ಪುತ್ತೂರು (www.vknews.in) : ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗೊಳಪಟ್ಟ ಸಾಲ್ಮರ ಪ್ರೌಢಶಾಲೆಯ 2022-23 ನೆಯ ಸಾಲಿನ ವಿದ್ಯಾರ್ಥಿಗಳ ಮಂತ್ರಿ ಮಂಡಲ ರಚಿಸಲಾಯಿತು. ಪ್ರಜಾಪ್ರಭುತ್ವದ ಮಾದರಿಯಲ್ಲೇ ಚುನಾವಣೆ ನಡೆದು ನಾಯಕನಾಗಿ ಮುಹಮ್ಮದ್ ಮುಝಮ್ಮಿಲ್ (10 ನೇ ತರಗತಿ), ಉಪನಾಯಕನಾಗಿ ಮುಹಮ್ಮದ್ ಫಝಲ್ (9 ನೇ ತರಗತಿ) ಆಯ್ಕೆಯಾಗಿದ್ದಾರೆ.
ವಿರೊಧ ಪಕ್ಷದ ನಾಯಕಿಯಾಗಿ ಫಾತಿಮತ್ ಫರ್ಝಾನ (10 ನೇ ತರಗತಿ) ಆಯ್ಕೆಯಾಗಿದ್ದಾರೆ. ಮಂತ್ರಿ ಮಂಡಲವೂ ರಚನೆಯಾಗಿ 7 ಮಂದಿ ಸಂಪುಟ ದರ್ಜೆಯ ಮಂತ್ರಿಗಳು ಹಾಗೂ 7 ಜನ ಸಹಾಯಕ ದರ್ಜೆಯ ಮಂತ್ರಿಗಳಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹನಾಂಗಿ ಎನ್.ಡಿ.ಯವರ ನೇತೃತ್ವದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಈ ಚುನಾವಣಾ ಪ್ರಕ್ರಿಯೆ ನಡೆಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.