂ ಸಹ, ವಿಶೇಷವಾಗಿ ಮದುವೆಗೆ ಮೊದಲೇ ಮಾಡಬಹುದು. ”
ವಾಸೊ-ಆಕ್ಲೂಸಿವ್ ಕ್ರೈಸಿಸ್ (VOC) ಕುಡಗೋಲು ಎನ್ನುವುದು ಸಿಕಲ್ ಸೆಲ್ ಡಿಸೀಸ್ ನ ಸಾಮಾನ್ಯ ತೊಡಕಾಗಿದ್ದು, ದೇಹದ ಒಂದು ಭಾಗದಲ್ಲಿನ ರಕ್ತನಾಳಗಳು ಕೆಂಪು ಸಿಕಲ್ ರಕ್ತ ಕಣಗಳಿಂದ ಮುಚ್ಚಿಕೊಂಡಾಗ ಸಂಭವಿಸುತ್ತದೆ. VOC ಒಂದು ವಾರದವರೆಗೆ ಇರಬಹುದಾದ ಅಸಹನೀಯ ನೋವು, ರಕ್ತಹೀನತೆ, ಅಂಗಾಂಗ ಹಾನಿ ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಈ ನೋವಿನ ಅವಧಿಗಳ ಆವರ್ತನವನ್ನು ಊಹಿಸಲು ಕಷ್ಟವಾಗುತ್ತದೆ ಮತ್ತು ಇದು ರೋಗಿಯಿಂದ ರೋಗಿಗೆ ಬದಲಾಗುತ್ತದೆ. ಗಿಔಅ ರೋಗಿಗಳ ಮರಣ ಪ್ರಮಾಣದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ ಎಂದು ಕಂಡುಬಂದಿದೆ. ರೋಗಿಗಳು ಅನುಭವಿಸುತ್ತಿರುವ ಕೆಲವು ಸಮಸ್ಯೆಗಳಲ್ಲಿ ರಕ್ತಹೀನತೆ, ದುರ್ಬಲಗೊಂಡ ಗುಲ್ಮ ಕಾರ್ಯ, ಮತ್ತು ನ್ಯುಮೋಕೊಕಲ್ ಸೆಪ್ಸಿಸ್ನಂತಹ ದ್ವಿತೀಯಕ ಸೋಂಕುಗಳು ಸೇರಿವೆ. VOC ಗರ್ಭಿಣಿ ಮಹಿಳೆಯರ ಮೇಲೆ ಕೂಡಾ ಗಮನಾರ್ಹ ಪರಿಣಾಮ ಬೀರುತ್ತಿದ್ದು, ಅವರು ಸದಾ ರಕ್ತಹೀನತೆಯಿಂದ ಬಳಲುತ್ತಾರೆ.
SCD ಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, ಹೈಡ್ರಾಕ್ಸಿಯುರಿಯಾವನ್ನು ರೋಗಿಗಳಿಗೆ ನೀಡಲಾಗುತ್ತದೆ. ಸೋಂಕುಗಳನ್ನು ಎದುರಿಸಲು ಶಿಫಾರಸು ಮಾಡಲಾಗುವ ಇತರ ಚಿಕಿತ್ಸೆಗಳಲ್ಲಿ ಆಂಟಿಬಯೋಟಿಕ್ಗಳು ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ವಿಟಮಿನ್ ಪೂರಕಗಳು ಸೇರಿವೆ.
SCD ಅನ್ನು ನಿಭಾಯಿಸುವಲ್ಲಿ ಸಮಯೋಚಿತ ಪತ್ತೆ, ಸ್ಕ್ರೀನಿಂಗ್ ಮತ್ತು ಸೂಕ್ತವಾದ ಚಿಕಿತ್ಸೆಗಳು ದೊಡ್ಡ ಸವಾಲುಗಳಾಗಿವೆ. ಆರೈಕೆಯ ಸಮಗ್ರ ಮಾದರಿಯ ಅಗತ್ಯದ ಕುರಿತು, NASCOದ ನ್ಯಾಷನಲ್ ಅಲಯನ್ಸ್ ಆಫ್ ಸಿಕಲ್ ಸೆಲ್ ಆರ್ಗನೈಸೇಷನ್ನ ಕಾರ್ಯದರ್ಶಿ ಗೌತಮ್ ಡೋಂಗ್ರೆ ಹೇಳುತ್ತಾರೆ, “ನಾವು SCD ಯ ಆರೈಕೆಯ ಮಾದರಿಯನ್ನು ಮರು-ರೂಪಿಸಬೇಕಾಗಿದೆ. ರೋಗಿಗಳೊಂದಿಗೆ ವ್ಯವಹರಿಸುವ ನನ್ನ ಅನುಭವದಲ್ಲಿ, ಸರಿಯಾದ ಮತ್ತು ಸಮಯೋಚಿತವಾದ ಚಿಕಿತ್ಸೆಯು ಸಾಮಾನ್ಯ ಜೀವಿತಾವಧಿ ಮತ್ತು ರೋಗಿಗಳಿಗೆ ಸುಮಾರು 70-80% ವರ್ಧಿತ ಜೀವನ ಗುಣಮಟ್ಟಕ್ಕೆ ಕಾರಣವಾಗಿದೆ. ಸಕಾಲಿಕ, ಸಮಗ್ರ ಮತ್ತು ಸೂಕ್ತವಾದ ಚಿಕಿತ್ಸೆಯು ಅತ್ಯಂತ ಮಹತ್ವದ್ದಾಗಿದೆ. ಇದಕ್ಕಾಗಿ, ನಾವು ಕೊನೆಯ ಮೈಲಿಯ ಸಂಪರ್ಕವನ್ನು ಮತ್ತು ಆರೋಗ್ಯ ಮಾದರಿಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು. ದೇಶದ ಕೆಲವು ದೂರದ ಭಾಗಗಳಲ್ಲಿ ಸುಧಾರಿತ ಆರೈಕೆ ಸೇವಾ ಮಾದರಿಗಳ ವಿತರಣೆ ಮತ್ತು ಅಗತ್ಯತೆಗಳನ್ನು ಪೂರೈಸಲು ಉತ್ಕೃಷ್ಟತೆಯ ಕೇಂದ್ರಗಳನ್ನು ಸಕ್ರಿಯವಾಗಿ ಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಆರೋಗ್ಯ ಸಚಿವಾಲಯ ಮತ್ತು ಬುಡಕಟ್ಟು ಸಚಿವಾಲಯವು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಕ್ರಿಯ ಕ್ರಮಗಳನ್ನು ಕೈಗೊಂಡಿದ್ದರೂ, ಆರೋಗ್ಯ ವೃತ್ತಿಪರರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ಕೌಶಲ್ಯಕ್ಕೆ ಒತ್ತು ನೀಡುವ ಅಗತ್ಯವಿದೆ. ಆ ಮೂಲಕ ಅವರು SCD ಅನ್ನು ಗುರುತಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು. ”
SCD ನಿರ್ವಹಣೆಗೆ ಸಮಗ್ರ ಆರೈಕೆ ಮಾದರಿ ಮತ್ತು ಬಹು-ವಿಭಾಗೀಯ ವಿಧಾನದ ಅಗತ್ಯವಿದ್ದು, ಅಲ್ಲಿ ಭಾರತದಲ್ಲಿನ ಸಿಕಲ್ ಸೆಲ್ ಡಿಸೀಸ್ನ ರೋಗಿಗಳ ಅಗತ್ಯತೆಗಳನ್ನು ಪೂರೈಸಲು ಪರಿಸರ ವ್ಯವಸ್ಥೆಯಲ್ಲಿನ ಎಲ್ಲಾ ಪಾಲುದಾರರು ಒಟ್ಟುಗೂಡುತ್ತಾರೆ ಮತ್ತು ಪ್ರಯತ್ನಗಳನ್ನು ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತಾರೆ. SCD ಯನ್ನು ಒಂದು ಆರೋಗ್ಯ ಸಮಸ್ಯೆಯಾಗಿ ನಿಭಾಯಿಸಲು, ಭಾರತವು – 2018 ರಲ್ಲಿ ಹಿಮೋಫಿಲಿಯಾ ಮತ್ತು ಥಲಸ್ಸೆಮಿಯಾ ಜೊತೆಗೆ ಸಿಕಲ್ ಸೆಲ್ ಡಿಸೀಸ್ ಅನ್ನು ಹೊಂದಿರುವ ಹಿಮೋಗ್ಲೋಬಿನೋಪತಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಕುರಿತು ಮಾರ್ಗಸೂಚಿಗಳನ್ನು ವಿವರಿಸುವ ರಾಷ್ಟ್ರೀಯ ಮಟ್ಟದ ನೀತಿಯನ್ನು ರಚಿಸಿದೆ. ಈ ನೀತಿಯನ್ನು ಇನ್ನೂ ಜಾರಿಗೆ ತಂದಿಲ್ಲ ಮತ್ತು ಪರಿಷ್ಕೃತ ಆವೃತ್ತಿಯಲ್ಲಿ ಕೆಲಸ ಮಾಡಲು ಸರ್ಕಾರವು ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ. ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಂಡ ಬಳಿಕ ಇದನ್ನು ರಾಜ್ಯಮಟ್ಟದಲ್ಲಿ ಅಳವಡಿಸಿಕೊಳ್ಳಬೇಕಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.