ತ್ರಿಶೂರ್ (www.vknews.in) | ತ್ರಿಶೂರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಚಲನಚಿತ್ರ ತಾರೆ ಮತ್ತು ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ (39) ಸಾವನ್ನಪ್ಪಿದ್ದಾರೆ. ಕೊಲ್ಲಂ ಸುಧಿ ಮತ್ತು ಅವರ ತಂಡವು ವಡಕರದಲ್ಲಿ ನಡೆದ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ ತ್ರಿಶೂರ್ನ ಕೈಪಮಂಗಲಂನ ಪನಂಬಿಕುನ್ನು ಎಂಬಲ್ಲಿ ಅಪಘಾತ ಸಂಭವಿಸಿದೆ. ಇಂದು ಮುಂಜಾನೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪಿಕಪ್ ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸುಧಿಯನ್ನು ಕೊಡುಂಗಲ್ಲೂರ್ ಎಆರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಿಮಿಕ್ರಿ ಕಲಾವಿದರಾದ ಬಿನು ಅಡಿಮಾಲಿ, ಉಲ್ಲಾಸ್ ಅರೂರ್ ಮತ್ತು ಮಹೇಶ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲ್ಲಂ ಸುಧಿ 2015 ರಲ್ಲಿ ಕಾಂತಾರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಟಿವಿ ಚಾನೆಲ್ ಗಳಲ್ಲಿನ ಹಾಸ್ಯ ಕಾರ್ಯಕ್ರಮಗಳ ಭಾಗವಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.