(www.vknews. in) ; ಸಮಾಜ ಸೇವಕ, ಸಂಘಟನಾ ನಾಯಕ, ಕೊಡುಗೈದಾನಿ, ಶಿಕ್ಷಣ ತಜ್ಞ, ಮೋಟಿವೇಷನಲ್ ಸ್ಪೀಕರ್, ಟ್ರೈನರ್, ಅನಿವಾಸಿ ಭಾರತೀಯರ ಧ್ವನಿ, ಯಶಸ್ವೀ ಉದ್ಯಮಿ ಹೀಗೆಲ್ಲ ವಿಶೇಷಿಸಬಹುದಾದ ಹತ್ತು ಹಲವು ಕ್ವಾಲಿಟಿಗಳನ್ನು ಮೇಲೈಸಿಕೊಂಡಿರುವ ಚಿರಪರಿಚಿತ ಹೆಸರೇ ಡಾ. ಶೇಕ್ ಬಾವ ಮಂಗಳೂರು
ಯು.ಎ.ಇ ಯ ಸರಕಾರೀ ಅಧೀನದ ಪ್ರತಿಷ್ಠಿತ ADNOC ಕಾಪೆನಿಯಲ್ಲಿ 25 ವರ್ಷಗಳ ಕಾಲ ಉನ್ನತ ಹುದ್ದೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಇವರ ವೃತ್ತಿಪರತೆಗೆ ಸಾಕ್ಷಿಯಾದರೆ, ಅಂತರಾಷ್ಟ್ರೀಯ ಸಂಘಟನೆಗಳಾದ ಬಾಫಕಿ ಫೌಂಡೇಶನ್, TAWAM ಗ್ಲೋಬಲ್ ಚಾಪ್ಟರ್ , ಕೆ ಸಿ ಎಫ್ ಸಹಿತ ವಿವಿಧ ಸಂಘಟನೆಗಳ ಸಾರಥಿಯಾಗಿ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು ಇವರ ಸೇವಾ ಮನೋಭಾವಕ್ಕೊಂದು ಸಾಕ್ಷಿಯಾಗಿದೆ. ಉತ್ತಮ ವಾಗ್ಮಿಯೂ ಆಗಿರುವ ಇವರು ದೇಶವಿದೇಶದಲ್ಲಿ ಅನೇಕ ಯುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೋಟಿವೇಷನಲ್ ಪ್ರೋಗ್ರಾಮನ್ನು ಕೂಡ ಸಂಘಟಿಸಿ ತರಬೇತಿಯನ್ನು ನೀಡಿದ್ದಾರೆ. ತಮ್ಮ ಸೇವಾ ಚಟುವಟಿಕೆಗಳಿಗಾಗಿ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ.
ಇದೀಗ ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯತನಕ್ಕಾಗಿ ಸ್ಪರ್ಧಿಸುತ್ತಿರುವ; MBA, PhD ಮಾಡಿರುವ ಡಾ ಶೇಕ್ ಬಾವ ಯಾವ ದೃಷ್ಟಿಯಲ್ಲಿ ನೋಡಿದರೂ ಓರ್ವ ಸೂಕ್ತ ಅಭ್ಯರ್ಥಿಯೇ ಸರಿ. ಅವರ ವಿದ್ಯಾಭ್ಯಾಸ, ವೃತ್ತಿ, ಸೇವಾ ಹಿನ್ನೆಲೆ, ಸಾಂಘಿಕ ನಾಯಕತ್ವ, ಸಾಮಾಜಿಕ ಚಟುವಟಿಕೆಗಳು ಎಲ್ಲಕ್ಕಿಂತಲೂ ಮುಖ್ಯವಾಗಿ ನಾಯಕತ್ವಕ್ಕೆ ಅವಶ್ಯಕವಾದ ದೂರದರ್ಶಿತ್ವ, ಯಾವುದೇ ವಿಷಯದ ಬಗ್ಗೆ ಖಚಿತ ನಿಲುವನ್ನು ಹೊಂದಿರುವಂತಹ ವ್ಯಕ್ತಿತ್ವ ಇವರ ಅರ್ಹತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೇವಲ ನಾಮ್ ಕಾ ವಾಸ್ತೆಯೆಂದು ಸಾಮಾನ್ಯವಾಗಿ ಭಾವಿಸಲ್ಪಡುವ, ಈ ಸ್ಥಾನಕ್ಕೆ ತಮ್ಮ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜೀವ ತುಂಬಬಲ್ಲಂತಹ ಉತ್ಸಾಹ ಇವರಲ್ಲಿ ಎದ್ದುಕಾಣುತ್ತಿದೆ.
ವರ್ಷಂಪ್ರತಿ ಏರುತ್ತಿರುವ ಪದವೀಧರರ ಸಂಖ್ಯೆ ಅದಕ್ಕನುಗುಣವಾಗಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗಳನ್ನು ನಿಭಾಯಿಸಲು ನಿರ್ದಿಷ್ಟ ಕಾರ್ಯಯೋಜನೆಗಳನ್ನು ಹೊಂದಿರುವ ಶೇಕ್ ಬಾವ ಅದಕ್ಕಾಗಿ ಪದವೀಧರರ ಧ್ವನಿಯಾಗಿ, ಅವರ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಹೋರಾಡುವ ಬದ್ಧತೆಯನ್ನು ವ್ಯಕ್ತಪಡಿಸುತ್ತಾರೆ.
ಇವರು ಪ್ರತಿನಿಧಿಸುತ್ತಿರುವ ವ್ಯಾಪ್ತಿಯ ಪದವೀಧರ ಮತದಾರರು ಇವರನ್ನು ಬೆಂಬಲಿಸಿ ಆಯ್ಕೆ ಮಾಡಿದಲ್ಲಿ ನುಡಿದಂತೆ ನಡೆಯುವ ವಿಶ್ವಾಸವಿದೆ.
ಡಾ. ಶೇಕ್ ಬಾವ ಬಹುಮತದಿಂದ ಆರಿಸಿ ಬರಲೆಂದು ಹಾರೈಸೋಣ.
-ಡಿ. ಐ ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.