(www.vknews.in) : ಪ್ರಪಂಚದ ಯಾವುದೇ ಮೂಲೆಗಳಿಂದ ಯಾವುದೇ ಸುದ್ದಿಯನ್ನು ನಾವು ಇಂದು ಬೆರಳ ತುದಿಯಲ್ಲಿ ತಿಳಿಯಬಹುದು. ಸಾಮಾಜಿಕ ತಾಣಗಳಾದ ವಾಟ್ಸಪ್, ಫೇಸ್ಬುಕ್ಗಳಲ್ಲಿ ಬರುವ ಅದೆಷ್ಟೋ ಸುದ್ದಿಗಳು ಸತ್ಯ ಯಾವುದು ಸುಳ್ಳು ಯಾವುದೆಂದು ತಿಳಿಯಲು ತುಂಬಾ ಕಷ್ಟ. ಸಿಕ್ಕಿದನ್ನೆಲ್ಲ ರವಾನಿಸಿ ಜನರನ್ನು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಹಾಗೇಯೆ ಕೆಲವೊಂದು ನ್ಯೂಸ್ ಮಾಧ್ಯಮಗಳು ಪ್ರಕಟಿಸುವ ಅದೆಷ್ಟೋ ಸುಳ್ಳು ಸುದ್ದಿಗಳಿಂದ ಜನರು ನ್ಯೂಸ್ಗಳಿಂದಲೂ ಕೂಡ ದೂರ ಸರಿದು ನಿಂತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜನರಿಗೆ ಸತ್ಯವನ್ನು ತಿಳಿಸಲೆಂದೆ ಕೆಲವೊಂದು ಮಾಧ್ಯಮಗಳು ಇನ್ನೂ ಕೂಡ ಜೀವಂತವಾಗಿ ಕಾರ್ಯಚರಣಾ ಮಾಡುತ್ತಾ ಬಂದಿದೆ, ಅದರಲ್ಲೊಂದು ಈ ವಿಶ್ವ ಕನ್ನಡಿಗ ನ್ಯೂಸ್.
ಇಂದು ಕನ್ನಡ ನಾಡಿನಲ್ಲೇ ಕನ್ನಡವನ್ನು ಮೂಲೆ ಗುಂಪಾಗಿಸುತ್ತಿರುವ ಜನರಿಗೆ ವಿಕೆ ನ್ಯೂಸ್ ಒಂದು ಮಾದರಿ ಎಂದರು ತಪ್ಪಾಗಲ್ಲ. ಹೌದು ದೇಶ ವಿದೇಶಗಳಲ್ಲಿ ಕನ್ನಡದ ಮೂಲಕ ಇಂದಿಗೂ ಕೂಡ ಸತ್ಯಾಂಶವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಹದಿಮೂರು ವರ್ಷದಿಂದ ಮುಂದುವರಿಸುತ್ತಾ ಬಂದಿರುವುದು ನಿಜಕ್ಕೂ ಸಂತಸದ ಸುದ್ದಿ. ಕೇವಲ ಸುದ್ದಿ ಮಾಧ್ಯಮಕ್ಕೆ ಮಾತ್ರ ಸೀಮಿತವಾಗದೆ ಅದೆಷ್ಟೋ ಸಹಾಯ ಸಹಕಾರಕ್ಕೂ ವಿಕೆ ನ್ಯೂಸ್ ಮುಂದೆ ಬಂದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ನನ್ನನ್ನು ಲೇಖನದ ಮೂಲಕ ಜನರಿಗೆ ಮೊದಲು ಪರಿಚಯಿಸಿದು ವಿಕೆ ನ್ಯೂಸ್. ನನ್ನ ಹಲವಾರು ಬರಹಗಳನ್ನು ವಿಕೆ ನ್ಯೂಸ್ ಪ್ರಕಟಿಸುತ್ತ ಬಂದಿದೆ. ಮತ್ತು ಇತ್ತೀಚಿಗಷ್ಟೆ ವಾಟ್ಸಪ್ನಲ್ಲಿ ನಾನು ಕಾಣೆಯಾಗಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ಒಬ್ಬ ರವಾನಿಸಿದ್ದಾಗ ಅದು ಪಕ್ಕ ಸುಳ್ಳು ಸುದ್ದಿ ಎಂದು ಜನರಿಗೆ ತಲುಪಲು ನನಗೆ ವಿಕೆ ನ್ಯೂಸ್ ತುಂಬಾ ಉಪಕಾರಿಯಾಯಿತು.
ಉತ್ತಮ ಒಡನಾಟದ ಪ್ರದಾನ ಸಂಪಾದಕರಾದ ಸಿ.ಹೆಚ್ ಹಮೀದ್ರವರ ಸೇವೆ ನಿಜಕ್ಕೂ ತುಂಬಾ ಹೆಮ್ಮೆ ಅನಿಸುತ್ತದೆ. ನಿರುದ್ಯೋಗದಿಂದ ಯುವ ಸಮೂಹ ಕಷ್ಟ ಪಡುವುದನ್ನು ಕಂಡು ವಾಟ್ಸಪ್ನಲ್ಲೊಂದು ವಿಕೆ ಉದ್ಯೋಗ ಮಾಹಿತಿ ಎಂಬ ಗ್ರೂಪ್ ಒಂದು ತೆರೆದು ಜನರಿಗೆ ಸಹಾಯವಾಗುವಂತೆ ವಿಕೆ ನ್ಯೂಸ್ ಕೈ ಜೋಡಿಸಿತ್ತು. ಹಲವಾರು ಕವನ, ಸಾಹಿತ್ಯ, ಬರಹಗಳನ್ನು ನಿರಂತರ ಪ್ರಕಟಿಸುತ್ತ ಬಂದು ಅದೆಷ್ಟೋ ಲೇಖಕರನ್ನು ವಿಶ್ವದಾದ್ಯಂತ ಪರಿಚಯಿಸಿತು.
ಹದಿಮೂರು ವರ್ಷಗಳನ್ನು ಪೂರೈಸಿ ಹದಿನಾಲ್ಕನೆಯ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ವಿಕೆ ನ್ಯೂಸ್ ವಿಶ್ವ ಕನ್ನಡಿಗರ ದ್ವನಿ ವಿಶ್ವದಾದ್ಯಂತ ಕೇಳಿಸಲಿ ಎಂಬ ಹಾರೈಕೆಯೊಂದಿಗೆ.. ಸಂಪಾದಕರಿಗೂ ಹಾಗೂ ಇದರ ಹಿಂದೆ ಶ್ರಮ ಪಡುತ್ತಿರುವ ಪ್ರತಿಯೊಬ್ಬರಿಗೂ ಕೂಡ ಅಭಿನಂದಿಸುತ್ತಿದ್ದೇನೆ. ಇನ್ನಷ್ಟು ಉತ್ತಮ ಹಾದಿಯಲ್ಲಿ ಸಾಗುತ್ತ, ಜನರಿಗೆ ಸತ್ಯಾಂಶವನ್ನು ತಲುಪಿಸುತ್ತಾ ಉನ್ನತ ಮಟ್ಟದ ಹೇರಲಿ ಎಂದು ಹಾರೈಸುತ್ತಿದ್ದೇನೆ. ಧನ್ಯವಾದಗಳು..
– ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.