ಉಳ್ಳಾಲ (www.vknews.in) : ಉಳ್ಳಾಲ ತಾಲೂಕಿನ ಹಲವೆಡೆ ಜನವಸತಿ ಪ್ರದೇಶಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳು, ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳ ಬಗ್ಗೆ ಮೆಸ್ಕಾಂ ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಒತ್ತಾಯಿಸಿದ್ದಾರೆ.
ಮಳೆಗಾಲ ಆರಂಭವಾಗುವ ಮುಂಚೆಯೇ ಮೆಸ್ಕಾಂ ಸಿಬ್ಬಂದಿಗಳು ಮರಕ್ಕೆ ತಾಗಿ ಕೊಂಡಿರುವ ವಿದ್ಯುತ್ ತಂತಿಗಳನ್ನು ಗಮನಿಸಿ ಅಲ್ಲಿರುವ ಮರದ ಕೊಂಬೆಗಳನ್ನು ಕಡಿಯಲು ಮುಂದಾಗಬೇಕಿತ್ತು. ಅದು ಆಗದೇ ಇರುವ ಕಾರಣ ಮನೆ ಪಕ್ಕದ ಮರಕ್ಕೆ ತಾಗಿ ಕೊಂಡಿರುವ ವೈರ್ ತಗುಲಿ ದೇರಳಕಟ್ಟೆಯ ಇಲ್ಯಾಸ್ ಹರೇಕಳ ಎಂಬುವವರು ಮೃತಪಟ್ಟಿದ್ದಾರೆ. ಈ ದುರ್ಘಟನೆಗೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದ್ದು ಮೃತರಿಗೆ ಸೂಕ್ತ ಪರಿಹಾರವನ್ನೂ ಇಲಾಖೆ ನೀಡಬೇಕೆಂದು ಇರ್ಷಾದ್ ಅಜ್ಜಿನಡ್ಕ ಒತ್ತಾಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.