(www.vknews.in) ಮಂಗಳೂರು ದಕ್ಷಿಣ ವಿ.ಸ. ಕ್ಷೇತ್ರದ ಉಪಾಧ್ಯಕ್ಷರಾದ ಇಝಾ ಬಜಲ್ ನೇತ್ರತ್ವದಲ್ಲಿ ಮತ್ತು ಮಂಗಳೂರು ದಕ್ಷಿಣ ವಿ.ಸ. ಕ್ಷೇತ್ರದ ಅಧ್ಯಕ್ಷರಾದ ಡಾ. ಸುಮತಿ ಎಸ್ ಹೆಗ್ಡೆರವರ ಅಧ್ಯಕ್ಷತೆಯಲ್ಲಿ ನೂತನ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಝೀಝ್ ಅಬ್ದುಲ್ಲಾ (ಮೈಸೂರು ಬಾವ )ರವರಿಗೆ ಗೌರವ ಸನ್ಮಾನ ನೆಡೆಯಿತು. ಈ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಝೀಝ್ ಮಲಾರ್ ,ರಾಜ್ಯ ಮೀನುಗಾರಿಕಾ ಅಧ್ಯಕ್ಷರಾದ ರತ್ನಾಕರ್ ಸುವರ್ಣ, ರಾಜ್ಯ ಸಂಘಟನ ಕಾರ್ಯದರ್ಶಿ ಝಮೀರ್ ಷಾ, ಜೆಡಿಎಸ್ ಮುಖಂಡರಾದ ಅಝೀಝ್ ಪರ್ತಿಪಾಡಿ ,ರಿಯಾಝ್ A1 ಕಣ್ಣೂರು , ವಿನ್ಸೆಂಟ್ ಪೀರೆರಾ, ಮಂಗಳೂರು ದಕ್ಷಿಣ ಮಹಿಳಾ ಘಟಕಾಧ್ಯಕ್ಷೆ ವೀಣಾ ಶೆಟ್ಟಿ, ಶಾಲಿನಿ ರೈ, ಶಾರದ ಶೆಟ್ಟಿ, ಪಯಾಝ್ ಬಜಾಲ್, ಅಬ್ದುಲ್ ಖಾದರ್ ಬಜಲ್, ಸೈಫ್ ಬಜಾಲ್, ಮನೋಜ್ ಕುಮಾರ್ ಬಜಾಲ್, ಯಾಕುಬ್ ಬಜಾಲ್, ಮುಸ್ತಫಾ ಬಜಾಲ್, ಕುಂಙಿ ಬಜಾಲ್, ಮಹಮ್ಮದ್ ಅಲ್ತಾಪ್ ತುಂಬೆ ,ಹಬೀಬ್ ರಹ್ಮಾನ್, ರಶೀದ್ ಮಂಗಳೂರು ಮತ್ತು ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂಧರ್ಭ ಜನಾಬ್ ಅಝೀಝ್ ಅಬ್ದುಲ್ಲಾಹ್ ಮಂಗಳೂರಿನ ಜೆಡಿಎಸ್ ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಚಾರದ ಬಗ್ಗೆ ಚರ್ಚಿಸಿ ಡಾ.ಸುಮತಿ ಎಸ್ ಹೆಗ್ಡೆಯವರಿಗೆ ಶುಭ ಹಾರೈಸಿದರು. ಈ ಸಂಧರ್ಭ ರಾಜ್ಯ ಸಂ.ಕಾರ್ಯದರ್ಶಿ ಝಮೀರ್ ಶಾ , ಮೀನುಗಾರಿಕಾ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ , ಅಝೀಝ್ ಮಲಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಲ್ತಾಫ್ ತುಂಭೆ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಪೆರೇರಾ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.