ನವದೆಹಲಿ (www.vknews.in) : ಸ್ಮೃತಿ ಇರಾನಿ, ಅರ್ಜಿನ್ ಮುಂಡಾ ಸೇರಿದಂತೆ ಬಿಜೆಪಿಯ 13 ಕೇಂದ್ರ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಲೋಕ ಅಮೇಠಿಯಲ್ಲಿ ಸ್ಮೃತಿ ಇರಾನಿ ಅವರ ಸೋಲು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ವಿ. ಮುರಳೀಧರನ್ ಕೂಡ ಕೇರಳದಲ್ಲಿ ಸ್ಪರ್ಧಿಸಿದ್ದರು, ಆದರೆ ಇಬ್ಬರೂ ಗೆಲ್ಲಲು ವಿಫಲರಾದರು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ 16,000 ಮತಗಳಿಂದ ಸೋತಿದ್ದಾರೆ. ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಕೂಡ ಗೆಲ್ಲಲು ವಿಫಲರಾದರು.
2019ರಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಸ್ಮೃತಿ ಇರಾನಿ ಅವರು ಕಾಂಗ್ರೆಸ್ನ ಕಿಶೋರಿ ಲಾಲ್ ಶರ್ಮಾ ವಿರುದ್ಧ 1,67,196 ಮತಗಳಿಂದ ಸೋತಿದ್ದರು. ಇದು ಅಮೇಥಿಯಲ್ಲಿ ಸ್ಮೃತಿಯ ಯುಗವನ್ನು ಕೊನೆಗೊಳಿಸಿತು. ಅವರ ನಾಯಕತ್ವದಲ್ಲಿ ಅಮೇಥಿ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗುತ್ತಿದೆ ಎಂದು ಕೂಡ ಅಂದಾಜಿಸಲಾಗಿತ್ತು. ಅವರು ಹಲವಾರು ಸಂದರ್ಭಗಳಲ್ಲಿ ರಾಹುಲ್ ಅವರನ್ನು ತೀವ್ರವಾಗಿ ಟೀಕಿಸಿದರು ಮತ್ತು ಲೇವಡಿ ಮಾಡಿದ್ದರು. ಆದರೆ ರಾಹುಲ್ ಈ ಬಾರಿ ವಯನಾಡ್ ಮತ್ತು ರಾಯ್ ಬರೇಲಿಯಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ಅಮೇಠಿಯಲ್ಲಿ ಸ್ಮೃತಿ ವಿಫಲರಾಗಿದ್ದಾರೆ.
ರೈತರ ಮುಷ್ಕರದ ವೇಳೆ ಲಂಖಿಂಪುರ ಖೇರಿ ಘಟನೆಯಿಂದ ಜನಸಾಮಾನ್ಯರ ಕೋಪಕ್ಕೆ ಗುರಿಯಾಗಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ ವಿರುದ್ಧ ಸೋತರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ವಾಹನವೊಂದು ಗುದ್ದಿದ ಪರಿಣಾಮ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಈ ಸಂಬಂಧ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಾರ್ವಜನಿಕರ ಆಕ್ರೋಶದ ನಡುವೆಯೂ ಲಖಿಂಪುರ ಖೇರಿಯಲ್ಲಿ ಅಜಯ್ ಮಿಶ್ರಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಜಾರ್ಖಂಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಳಿಚರಣ್ ಮುಂಡಾ ವಿರುದ್ಧ ಸುಮಾರು ಒಂದೂವರೆ ಲಕ್ಷ ಮತಗಳಿಂದ ಸೋತಿದ್ದಾರೆ.
ಈ ಬಾರಿ ಸೋಲಿನ ರುಚಿ ನೋಡಬೇಕಿದ್ದ ಬಿಜೆಪಿಯ ಕೇಂದ್ರ ಮಂತ್ರಿಗಳು ಇವರೇ. ಸ್ಮೃತಿ ಇರಾನಿ (ಅಮೇಥಿ), ಅರ್ಜುನ್ ಮುಂಡಾ (ಖುಂಟಿ), ಅಜಯ್ ಮಿಶ್ರಾ ಥೇನಿ (ಲಂಖಿಪುರ್ ಖೇರಿ), ಕೈಲಾಶ್ ಚೌಧರಿ (ಬಾರ್ಮರ್), ರಾಜೀವ್ ಚಂದ್ರಶೇಖರ್ (ತಿರುವನಂತಪುರ), ಸುಭಾಸ್ ಸರ್ಕಾರ್ (ಬಂಕುರಾ), ಎಲ್. ಮುರುಗನ್ (ನೀಲಗಿರಿ), ನಿಸಿತ್ ಪ್ರಮಾಣಿಕ್ (ಕೂಚ್ ಬಹಾರ್), ಸಂಜೀವ್ ಬಲ್ಯಾನ್ (ಮುಜಾಫರ್ ನಗರ), ಮಹೇಂದ್ರನಾಥ್ ಪಾಂಡೆ (ಚಂದೌಲಿ), ಕೌಶಲ್ ಕಿಶೋರ್ (ಮೋಹನ್ ಲಾಲ್ ಗಂಜ್), ಭಗವಂತ್ ಖೂಬಾ (ಬೀದರ್) ಮತ್ತು ರಾಜ್ ಕಪಿಲ್ ಪಾಟೀಲ್ (ಭಿವಂಡಿ).
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.