ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚೆಗೆ ಕೇರಳದಲ್ಲಿ ನಡೆದ ನರಬಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಕುಟುಂಬದ ಏಳಿಗೆಗಾಗಿ ಪತಿ-ಪತ್ನಿ ಮತ್ತೊಬ್ಬರ ಸಹಾಯದಿಂದ ಇಬ್ಬರು ಮಹಿಳೆಯರ ನರಬಲಿ ಮಾಡುತ್ತಿದ್ದರು. ಇದೀಗ ಮತ್ತೊಂದು ನರಬಲಿ ಯತ್ನದ ಸುದ್ದಿ ಬಂದಿದೆ. ಮೃತ ತಂದೆಯನ್ನು ಬದುಕಿಸಲು ಯುವತಿಯೊಬ್ಬಳು ತನ್ನ 2 ತಿಂಗಳ ಮಗುವನ್ನು ಬಲಿ ಕೊಡಲು ಯತ್ನಿಸುತ್ತಿದ್ದಳು.
ದಕ್ಷಿಣ ದೆಹಲಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಮಹಿಳೆ ನರಬಲಿ ಮಾಡಲು ಮುಂದಾದಾಗ ಪೊಲೀಸರು ಸಮಯಕ್ಕೆ ಸರಿಯಾಗಿ ಮಧ್ಯ ಪ್ರವೇಶಿಸಿ ಮಗುವನ್ನು ರಕ್ಷಿಸಿದ್ದಾರೆ. ಮೃತ ತಂದೆಯನ್ನು ಬದುಕಿಸಲು ಯುವತಿ ಮಗುವನ್ನು ತೆಗೆದುಕೊಂಡಿದ್ದಾಳೆ. ಮಗುವನ್ನು ಬಲಿ ಕೊಟ್ಟರೆ ತಂದೆಯನ್ನು ಬದುಕಿಸಬಹುದು ಎಂದು ಯಾರೋ ಯುವತಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಮೂಢನಂಬಿಕೆಯಿಂದ ಯುವತಿ ನರಬಲಿ ನಡೆಸಲು ಮುಂದಾಗಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ಅಪರಾಧ ಮಾಡುವ ಮುನ್ನ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ತಾನು ನರಬಲಿ ಮಾಡಲು ಯತ್ನಿಸಿದ್ದಾಗಿ ಮಹಿಳೆಯೂ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಅಪಹರಣಕ್ಕೊಳಗಾಗಿದ್ದ ಮಗುವನ್ನು 24 ಗಂಟೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ದಂಪತಿಗಳು ಮತ್ತು ಅವರ ಸಹಾಯಕರು ಕೊಂದಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.