(www.vknews.in) 14 ವರ್ಷಗಳ ಹಿಂದೆ ಮೇ 22 ಮಂಗಳೂರಿನ ಮೋಡದಿಂದ ಮಂಜಿನಿಂದ , ಕೂಡಿದ ಮುಂಜಾನೆ,,ಅಂದು ದುಬೈಯಿಂದ 158 ಜೀವಗಳನ್ನೊತ್ತು ಮಂಗಳೂರಿನೆಡೆಗೆ ವಿಮಾನವೊಂದು ಹಾರುತ್ತ ಬಂತು, ಮಂಗಳೂರು ಏರ್ಪೋಟ್ ನ ರನ್ ವೇ ತಲುಪಿತು, ಆದರೆ ತಮ್ಮನ್ನು ಮನೆಗೆ ಕರೆದುಕೊಂಡೋಗಲು ಬಂದ ತಮ್ಮವರನ್ನ ಸ್ತಬ್ಧವಾಗಿ ನಿಲ್ಲಿಸಿ, ವಿಮಾನ ಪತನವಾಗಿ 158 ಜೀವಗಳು ಸಜೀವ ದಹನವಾದವು,
ಅಂದು ನಾನು B.A ಪ್ರಥಮ ತರಗತಿಯ 2ನೇ ಸೆಮಿಸ್ಟರ್ ಪರೀಕ್ಷೆಗೆ ತಯಾರುಗೊಳಿಸಲು ಮುಂಜಾನೆ ಎದ್ದು ಪುಸ್ತಕ ತೆರೆದಾಗ ಅಂದು ಮುಂಜಾನೆ ಹೊರಗೆ ಕರಿ ಮೋಡದಿಂದ ಕೂಡಿತು ವಾತಾವರಣ,.ಏನೋ ಒಂದು ಸೂತಕದ ಛಾಯೆ.ಸಮಯ 7:30 ಆದಾಗ ಕರಾವಳಿ ಜನತೆಗೆ ಕರಾಳತೆಯ ವಾರ್ತೆಯೊಂದು ಕೇಳಲು ಆರಂಭವಾಯಿತು, tv ಓಪನ್ ಮಾಡಿದಾಗ ಕಣ್ಣಂಚಿನಲ್ಲಿ ಕಣ್ಣೀರು ಹರಿಯಿತು. ವಿವಿದ ಸ್ವಯಂ ಸೇವಕರು ಬೆಂದ ಜೀವಗಳನ್ನೊತ್ತು ಮೇಲೆ ತರುವ ದೃಶ್ಯಗಳು, ಕುಟುಂಬದವರ ಆಕ್ರಂದನ, ಅಂಬ್ಯುಲೆನ್ಸಿನ ಮಿಂಚಿನ ಓಟ, ಅಂದು ಕಂಡದ್ದು ಇಂದಿಗೂ ಮನಸ್ಸಿನಾಳದಲ್ಲಿ ಪುನರಾವರ್ತನೆಗೊಳ್ಳುತ್ತಿದೆ.
ಇನ್ನೂ ಕೂಡಾ ನಿದ್ದೆಗಣ್ಣಿಂದ ಎದ್ದೇಳದ ಅಮ್ಮನ ಮಡಿಲಿನಲ್ಲಿರುವ ಕಂದಮ್ಮಗಳು. ಹಲವಾರು ವರ್ಷಗಳ ನಂತರ ತನ್ನ ಪ್ರೀತಿಯ ಅಮ್ಮನ ಮುಖವನ್ನು ದರ್ಶಿಸುವ ಆಸೆಯಲ್ಲಿರುವ ಮಗ. ಮದುವೆಯಾಗಿ ಕೆಲವೇ ದಿನಗಳಲ್ಲಿ ವಿದೇಶಕ್ಕೆ ಹೋಗಿ ದುಡಿದು,ಊರಿಗೆ ಮರಳಿ ತನ್ನ ಮನಸ್ಸಿನ ಕಾಮನೆಗಳನ್ನು ತಣಿಸುವ ಪ್ರಿಯತಮೆಯನ್ನು ಕಾಣುವ ಕನಸಿನಲ್ಲಿರುವ ಗಂಡ. ಸಹೋದರಿಯ ಮದುವೆಯನ್ನು ಕಾಣುವ ಗುಂಗಿನಲ್ಲಿರುವ ಸಹೋದರ, ವರ್ಷಗಳ ನಂತರ ಕಂದಮ್ಮನ ಮುಖ ನೋಡುವ ತವಕದಲ್ಲಿರುವ ತಂದೆ…..
ಈಗೆ ನಾನಾ ರೀತಿಯ ಹೊಂಗನಸುಗಳನ್ನೊತ್ತು ಊರಿಗೆ ಮರಳಿದ 158 ಜೀವಗಳ ಆಸೆಗಳೆಲ್ಲಾ ಸಾಕ್ಷಾತ್ಕಾರಗೊಳ್ಳಲು ಕ್ಷಣಗಳು ಬಾಕಿ ಇರುವಾಗಲೇ 158 ಜೀವಗಳನ್ನು ಬೆಂಕಿಯ ಕೆಣ್ಣಾಲಿಗಳು ಬಲಿ ಪಡೆದು ಕನಸುಗಳೆಲ್ಲವನ್ನು ಕ್ಷಣಾರ್ಧದಲ್ಲಿ ಭಸ್ಮಗೊಳಿಸಿದ ಕರಾಳ ದಿನವಿಂದು. ಆ ದುರಂತ ನಡೆದು 14 ವರ್ಷ ಕಳೆದರೂ ಮನಸ್ಸಿಂದ ಮಾಸಿಲ್ಲ ಆ ಕರಾಳ ನೆನಪು, ಆದರೂ ದುರಂತಕ್ಕೊಳಗಾದವರ ಕೆಲವು ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ,, ಸಂಬಂಧಪಟ್ಟವರು ಇದರ ಬಗ್ಗೆ ಗಮನಕೊಡುವಂತಾಗಲಿ..
ಯಾ ಅಲ್ಲಾಹ್ ಆ ಕರಾಳ ದಿನದಂದು ಮರಣ ಹೊಂದಿದ ಮುಸ್ಲಿಮರಿಗೆ ಬದ್ರೀಂಙಳಿಗೆ ನೀಡಿದ ಶಹೀದಿನ ಪುಣ್ಯವನ್ನು ನೀಡು ಯಾ ರಬ್ಬೇ ಆಮೀನ್, ಸಹೋದರ ಧರ್ಮದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಸಿಗಲಿ.. ಅಂದು ಮರಣ ಹೊಂದಿದವರ ಮೇಲೆ ಒಂದು ಫಾತಿಹ ಓದಿ ಹದಿಯ ಮಾಡಿ.. ಇನ್ನೆಂದಿಗೂ ಇಂತಹ ದುರಂತ ಮರುಕಳಿಸದಿರಲಿ ಆಮೀನ್
— ಕೆ ಎಂ ಇರ್ಶಾದ್ ಪಕ್ಷಿಕೆರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.