ಹೈದರಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಕಾರು, ಬೈಕ್ ಮತ್ತು ಇತರ ವಾಹನಗಳನ್ನು ದೇವಾಲಯಕ್ಕೆ ತಂದು ಪೂಜೆ ಮಾಡಿಸುತ್ತಾರೆ. ಆದರೆ ತೆಲಂಗಾಣದ ಉದ್ಯಮಿ ಹೈದರಾಬಾದ್ನ ಪ್ರತಿಮಾ ಗ್ರೂಪ್ನ ಮಾಲೀಕರಾಗಿರುವ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ತಾವು ಖರೀದಿ ಮಾಡಿದ ಹೊಸ ಹೆಲಿಕಾಪ್ಟರ್ಗೆ ದೇವಾಲಯದಲ್ಲಿ ಪೂಜೆ ಮಾಡಿಸಿ ಸುದ್ದಿಯಾಗಿದ್ದಾರೆ.
ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ಏರ್ಬಸ್ ಎಸಿಹೆಚ್-135ಕ್ಕೆ ಪೂಜೆ ಮಾಡಿಸಿದ್ದಾರೆ. ಸುಮಾರು 47.15 ಕೋಟಿ ರೂ. ಮೊತ್ತದ ಹೆಲಿಕಾಪ್ಟರ್ಗೆ ಪೂಜೆ ಮಾಡಿಸಲು ಹೈದರಾಬಾದ್ನಿಂದ 100 ಕಿ. ಮೀ. ದೂರದಲ್ಲಿರುವ ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದರು. ಈ ಪೂಜೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.