ಜಮ್ಮು ಕಾಶ್ಮೀರ (www.vknews.in) : ರಾತ್ರಿ ಮಲಗಿದ್ದ ಮೂವರು ಬಾಲಕಿಯರು ಅವರ ಮನೆಯಲ್ಲಿಯೇ ಅಗ್ನಿ ಅನಾಹುತಕ್ಕೆ ಒಳಗಾದ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಜಮ್ಮು-ಕಾಶ್ಮೀರದ ಅಬ್ದುಲ್ ಲತೀಫ್ ಎಂಬವರ ಮನೆಯಲ್ಲಿ ದೇಶವೇ ಕಣ್ಣೀರಿಡುವ ದುರಂತ ನಡೆದಿದೆ. ಮನೆಗೆ ಬೆಂಕಿ ತಗುಲಿ ಒಟ್ಟಿಗೆ ಮಲಗಿದ್ದ ಸಹೋದರಿಯರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಬಿಸ್ಮಾ (18), ಸೈಕಾ (14) ಮತ್ತು ಸಾನಿಯಾ (11) ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಧನ್ಮಸ್ತ – ತಾಜ್ನಿಹಾಳ್ ಗ್ರಾಮದ ಅಬ್ದುಲ್ ಲತೀಫ್ ಎಂಬುವರ ಮೂರು ಅಂತಸ್ತಿನ ಮನೆಗೆ ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ. ಸಹೋದರಿಯರು ಮಹಡಿಯ ಮೇಲೆ ಮಲಗಿದ್ದರು. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಆಗಮಿಸಿ ಸಹೋದರಿಯರ ಮೃತದೇಹಗಳನ್ನು ಹೊರತೆಗೆದಿದೆ. ಬೆಂಕಿ ಅವಘಡಕ್ಕೆ ಕಾರಣ ಸ್ಪಷ್ಟವಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.