(ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಇಟಾವಾದಲ್ಲಿ ವಧು ಮದುವೆಯ ಸ್ಥಳದಿಂದ ವರ ಕಪ್ಪಗಿದ್ದಾನೆ ಎಂದು ಹೇಳಿ ಮದುವೆಯಿಂದ ಹೊರನಡೆದ ಘಟನೆ ನಡೆದಿದೆ. ಮನೆಯವರು ತನಗೆ ವರ ಎಂದು ಪರಿಚಯಿಸಿದ ಯುವಕ ಇವನಲ್ಲ, ಆತನ ಬಣ್ಣ ತನಗೆ ಇಷ್ಟವಿಲ್ಲ ಎಂದು ವಧು ನೀತಾ ಯಾದವ್ ಮದುವೆ ಮಂಟಪದಿಂದ ನಿರ್ಗಮಿಸಿದ್ದಾಳೆ.
ಮಂಟಪಕ್ಕೆ ಹಿಂತಿರುಗುವಂತೆ ಸಂಬಂಧಿಕರು ಮತ್ತು ಸ್ನೇಹಿತರು ಹಲವಾರು ಬಾರಿ ಮನವಿ ಮಾಡಿದರೂ ಹುಡುಗಿ ಹಿಂತಿರುಗಲು ನಿರಾಕರಿಸಿದರು. ಅಂತಿಮವಾಗಿ, ಆರು ಗಂಟೆಗಳ ಕಾಯುವಿಕೆಯ ನಂತರ, ವರ ಮತ್ತು ಅವರ ಕುಟುಂಬದವರು ಮದುವೆಯಿಂದ ಹಿಂದೆ ಸರಿಯಲು ಸಿದ್ಧರಾದರು.
ನಂತರ ಮದುವೆಗೂ ಮುನ್ನ ವಧುವಿಗೆ ಉಡುಗೊರೆಯಾಗಿ ನೀಡಿದ್ದ ಲಕ್ಷ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಾಪಸ್ ನೀಡಿಲ್ಲ ಎಂದು ವರನ ತಂದೆ ಯುವತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.