ಸುಳ್ಯ (www.vknews.in) : ರಾತ್ರಿ ವೇಳೆ ಪಿಕಪ್ ನಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದವರನ್ನು ಸ್ಥಳೀಯರು ಹಿಡಿದ ಘಟನೆ ಸುಳ್ಯದ ಎಲಿಮಲೆಯಲ್ಲಿ ನಡೆದಿದೆ. ಎಲಿಮಲೆಯ ಅಂಬೆಕಲ್ಲು ಕಡೆಯಿಂದ 4 ದನಗಳನ್ನು ರಾತ್ರಿ 3 ಗಂಟೆಯ ವೇಳೆಗೆ (ಕೆಎ 21 ಎ 0824) ಪಿಕ ಅಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ತಿಳಿದ ಸ್ಥಳೀಯ ಯುವಕರು ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಲುಪಣೆ ಎಂಬಲ್ಲಿ ವಾಹನವನ್ನು ಅಡ್ಡ ಗಟ್ಟಿದರು. ಈ ವೇಳೆ ಇಬ್ಬರು ಪರಾರಿಯಾಗಿದ್ದು, ಇನ್ನು ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ.
ಪುತ್ತೂರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರನ್ನು ಸ್ಥಳೀಯರು ಹಿಡಿದಿದ್ದಾರೆ. ಎಲಿಮಲೆ ಭಾಗದಿಂದ ಈ ಹಿಂದೆಯೂ ದನಗಳ ಅಕ್ರಮ ದನ ಸಾಗಾಟ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.