ಜೆದ್ದಾ(www.vknews.in): ಸೌದಿ ಅರೇಬಿಯಾದ ವಿವಿಧ ವಿಮಾನ ನಿಲ್ದಾಣಗಳಿಂದ ಪ್ರಯಾಣಿಕರನ್ನು ತಮ್ಮ ಬಾಡಿಗೆ ವಾಹನಗಳಲ್ಲಿ ಸಾಗಿಸುತ್ತಿದ್ದ ಸುಮಾರು 670 ಟ್ಯಾಕ್ಸಿಗಳನ್ನು ಒಂದು ವಾರದಲ್ಲಿ ವಶಪಡಿಸಿಕೊಳ್ಳಲಾಗಿದೆ ಹಾಗೂ 305 ಚ್ಯಾಕ್ಸಿ ಚಾಲಕರನ್ನು ಬಂಧಿಸಲಾಗಿದೆ ಎಂದು ಸೌದಿ ಅರೇಬಿಯಾದ ಸಾರಿಗೆ ಪ್ರಾಧಿಕಾರವು ಹೇಳಿದೆ. ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ಯಾವುದೇ ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ತಮ್ಮ ಸ್ವಂತ ವಾಹನ ಅಥವಾ ವಿಮಾನ ನಿಲ್ದಾಣದಲ್ಲಿರುವ ಅಧಿಕೃತ ಟ್ಯಾಕ್ಸಿ ಮೂಲಕ ಮಾತ್ರ ಪ್ರಯಾಣಿಸಬಹುದಾಗಿದೆ. ಅನಧಿಕೃತ ಟ್ಯಾಕ್ಸಿಗಳು ಈ ಕೆಲಸವನ್ನು ನಿರ್ವಹಿಸಿದರೆ ಚಾಲಕರಿಗೆ ಜೈಲು ಶಿಕ್ಷೆಯೊಂದಿಗೆ 5000 ರಿಯಾಲ್ ದಂಡ ವಿಧಿಸಲಾಗುವುದೆಂದು ಪ್ರಾಧಿಕಾರವು ಈ ಹಿಂದೆ ಎಚ್ಚರಿಸಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.