(www.vknews.in) ; ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬಾಂಗ್ಲಾದೇಶಿ ಮುಸ್ಲಿಂ ವಲಸಿಗರಿಗೆ ಸಲಹೆ ನೀಡಿದ್ದಾರೆ. ಅಸ್ಸಾಮಿ ಎಂದು ಗುರುತಿಸಿಕೊಳ್ಳಬೇಕಾದರೆ ಬಹುಪತ್ನಿತ್ವ ತ್ಯಜಿಸಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬಾರದು ಎಂಬುದು ಹಿಮಂತ ಅವರ ಸಲಹೆ. ಬಹುಪತ್ನಿತ್ವ ಅಸ್ಸಾಂನ ಸಂಸ್ಕೃತಿಯಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.
ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಾರದು, ಮಕ್ಕಳನ್ನು ಮದರಸಾಕ್ಕೆ ಕಳುಹಿಸುವ ಬದಲು ಡಾಕ್ಟರ್, ಇಂಜಿನಿಯರ್ ಆಗುವ ಶಿಕ್ಷಣ ಕೊಡಿಸಬೇಕು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ತಂದೆಯ ಆಸ್ತಿ ಹಕ್ಕು ಮಕ್ಕಳಿಗೆ ನೀಡಬೇಕು. ಬಂಗಾಳಿ ವಲಸಿಗ ಮುಸ್ಲಿಂ ಸಮುದಾಯವೂ ಅಸ್ಸಾಂನ ಜನರ ಸಂಸ್ಕೃತಿಯನ್ನು ಹೀರಿಕೊಳ್ಳಲು ಸಿದ್ಧರಾಗಿರಬೇಕು. ಆಗ ಮಾತ್ರ ಅವರನ್ನು ಅಸ್ಸಾಮಿ ಪ್ರಜೆಗಳೆಂದು ಗುರುತಿಸಲು ಸಾಧ್ಯ ಎಂದೂ ಹಿಮಂತ ಸ್ಪಷ್ಟಪಡಿಸಿದ್ದಾರೆ.
2011 ರ ಜನಗಣತಿಯ ಪ್ರಕಾರ, ಅಸ್ಸಾಂ ಜಮ್ಮು ಮತ್ತು ಕಾಶ್ಮೀರದ ನಂತರ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. ಅಸ್ಸಾಂನ ಮುಸ್ಲಿಂ ಜನಸಂಖ್ಯೆಯು ಶೇಕಡಾ 34 ರಷ್ಟಿದೆ. ಇಲ್ಲಿನ ಮುಸ್ಲಿಂ ಜನಸಂಖ್ಯೆಯು ಬಂಗಾಳಿ-ಮಾತನಾಡುವ ಮುಸ್ಲಿಂ ಸಮುದಾಯಗಳು, ಬಂಗಾಳಿ-ಮಾತನಾಡುವ ವಲಸಿಗ ಮುಸ್ಲಿಂ ಸಮುದಾಯಗಳು ಮತ್ತು ಅಸ್ಸಾಮಿ-ಮಾತನಾಡುವ ಸಾಂಪ್ರದಾಯಿಕ ಮುಸ್ಲಿಂ ಸಮುದಾಯಗಳನ್ನು ಒಳಗೊಂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.