(www.vknews. in) ; ಟಿ.ಎಂ.ಶಹೀದ್ ಈ ಹೆಸರು ನಾನು ಸಣ್ಣ ಪ್ರಾಯದಲ್ಲೇ ಕೇಳಿದ್ದೆ. ಆದರೆ ಅವರ ಮುಖತಃ ಪರಿಚಯವಿರಲಿಲ್ಲ. ಪ್ರತಿಷ್ಠಿತ ತೆಕ್ಕಿಲ್ ಮನೆತನದ ಈ ಕುಡಿ ತನ್ನ ಜೀವನವನ್ನು ಸಮಾಜಕ್ಕಾಗಿ ಸಮರ್ಪಿಸಿದ ಛಲದಂಕ ಮಲ್ಲ !
ಕೆಲವು ವರ್ಷಗಳ ಹಿಂದೆ ನಾನು ಎಮ್ಮೆಮ್ಮಾಡು ದರ್ಗಾ ಉರೂಸ್ ಗೆ ಹೋದಾಗ ಪ್ರಪ್ರಥಮವಾಗಿ ಟಿ.ಎಂ.ಶಹೀದ್ ರನ್ನು ನೋಡುವ ಅವಕಾಶವುಂಟಾಯಿತು. ಸ್ಫುರದ್ರೂಪಿ ತರುಣ ನನ್ನು ಕಂಡಾಗಲೇ ಇದು ಟಿ.ಎಂ.ಶಹೀದ್ ಎಂದು ಗೊತ್ತಾಯಿತು,ಪತ್ರಿಕೆಗಳಲ್ಲಿ ನೋಡಿ ಮಾತ್ರ ಅವರ ಪರಿಚಯ ಇತ್ತು. ಆದರೆ ಮಾತನಾಡಿ ಪರಿಚಯ ಇಲ್ಲದ ಕಾರಣ ನಾನು ಅಂದು ಮಾತನಾಡಿರಲಿಲ್ಲ. ಆಗ ಸಣ್ಣ ಪ್ರಾಯ ಆದ ಕಾರಣ ಮಾತನಾಡಲೇಬೇಕು ಎಂದು ಅನಿಸಿರಲೂ ಇಲ್ಲ.
ನಂತರದ ದಿನಗಳಲ್ಲಿ ಟಿ.ಎಂ.ಶಹೀದ್ ರನ್ನು ಹತ್ತಿರದಿಂದ ಪರಿಚಯವಾಯಿತು. ಕುಂಜತ್ತೂರ್ ನಲ್ಲಿ ನಡೆದ ನಿರಪರಾಧಿ ಅಬ್ದುನ್ನಾಸರ್ ಮಅದನಿ ಪರ ಕಾರ್ಯಕ್ರಮ ವೊಂದಕ್ಕೆ ನಾನು ಟಿ.ಎಂ.ಶಹೀದ್ ರನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಿದ್ದೆ. ತನ್ನೆಲ್ಲಾ ತುರ್ತು ಕಾರ್ಯಕ್ರಮ ಗಳನ್ನು ಬದಿಗೊತ್ತಿ ಅವರು ಆ ಕಾರ್ಯಕ್ರಮ ಕ್ಕೆ ಬಂದು ತುಂಬಾ ಹೊತ್ತು ವೇದಿಕೆಯಲ್ಲಿ ಕುಳಿತು ಮಅದನಿ ಯವರಿಗೆ ನ್ಯಾಯ ಸಿಗಬೇಕೆಂಬ ಬಗ್ಗೆ ತೀಕ್ಷ್ಣ ಭಾಷಣ ಮಾಡಿದ್ದರು.
ಟಿ.ಎಂ.ಶಹೀದ್ ರವರ ಪೇರಡ್ಕ ಜಮಾಅತ್ ನಲ್ಲಿ ನನ್ನ ಮಾವನ ಮಗ ಇಬ್ರಾಹಿಂ ಖಲೀಲ್ ಫೈಝಿ ಖತೀಬ್ ಆಗಿದ್ದಾಗ ಟಿ.ಎಂ.ಶಹೀದ್ ರ ಸಮಾಜಸೇವೆ,ರಾಜಕೀಯ ಪ್ರಭಾವದ ಬಗ್ಗೆ ಇಬ್ರಾಹಿಂ ಖಲೀಲ್ ಫೈಝಿ ಆಗಾಗ ನನ್ನಲ್ಲಿ ಹೇಳುತ್ತಿದ್ದರು. ಜನಪ್ರತಿನಿಧಿ ಅಲ್ಲದಿದ್ದರೂ ಒಬ್ಬ ಜನಪ್ರತಿನಿಧಿಯಂತೆಯೇ ಹಲವಾರು ಅಭಿವೃದ್ಧಿ ಕಾರ್ಯಗಳು ಅವರ ಮೂಲಕ ನಡೆಯುತ್ತಿದ್ದುದನ್ನು ಕಂಡು ನನಗೆ ಸಂತೋಷ ಮತ್ತು ಆಶ್ಚರ್ಯ ಆಗುತ್ತಿತ್ತು. ಅವರು ಒಬ್ಬ ಶಾಸಕ,ಸಚಿವ ನಾಗಿರುತ್ತಿದ್ದರೆ ನಾಡು ಎಷ್ಟೊಂದು ಅಭಿವೃದ್ಧಿ ಕಾಣುತ್ತಿತ್ತೆಂದು ನಾನು ಮನದಲ್ಲೇ ಭಾವಿಸುತ್ತಿದ್ದೆ!
ಕಳೆದ ಹಲವಾರು ವರ್ಷಗಳಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿರುವ ಟಿ.ಎಂ.ಶಹೀದ್ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ವಿವಿಧ ನಿಗಮ ಮಂಡಳಿ ಗಳ ಹುದ್ದೆಗಳನ್ನು ಕೂಡ ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು.
ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಅಭಿರುಚಿ ಬೆಳಸಿಕೊಂಡ ಟಿ.ಎಂ.ಶಹೀದ್ ಯಾರಿಗೂ ನೋವು ಕೊಡದ ಹೃದಯ ವಂತ ನಾಯಕ. ಎಲ್ಲಾ ಜಾತಿ, ಪಕ್ಷ,ಸಂಘಟನೆ ಯವರ ಜತೆ ಅನ್ಯೋನ್ಯತೆಯಿಂದಿರುವ ಟಿ.ಎಂ.ಶಹೀದ್ ರವರು ಕರ್ನಾಟಕದ ಭಾವೈಕ್ಯತೆಯ ರಾಯಭಾರಿ ಎಂದರೆ ಅತಿಶಯೋಕ್ತಿಯೆನಿಸದು.
ಕಾಂಗ್ರೆಸ್ ನ ರಾಜ್ಯ ನಾಯಕರಿಂದ ಹಿಡಿದು ರಾಷ್ಟ್ರ ನಾಯಕರ ತನಕ ಸರ್ವರ ಪ್ರೀತಿಗೆ ಪಾತ್ರರಾಗಿರುವ ಪಾದರಸ ಶೈಲಿಯ ವ್ಯಕ್ತಿತ್ವದ ಟಿ.ಎಂ.ಶಹೀದ್ ಮುಖ್ಯಮಂತ್ರಿ ಸಹಿತ ಸರ್ವ ಸಚಿವರ ಆಪ್ತರಾಗಿ ಗುರುತಿಸಿಕೊಂಡ ಅಪರೂಪದ ನಾಯಕ !!!
ಸುದೀರ್ಘ ರಾಜಕೀಯ ಜೀವನ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜುಲೈ 6 ರಂದು ಸುಳ್ಯದಲ್ಲಿ ಟಿ.ಎಂ.ಶಹೀದ್ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗೆಗಾಗಿ ಟಿ.ಎಂ.ಶಹೀದ್ ಅಭಿನಂದನಾ ಸಮಿತಿ ನಿರಂತರ ಶ್ರಮಿಸುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ತನ್ನಿಂದಾದ ರೀತಿಯಲ್ಲಿ ಸ್ಪಂದಿಸಿ ಜನ ಮಾನಸಗಳಲ್ಲಿ ಸ್ಥಾನ ಹಿಡಿದಿರುವ ಟಿ.ಎಂ.ಶಹೀದ್ ರವರ ಅಭಿನಂದನಾ ಕಾರ್ಯಕ್ರಮ ದಲ್ಲಿ ಸರ್ವರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ಸಿನ ಶಿಖರ ತಲುಪಿಸಬೇಕು.
ರಾಜ್ಯ ಕಾಂಗ್ರೆಸ್ ನ ಉನ್ನತ ಹುದ್ದೆಯಲ್ಲಿರುವ ಟಿ.ಎಂ.ಶಹೀದ್ ರಿಗೆ ಪ್ರಪಂಚದ ಸೃಷ್ಟಿಕರ್ತ ಅಲ್ಲಾಹು ಉಜ್ವಲ ರಾಜಕೀಯ ಭವಿಷ್ಯ ನೀಡಲಿ ಹಾಗೂ ದೀರ್ಘಾಯುಷ್ಯ, ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಮನದಾಳದಿಂದ ಪ್ರಾರ್ಥಿಸುತ್ತಿದ್ದೇನೆ.
✍️ ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.