ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ದೇಶ ಕಂಡ ಅಪ್ರತಿಮ ಸಂಸದೀಯ ಪಟು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮರ್ಹೂಂ ಜಿ ಎಂ ಬನಾತ್ ವಾಲ ಸಾಹೇಬ್ ರವರ ಆನುಸ್ಮರಣಾ ಕಾರ್ಯಕ್ರಮ ಜರುಗಿತು.
ಅನುಸ್ಮರಣ ಭಾಷಣ ಮಾಡಿದ ಎ ಎಸ್ ಕೆರೀಂ ಕಡಬ ರವರು ದೇಶದ ಸಂಸತ್ತು ನಾಡಿನ ಸಮಸ್ಯೆಗಳ ಬಗ್ಗೆ ಗಹನವಾದ ಚರ್ಚೆಗಳ ತಾಣವಾಗ ಬೇಕಾಗಿದ್ದು ಆದರೆ ಇಂದು ಸ್ವೇಚಾಧಿಪತಿಗಳಾದ ಆಡಳಿತಗಾರರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ವೇದಿಕೆಯಾಗಿ ಪರಿವರ್ತನೆಗೈದು ಯಾವುದೇ ಗುಣಮಟ್ಟದ ಚರ್ಚೆಗಳು ಸಂಸತ್ತಿನಲ್ಲಿ ನಡೆಯದಿರುವುದು ಖೇದಕರವಾಗಿದೆ ಎಂದರು.
ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಸಮಾರಂಭದಲ್ಲಿ ಅಬ್ದುಲ್ ಖಾದರ್ ಜೆಪ್ಪು, ಮುಹಮ್ಮದ್ ಇಸ್ಮಾಯಿಲ್, ಪ್ರಸ್ಟೇಜ್ ಸ್ಕೂಲ್ ಕೌಂಸಿಲರ್ ಸಮೀರ್ ಅಹಮದ್ ಕುದ್ರೋಳಿ, ನೌಶಾದ್ ಮಲಾರ್,, ಕ್ಯಾಲಿಕಟ್ ಲ್ವಾ ಕಾಲೇಜು ವಿದ್ಯಾರ್ಥಿ, ಕಾಸರಗೋಡು ಜಿಲ್ಲಾ ಎಂ ಎಸ್ ಎಫ್ ಮಾಜಿ ಅಧ್ಯಕ್ಷೆ ಫಾತಿಮತ್ ಸಾಲಿಸ,ತ್ವಯಿಬ್ ಪೈಝಿ ಬೊಳ್ಳೂರು, ಫಯಾಝ್ ಜೊಕಟ್ಟೆ,ಹಾಜಿ ಮುಹಮ್ಮದ್ ಶರೀಫ್ ಜೊಕಟ್ಟೆ, ಶಬೀರ್ ಅಝ್ಹರಿ ಪಾಂಡವರಕಲ್ಲು ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಟಿ. ಯು. ಇಸ್ಮಾಯಿಲ್ ಬಿ. ಸಿ. ರೋಡ್ ಕಾರ್ಯದರ್ಶಿ ರಿಯಾಜ್ ಹರೇಕಳ ಸ್ವಾಗತಿಸಿದರು. ಇಸ್ರಾರ್ ಗೂಡಿನ ಬಳಿ ಕಾರ್ಯಕ್ರಮ ನಿರೂಪಿಸಿದರು, ನಿಝಾರ್ ಬೆಂಗರೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.