(ವಿಶ್ವ ಕನ್ನಡಿಗ ನ್ಯೂಸ್) : ಮುಸ್ಲಿಂ ಸಮುದಾಯ, ಇದರ ನಿಯಮ ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸದೆ ಇದ್ದರೆ ಮುಂದಿನ ಯುವ ಭವಿಷ್ಯದ ಪಾಡೇನು..? ಅಲ್ಲಾಹನ ವಿಧಿಯ ಪ್ರಕಾರ ಸರ್ವಸ್ವವು, ಸರ್ವ ಜಗವು, ಸರ್ವ ನಿಯಮವು, ಸರ್ವ ಮನಕುಲವು, ಸರ್ವ ಅಧಿಕಾರ ವರ್ಗವು, ಸರ್ವ ಜನಾಂಗದ ಮೇಲುಕೀಲು ಎಂಬ ಕೀಳರಿಮೆ ಜಗದಲ್ಲೇ ಇಲ್ಲ ಎನ್ನುವ ಏಕ ಮುಖ ಅಲ್ಲಾಹನಾನೆ ಸತ್ಯ, ಮನುಷ್ಯ ಮತ್ತು ಮಾನವೀಯತೆಯ ಮದ್ಯೆ ಇನ್ನೊಂದು ಪಂಗಡವಿಲ್ಲ ಕಪ್ಪು ಬಿಳಿಪು ಎನ್ನುವ ವರ್ಣಭೇದವಿಲ್ಲ ಜಗತ್ತಿನಲ್ಲಿ ಒಂದೇ ವಿಶ್ವಾಸ ಅದು ಮನುಷ್ಯ ಸ್ನೇಹ ಅಲ್ಲಾಹನು ಕೊಟ್ಟಂತಹ ಮನುಷ್ಯ ಶರೀರ ಅದರಲ್ಲಿ ಗಂಡು, ಮತ್ತು ಹೆಣ್ಣು.
ಕೆಲವೊಂದು ಅಲ್ಲಾಹನು ನಮ್ಮನ್ನು ಪರೀಕ್ಷಿಸಲು ಮತ್ತು ನಮಗೆ ಅದನ್ನು ನೋಡಿ ಸರಿದಾರಿಯಲ್ಲಿ ಸಾಗಲು ಒಂದಷ್ಟು ಜನರನ್ನು ಈ ಲೋಕದಲ್ಲಿ ಇಟ್ಟಿದ್ದಾನೆ, ಅದರಲ್ಲಿ ಒಂದು ಮಂಗಳಮುಖಿ, ಅದು ಅವನ ಸೃಷ್ಟಿ, ಇನ್ನೊಂದು ಕಣ್ಣಿಲ್ಲದವರು, ಕಾಲಿಲ್ಲದವರು, ಕೈ ಇಲ್ಲದವರು, ಕಿವಿ ಇಲ್ಲದವರು, ಅಂಗಾಂಗ ವೈಕಲ್ಯ ಉಳ್ಳಂತಹ ಅಂಗವೈಕಲ್ಯ ಇರುವಂತಹ ಅಲ್ಲಾಹನದಾಸರು, ಇವರೆಲ್ಲ ಅಲ್ಲಾಹನ ಅತಿ ಪ್ರೀತಿ ಉಳ್ಳಂತಹ ಮತ್ತು ಅತಿ ಶ್ರೇಷ್ಠ ವರ್ಗದವರು. ಯಾಕಂತ ಹೇಳಿದರೆ ಇವರನ್ನು ನಮಗೆ ತೋರಿಸಲು ಅಲ್ಲಾಹನಿಟ್ಟ ಅವನ ಇಷ್ಟ ದಾಸರು. ಕಾರಣ ನನಗೆ ಉತ್ತಮ ಶರೀರವಿದೆ ನನ್ನ ಕಾಲು ಕೈ ಗಳು ಶರೀರಗಳು ನಾಲಿಗೆ ಕಿವಿ ಹೃದಯ ಇನ್ನೆಲ್ಲ ಇರುವಂತಹ ಅಂಗಾಂಗಗಳು ಎಲ್ಲರಿಗಿಂತಲೂ ಮಿಗಿಲಾಗಿ ದೃಢ ಸದೃಢವಾಗಿದೆ ನಾನೇಕೆ, ಕೀಲರಿಮೆಯನ್ನು ಕಾಣಬೇಕು,? ಅಲ್ಲಾಹನಾನೆ ಸತ್ಯ.
ಯಾ ರಹಮಾನ್ ರಹೀಮ್, ನೀನು ದೊಡ್ಡ ಕರುಣಾಮಯಿ ಇವತ್ತಿನ ದಿವಸ ಆಸ್ಪತ್ರೆಯಲ್ಲಿ ತನ್ನ ಕಿಡ್ನಿ ಸರಿ ಮಾಡಲಿಕ್ಕೋಸ್ಕರ ತನ್ನ ಹೃದಯದ ಕಾಯಿಲೆಯಿಂದ ಬಳಲುತ್ತಿರುವಂತಹ, ತನ್ನ ಲಿವರ್ ಕಾಯಿಲೆಯಿಂದ ಬಳಲುತ್ತಿರುವಂತಹ, ಜೀವದ ಅತ್ಯಮೂಲ್ಯ ಅಂಗಾಂಗಗಳನ್ನು ಕಳೆದುಕೊಂಡು, ಇದು ಇದ್ದರೆ ನಾನು ಸರಿಯಾಗುತ್ತಿದ್ದೆ, ನನಗೆ ಎಲ್ಲರಂತೆ ಎಲ್ಲವೂ ಸರಿ, ಇದಿದ್ದರೆ ನನ್ನ ಆರೋಗ್ಯ ಸರಿ ಆಗುತ್ತಿತ್ತು, ನಾನು ಚೆನ್ನಾಗಿ ಎಲ್ಲರಂತೆ ಬದುಕುತ್ತಿದ್ದೆ.
ಹೇ ಸಹೋದರ, ನೀನು ನಿನಗೆ ಕೊಟ್ಟಂತಹ ಗಂಡು ಎಂಬ ಪದವಿಯನ್ನು ಅಲ್ಲಾಹನ ಮುಂದೆ ಅದು ಕೂಡ ಅವನಿಗೆ ನೀನು ಮಾಡುವಂತಹ ಚಾಲೆಂಜ್,? ಅಂತಲೇ ಹೇಳಬಹುದು. ಇದು ಮಾಡಲು ನಿನಗೆ ಅವಕಾಶ ಕೊಟ್ಟದ್ದಾದರೂ ಯಾರು, ಇದಕ್ಕೆ ನಿನಗೆ ಅಲ್ಲಾಹನು ಮೆಚ್ಚನಾ?, ಇನ್ನೂ ಕಾಲ ಮಿಂಚಿಲ್ಲ ನನ್ನ ಸಹೋದರ ಇಲ್ಲಿ ನಾನು ಯಾವ ಧರ್ಮೀಯರ ವಿಷಯ ಮಾತನಾಡುವುದಿಲ್ಲ ಎಲ್ಲಾ ಧರ್ಮವು ಮಾನವ ಧರ್ಮ ಮನುಷ್ಯ ಧರ್ಮ ನಾವೆಲ್ಲರೂ ಮೊದಲು ಮಾನವರಾಗೋಣ,. ಸ್ನೇಹ ಬಾಂಧವರ ಆಗೋಣ,.
ನಮ್ಮ ಅಂಗಾಂಗಗಳನ್ನು ನಾವೇ ಕಿತ್ತೆಸೆದು ಇನ್ನೊಂದು ಎನ್ನುವಂತೆ ಬದುಕುವುದಕ್ಕಿಂತ ಲೇಸು, ಆ ಭಗವಂತ ಅಲ್ಲಾಹನು ಕೊಟ್ಟದ್ದು ಸಾಕು ಎಂದರೆ ಸಾಕಲ್ಲವೇ ಗೆಳೆಯ,? ನೋಡು ಅಲ್ಲಾಹನು ನಿನಗೆ ಇದಾಯತು ನೀಡಲಿ, ಬದಲಾಗು ಬದಲಾವಣೆ ಜಗದ ನಿಯಮ ಅದು ನಮ್ಮೆಲ್ಲರ ಆದರ್ಶವಾಗಲಿ, ತಿಳಿದದ್ದು ಬರೆದಿದ್ದೇನೆ, ತಿಳಿಯದ್ದು ತಿಳಿಸಿ, ನನ್ನನ್ನು ಪ್ರೋತ್ಸಾಹಿಸಿ, ತಪ್ಪಿದ್ದರೆ ಕ್ಷಮಿಸಿ..
✍️ ಆಸಿಫ್ ಆಪತ್ಬಾಂಧವ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.