ಪ್ರಾರ್ಥನೆ (ಹಂದ್)
ನೀನೆ ನನ್ನ ದೈವ ನೀನೆ ನನ್ನ ದಾತ ನೀನೆ ವಿಶ್ವದ ಪ್ರಭು
ಪರಮ ದಯಾಳು, ಕರುಣಾನಿಧಿಯು ನಿರ್ಣಾಯಕ ದಿನದ ಅಧಿಪತಿಯು
ನಿನ್ನ ಸ್ನೇಹದಿಂದ ಅರಿತುಕೊಂಡೆ ಇಂದು ಸುತ್ತಮುತ್ತಲೆಲ್ಲವು ನಿನ್ನದೆ ಪ್ರಕಾಶವು
ತುಸು ಇತ್ತ ನೋಡು ತುಸು ಕರುಣೆ ತೋರು ನಿನ್ನ ಬಿಟ್ಟರೆ ನನಗೆ ಯಾರಿರುವರು ಹೇಳು
ಸದ್ಬುದ್ಧಿ ನೀಡು ಸನ್ಮಾರ್ಗ ತೋರು ಪಾಪವ ಅಳಿಸಿ ಅಪರಂಜಿ ಮಾಡು
ಎಲ್ಲರ ಹಣೆಯ ಬರಹಗಾರ ನೀನು ಬರೆ ನನ್ನ ವಿಧಿಯ ಸುವರ್ಣಶಾಯಿಯಲ್ಲಿ
ನಾನೊಬ್ಬ ಮನುಜ ದುಡುಕೋದು ಸಹಜ ತೋರು ನೀನೆ ದಾರಿಯು ನೀನೆ ನನ್ನ ದೀಪವು
ಕರ್ನಾಟಕ ನಾಡನು ಸಮೃದ್ಧಿಗೊಳಿಸು ಭಾರತ ದೇಶದ ಕೀರ್ತಿಯ ಬೆಳಗು
(ತುಮ್ಹಿ ಮೇರಿ ಮಂದಿರ್…ತುಮ್ಹಿ ಮೇರಿ ಪೂಜಾ… ಹಾಡಿನ ಟ್ಯೂನ್ ನಲ್ಲಿ…)
– ಜಬೀವುಲ್ಲಾ ಖಾನ್
ಮುಹಮ್ಮದ್(ಸ) ಪೈಗಂಬರ್ (ನಾತ್)
ಪ್ರವಾದಿ ಮುಹಮ್ಮದ್ ಹೆಸರೆ ಮಧುರ ಅವರ ನಮ್ಮ ಪ್ರೇಮ ಅಮರ ಎಲ್ಲೂ ನಿಮ್ಮ ಹೊಳಪು ಸ್ವಾಮಿ ನಮ್ಮ ಬಾಳು ಬೆಳಗಿ ಸ್ವಾಮಿ
ಸೂರ್ಯವೂ ಮರಳಿತು, ಚಂದ್ರವೂ ಹೋಳಾಯಿತು ಕಲ್ಲೂ ಮಾತು ಕೇಳಿತು, ಮೋಡ ನೆರಳು ನೀಡಿತು ನೀವು ಜಗದ ಪ್ರವಾದಿ ಸ್ವಾಮಿ ಪ್ರೇಮ ನಿಮ್ಮ ಭಾಷೆ ಸ್ವಾಮಿ
ಅಂಧಕಾರದ ಹೊತ್ತಲಿ, ಕ್ರೂರ ಜನರ ನಡುವಲಿ ಅಶಾಂತಿಯ ಊರಲಿ, ಭಯಭೀತಿಯ ಬದುಕಲಿ ಜನಿಸಿ ನಮ್ಮ ಪ್ರವಾದಿ ಸ್ವಾಮಿ ಶಾಂತಿ ತಂದ ಮಹಾತ್ಮ ಸ್ವಾಮಿ
ಅನಾಥರ ಆಸರೆ, ಬಡಬಗ್ಗರ ಸ್ನೇಹಿತ ಬಲಹೀನರ ಸೇವಕ, ಪೀಡಿತರ ರಕ್ಷಕ ಸತ್ಯ ವಾದಿ ಪ್ರವಾದಿ ಸ್ವಾಮಿ ನ್ಯಾಯ ಕೊಟ್ಟ ಧೀಶ ಸ್ವಾಮಿ
(ತೆರಾ ಮೇರಾ ಪ್ಯಾರ್ ಅಮರ್ ಹೈ…. ಹಾಡಿನ ಟ್ಯೂನ್ ನಲ್ಲಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.