ಅಲಪ್ಪುಝ (ವಿಶ್ವ ಕನ್ನಡಿಗ ನ್ಯೂಸ್) : ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸ್ಕೂಟರ್ ಪಲ್ಟಿಯಾದ ಪರಿಣಾಮ ಮಂಗಳೂರಿನ ಯೆನಪೋಯ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ಫೌಜಿಯಾ ಹಕೀಂ (21) ಮೃತಪಟ್ಟಿದ್ದಾಳೆ.
ಈಕೆ ತ್ರಿಕುನ್ನಪುಳದ ಅಬ್ದುಲ್ ಹಕೀಂ ಮತ್ತು ನುಸ್ರತ್ ಎಂಬವರ ಪುತ್ರಿ. ಈಕೆ ಸಂಬಂಧಿ ತ್ರಿಕುನ್ನಪುಝಾದ ಬಶೀರ್ ಎಂಬವರ ಪುತ್ರ ಬಿ ಫೈಜ್ ಅಹಮ್ಮದ್ (21) ಗಾಯಗೊಂಡು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಗಳೂರಿನಿಂದ ರೈಲಿನಲ್ಲಿ ಅಲುವಾ ತಲುಪಿದ ಫೌಜಿಯಾ ಸ್ಕೂಟರ್ ನಲ್ಲಿ ಫೈಜ್ ನೊಂದಿಗೆ ಮನೆಗೆ ಬರುತ್ತಿದ್ದಳು. ಬೈಪಾಸ್ ನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವಾಗ, ಸ್ಕೂಟರ್ ನೀರಿಗೆ ಇಳಿದು ನಿಯಂತ್ರಣ ಕಳೆದುಕೊಂಡಿತು ಎಂದು ಫೈಜ್ ಪೊಲೀಸರಿಗೆ ತಿಳಿಸಿದ್ದಾನೆ. ಬೈಪಾಸ್ ನ ರೇಲಿಂಗ್ ಗೆ ಡಿಕ್ಕಿ ಹೊಡೆದ ನಂತರ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.