ಜೈಪುರ (www.vknews.in) : 24ರ ಹರೆಯದ ಮಗಳನ್ನು ತನಗೆ ಇಷ್ಟವಾದ ಪುರುಷನನ್ನು ಮದುವೆಯಾಗಿದ್ದಕ್ಕೆ ಪಾಲಕರು ಕೊಂದು ಸುಟ್ಟು ಹಾಕಿದ್ದಾರೆ. ರಾಜಸ್ಥಾನದ ಜಲಾವರ್ನಲ್ಲಿ ಈ ಘಟನೆ ನಡೆದಿದೆ. ಪೋಷಕರು ಯುವತಿಯನ್ನು ಪತಿಯಿಂದ ಬಲವಂತವಾಗಿ ಕರೆದೊಯ್ದು ನಂತರ ಅವಳನ್ನು ಕೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಮನೆಯವರ ಅಪೇಕ್ಷೆಗೆ ವಿರುದ್ಧವಾಗಿ ಯುವತಿ ರವಿ ಭೀಲ್ ಎಂಬ ಯುವಕನನ್ನು ಮದುವೆಯಾಗಿದ್ದಳು. ಇದು ಕುಟುಂಬವನ್ನು ಕೆರಳಿಸಿತು. ಯುವತಿ ಮತ್ತು ಆಕೆಯ ಪತಿ ಕುಟುಂಬದಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದರು.
ಮಧ್ಯಪ್ರದೇಶದ ಹಳ್ಳಿಯೊಂದರ ಬ್ಯಾಂಕ್ಗೆ ಇಬ್ಬರು ಆಗಮಿಸುತ್ತಾರೆ ಎಂಬ ಸುಳಿವು ಪಡೆದ ನಂತರ ಮಹಿಳೆಯ ಕುಟುಂಬ ಅವರನ್ನು ಹುಡುಕಿಕೊಂಡು ಬ್ಯಾಂಕ್ ತಲುಪಿದೆ. ಯುವತಿಯನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದಿದ್ದಾರೆ. ಬಳಿಕ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಮಹಿಳೆಯ ಮೃತದೇಹವನ್ನು ಚಿತಾಗಾರಕ್ಕೆ ಕೊಂಡೊಯ್ದು ಸುಡಲಾಯಿತು.
ಪತಿ ಪೊಲೀಸರೊಂದಿಗೆ ಸ್ಥಳಕ್ಕೆ ತಲುಪುವಷ್ಟರಲ್ಲಿ ಮಹಿಳೆಯ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ಬಳಿಕ ಮನೆಯವರು ಪರಾರಿಯಾಗಿದ್ದಾರೆ. ಮಹಿಳೆಯ ಸುಟ್ಟ ದೇಹದ ಭಾಗಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.