ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸುವುದಾಗಿ ಪಾಕಿಸ್ತಾನದ ಖ್ಯಾತ ನಟಿ ಅನಮ್ ಫಯಾಜ್ ಹೇಳಿದ್ದು, ಅವರು ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದ್ದಾರೆ.
ನಟಿ ಅನಮ್ ಫಯಾಜ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಿನಿ ರಂಗಕ್ಕೆ ಶಾಶ್ವತ ವಿದಾಯ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ”ಇದನ್ನು ಬರೆಯಲು ನನಗೆ ತುಂಬಾ ಕಷ್ಟವಾಗಿದೆ. ಏಕೆಂದರೆ ನನ್ನ ವೃತ್ತಿಜೀವನದಲ್ಲಿ ನೀವೆಲ್ಲರೂ ನನಗೆ ಸಾಕಷ್ಟು ಬೆಂಬಲ ನೀಡಿದ್ದೀರಿ. ಆದರೆ ನಾನು ಚಿತ್ರರಂಗವನ್ನು ತೊರೆಯಲೇಬೇಕಿದೆ. ಇಸ್ಲಾಮಿಕ್ ಮಾರ್ಗಗಳನ್ನು ಸಂಪೂರ್ಣವಾಗಿ ಸ್ವೀಕರಿಸಲು ನಿರ್ಧರಿಸಿರುವ ಕಾರಣ, ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ” ಎಂದು ಬರೆದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಬುರ್ಖಾ ಧರಿಸಿ ಫೋಟೋ ಶೇರ್ ಮಾಡಿಕೊಂಡಿರುವ ನಟಿ, ನಾನು ಇಸ್ಲಾಂ ಧರ್ಮದ ಮಾರ್ಗವನ್ನು ಅನುಸರಿಸಲು ಸಂಪೂರ್ಣವಾಗಿ ನಿರ್ಧರಿಸಿದ್ದೇನೆ. ಡಿಜಿಟಲ್ ಯುಗದಲ್ಲಿ ಅದನ್ನು ನೀವು ನೋಡಲು ಸಾಧ್ಯವಾಗಿದೆ. ನನ್ನ ಇಸ್ಲಾಮಿಕ್ ಜೀವನಶೈಲಿಯ ಒಂದು ನೋಟ ಇದಾಗಿದೆ. ಚಿತ್ರರಂಗ ಶಾಶ್ವತವಾಗಿ ತೊರೆಯುತ್ತಿದ್ದೇನೆ, ವಿದಾಯ ಹೇಳುತ್ತಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆಯಲ್ಲಿ ನನ್ನನ್ನು ಸ್ಮರಿಸಬೇಕಾಗಿ ವಿನಂತಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
View this post on Instagram A post shared by ᴀⁿᵘᵐ Aسad 🦋 (@anumfayyazofficial)
A post shared by ᴀⁿᵘᵐ Aسad 🦋 (@anumfayyazofficial)
31 ವರ್ಷದ ಅನಮ್ ಫಯಾಜ್ ಅವರು 25 ಡಿಸೆಂಬರ್ 1991 ರಂದು ಕರಾಚಿಯಲ್ಲಿ ಜನಿಸಿದರು. ಇವರು ಪಾಕಿಸ್ತಾನದ ಪ್ರಸಿದ್ಧ ಟಿವಿ ನಟಿ ಮತ್ತು ರೂಪದರ್ಶಿ. ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟವರು. ಅನಮ್ ಇಷ್ಕ್ ಇಬಾದತ್, ಪರ್ವರೀಶ್, ಅಹ್ಮದ್ ಹಬೀಬ್ ಕಿ ಬೇಟಿಯಾನ್ ಮುಂತಾದ ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. 2016 ರಲ್ಲಿ ಅಸದ್ ಅನ್ವರ್ ಅವರನ್ನು ವಿವಾಹವಾದರು. ಇವರಿಗೆ ಒಬ್ಬ ಮಗನೂ ಇದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.