ಬಾಗ್ಪತ್ (www.vknews.in) : ಉತ್ತರ ಪ್ರದೇಶದ ಬಾಗ್ಪತ್ನಲ್ಲಿರುವ ದರ್ಗಾದ ಮಾಲೀಕತ್ವವನ್ನು ಬಿಟ್ಟುಕೊಡುವಂತೆ ಕೋರಿ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ದಶಕಗಳ ಹಿಂದಿನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸೂಫಿ ಸಂತ ಬದ್ರುದ್ದೀನ್ ಷಾ ಅವರ ದರ್ಗಾವನ್ನು ಹಿಂದೂಗಳ ಪಾಲಿಗೆ ಹಸ್ತಾಂತರಿಸಬೇಕೆಂದು ಬಾಗ್ಪತ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಸೋಮವಾರ ಸಿವಿಲ್ ನ್ಯಾಯಾಧೀಶ ಶಿವಂ ದ್ವಿವೇದಿ ಅವರು ಮುಸ್ಲಿಂ ಪರ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.
ಸೂಫಿ ಸಂತ ಬದ್ರುದ್ದೀನ್ ಶಾ ಅವರ ದರ್ಗಾ ಬಾಗ್ಪತ್ ಜಿಲ್ಲೆಯ ಬರ್ನಾವಾ ಗ್ರಾಮದಲ್ಲಿದೆ. ಇದು 600 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿದ ವಿವಾದಗಳು 53 ವರ್ಷಗಳ ಹಿಂದೆ ಪ್ರಾರಂಭವಾದವು. 1970 ರಲ್ಲಿ, ದರ್ಗಾದ ಅಧಿಕಾರಿ ಮುಕೀಮ್ ಖಾನ್, ಹಿಂದೂ ಪಂಗಡವೊಂದು ದರ್ಗಾದೊಳಗೆ ಅತಿಕ್ರಮಣ ಮಾಡಿ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿ ನ್ಯಾಯಾಲಯವನ್ನು ಸಂಪರ್ಕಿಸಿದರು.
ಈ ಪ್ರಕರಣದಲ್ಲಿ ಬಾಗ್ಪತ್ ಹಿಂದೂ ಅರ್ಚಕ ಕೃಷ್ಣದತ್ ಮಹಾರಾಜ್ ಆರೋಪಿಯಾಗಿದ್ದರು. ಮಹಾಭಾರತದಲ್ಲಿ ಉಲ್ಲೇಖಿಸಲಾದ ‘ಲಕ್ಷಗೃಹ’ ಇರುವ ಸ್ಥಳ ಇದು ಎಂದು ಹಿಂದೂ ಪಂಥವು ಪ್ರತಿಪಾದಿಸುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಲಕ್ಷ ಗೃಹವು ಪಾಂಡವರನ್ನು ಸುಟ್ಟು ಕೊಲ್ಲಲು ದುರ್ಯೋಧನನು ನಿರ್ಮಿಸಿದ ಅರಮನೆಯಾಗಿದೆ. ದಶಕಗಳ ಕಾಲ ನಡೆದ ಈ ಪ್ರಕರಣದ ನಿರ್ಣಾಯಕ ತೀರ್ಪು ಕಳೆದ ದಿನ ಹೊರಬಿದ್ದಿದೆ.
ಲಕ್ಷಗೃಹಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರ ಆಧಾರದ ಮೇಲೆ ಮುಸ್ಲಿಂ ವಿಭಾಗದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹಿಂದೂ ವಿಭಾಗದ ಪರ ವಾದ ಮಂಡಿಸಿದ ವಕೀಲ ರಣವೀರ್ ಸಿಂಗ್ ತೋಮರ್ ತಿಳಿಸಿದ್ದಾರೆ. ಅರ್ಜಿ ತಿರಸ್ಕೃತಗೊಂಡ ನಂತರ ಪ್ರಕರಣದೊಂದಿಗೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಮುಸ್ಲಿಂ ವಿಭಾಗದ ವಕೀಲ ಶಾಹಿದ್ ಖಾನ್ ತಿಳಿಸಿದ್ದಾರೆ. ಈ ಪ್ರದೇಶವು ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಕ್ಷಣೆಯಲ್ಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.