(www.vknews. in) ; ಕಳೆದ ಸೋಮವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗೂಡಿನಬಳಿಯ ಶಾಹಿನ್ ಮೊಹಲ್ಲಾ (ಟಿಪ್ಪು ರೋಡ್) ರಸ್ತೆ ಮತ್ತು ಜಿಕೆ ಸುಲೈಮಾನ್ ಹಾಗೂ ಚೆಮೊನಕರ ಮನೆಗಳಿಗೆ ಗುಡ್ಡ ಜರಿದು ಹಾನಿಯಾಗಿದ್ದು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅಬ್ದುಲ್ ರಝಾಕ್ ಟಿ ಅವರ ವಿಶೇಷ ಮನವಿಯ ಮೇರೆಗೆ ಹಾಗೂ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಅವರ ಮುತುವರ್ಜಿಯಿಂದ ಇಂದು ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಕೆಲವೊಂದು ತುರ್ತು ಕ್ರಮ ಕೈಗೊಂಡು ಹಾಗೂ ಕಳೆದ 3 ವರ್ಷದಿಂದ ಗುಡ್ಡ ಜರಿಯುತ್ತಿದ್ದು ಅಲ್ಲಿಯ ನಿವಾಸಿಗಳಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದರು, ಶೀಘ್ರ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಪುರಸಭಾ ಮುಖ್ಯಾಧಿಕಾರಿ,ಕಂದಾಯ ಅಧಿಕಾರಿಗಳು ಹಾಗೂ ಸ್ಥಳೀಯ ಕೌನ್ಸಿಲರ್ಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.