ಜೆದ್ದಾ(www.vknews.in): ಈ ವರ್ಷದ ರಂಜಾನ್ ಮಾಸದ ಚಂದ್ರದರ್ಶನದ ವೀಕ್ಷಣೆಗೆ ಸೌದಿ ಸುಪ್ರೀಂ ಕೋರ್ಟ್ ಸರ್ವ ನಾಗರೀಕರಿಗೆ ಮನವಿ ಮಾಡಿದೆ. ಶಅಬಾನ್ 29 ಅಥವಾ ಈ ಬರುವ ಮಂಗಳವಾರ ಸೂರ್ಯಾಸ್ತದ ನಂತರ ಚಂದ್ರೋದಯವನ್ನು ವೀಕ್ಷಿಸುವಂತೆ ಕೋರ್ಟ್ ಕರೆ ನೀಡಿದೆ.
ಚಂದ್ರದರ್ಶನವನ್ನು ಬರಿಗಣ್ಣಿನಿಂದ ಅಥವಾ ಬೈನಾಕ್ಯುಲರ್ ಮೂಲಕ ನೋಡಿದರೆ, ಆ ಮಾಹಿತಿಯನ್ನು ಹತ್ತಿರದ ನ್ಯಾಯಾಲಯ ಅಥವಾ ನ್ಯಾಯಾಲಯಕ್ಕೆ ತಲುಪಲು ಸಹಾಯ ಮಾಡುವ ಕೇಂದ್ರಗಳಿಗೆ ವರದಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೇಳಿದೆ.
ನ್ಯಾಯ ಮತ್ತು ಧರ್ಮನಿಷ್ಠೆಯಲ್ಲಿ ಸಹಕಾರವು ಪ್ರತಿಫಲದಾಯಕ ಕಾರ್ಯವಾಗಿದ್ದು, ಪವಿತ್ರ ಮಾಸದ ಚಂದ್ರದರ್ಶನವನ್ನು ವೀಕ್ಷಿಸಲು ಆಸಕ್ತಿ ಹೊಂದಿರುವವರು ವಿವಿಧ ಕ್ಷೇತ್ರಗಳಲ್ಲಿ ಇದಕ್ಕಾಗಿ ರಚಿಸಲಾದ ವಿಶೇಷ ಸಮಿತಿಗಳೊಂದಿಗೆ ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅದೇ ಸಮಯದಲ್ಲಿ, ಖಗೋಳ ಶಾಸ್ತ್ರಜ್ಞರ ಪ್ರಕಾರ ಶಾಬಾನ್ 29 ರಂದು ಮಂಗಳವಾರ ಚಂದ್ರದರ್ಶನದ ಸಾಧ್ಯತೆ ಕ್ಷೀಣವಾಗಿದ್ದು, ಶಾಬಾನ್ 30 ರ ಬುಧವಾರ ಮುಗಿದ ನಂತರ ರಂಜಾನ್ ಗುರುವಾರ ಪ್ರಾರಂಭವಾಗಲಿದೆ ಎಂದು ಅಭಿಪ್ರಾಯ ಪಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.