(ವಿಶ್ವ ಕನ್ನಡಿಗ ನ್ಯೂಸ್) : ಕೆಲಸ ಕೊಡಿಸುವುದಾಗಿ ಕೋಟಿಗಟ್ಟಲೆ ಸುಲಿಗೆ ಮಾಡಿದ್ದ ಬಿಜೆಪಿ ಮಹಿಳಾ ನಾಯಕಿ, ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಬಿಜೆಪಿ ಕಿಸಾನ್ ಮೋರ್ಚಾ ಕಾರ್ಯದರ್ಶಿ ಮೂನ್ ಇಂಗ್ಟಿಪ್ ಅವರನ್ನುಯನ್ನು ಪೊಲೀಸರು ಬಂಧಿಸಿದ್ದಾರೆ.
ಹಲವು ವರ್ಷಗಳಿಂದ ಇವರು ಒಂಬತ್ತು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂಬುದು ಸಂತ್ರಸ್ತರಿಂದ ಬಂದಿರುವ ದೂರುಗಳಾಗಿವೆ. ಬಿಜೆಪಿಯ ಹಿರಿಯ ನಾಯಕರೊಂದಿಗಿನ ಚಿತ್ರವನ್ನೂ ವಂಚನೆಗೆ ಬಳಸಿಕೊಂಡಿದ್ದಾರೆ. ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವಕರಿಂದ ಮೂನ್ ಇಂಗ್ಟಿಪಿ ಹಣ ವಸೂಲಿ ಮಾಡಿದ್ದಾರೆ. ಘಟನೆ ವಿವಾದವಾದ ನಂತರ ಪಕ್ಷವು ಅವರ ವಿರುದ್ಧ ಕ್ರಮ ಕೈಗೊಂಡು ಬಿಜೆಪಿಯಿಂದ ಉಚ್ಚಾಟಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.