(www.vknews. in) ದಕ್ಷಿಣ ಕರ್ನಾಟಕದಲ್ಲಿ ದೀನಿ ಸಂದೇಶವನ್ನು ಪ್ರಚಾರಪಡಿಸುವುದರಲ್ಲಿ ಮುಂಚೂಣಿಯಲ್ಲಿದ್ದ ತಾಜುಲ್ ಉಲಮಾ ಸಯ್ಯಿದ್ ಕುಂಞಿಕೋಯ ತಂಙಳ್ ಅವರ ಪುತ್ರರಾದ ಕೂರತ್ ತಂಙಳ್ ಎಂದೇ ಪ್ರಸಿದ್ಧರಾಗಿದ್ದ ಉಳ್ಳಾಲ ಖಾಝಿ ಅವರ ನಿಧನವು ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಸಂತಾಪ ಸೂಚಿಸಿದ್ದಾರೆ.
ಜಿಲ್ಲೆಯ ಧಾರ್ಮಿಕ ಕ್ಷೇತ್ರದಲ್ಲಿ ತಂಙಳ್ ಅವರು ಹಿರಿಯ ನೇತಾರರಾಗಿದ್ದು,ಸಾವಿರಾರು ಅನುಯಾಯಿ ವೃಂದಗಳನ್ನು ಅಗಲಿದ್ದಾರೆಂದು ಪ್ರಕಟಣೆಯಲ್ಲಿ ಮುಸ್ಲಿಂ ಲೀಗ್ ಹಿರಿಯ ಮುಖಂಡ ಅಡ್ವಕೇಟ್ ಎಸ್. ಸುಲೈಮಾನ್ ಮಂಗಳೂರು, ಜಂ-ಇಯ್ಯತ್ತುಲ್ ಫಲಾಹ್ ಮುಂದಾಳು ಸಯ್ಯಿದ್ ಶಾಹುಲ್ ಹಮೀದ್ ತಂಙಳ್, ಜಿಲ್ಲಾಧ್ಯಕ್ಷರಾದ ಸಿ. ಅಬ್ದುರ್ರಹ್ಮಾನ್ ಮಂಗಳೂರು ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ,ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೇಕಳ , ರಾಜ್ಯ ಸಮಿತಿ ಕೌನ್ಸಿಲರ್ ಎ.ಎಸ್.ಇ ಕರೀಮ್ ಕಡಬ , ಬಾಫಖಿ ತಂಙಳ್ ಫೌಂಡೇಶನ್ ಅಧ್ಯಕ್ಷರಾದ ಡಾ.ಶೇಖ್ ಬಾವ ಮಂಗಳೂರು , ಜಿಲ್ಲಾ ಉಪಾಧ್ಯಕ್ಷರಾದ ಸಯ್ಯಿದ್ ಬಂಗೇರುಕಟ್ಟೆ , ಇಸ್ಮಾಯಿಲ್ ಬಂದರು , ಯೂತ್ ಲೀಗ್ ಮುಖಂಡರಾದ ಅನೀಸ್ ತೋಡಾರು , ಹನೀಫ್ ಕುಂಜತ್ತೂರು , ನಿಸಾರ್ ಬೆಂಗರೆ , msf ಜಿಲ್ಲಾಧ್ಯಕ್ಷರಾದ ಝುಲ್ಛಿಕರ್ ಅಲೀ ಎಚ್.ಕಲ್ಲು ,ಪ್ರಧಾನ ಕಾರ್ಯದರ್ಶಿ ಅನಸ್ ಗೂಡಿನಬಳಿ , ಕೋಶಾಧಿಕಾರಿ ಇಶಾನ್ ಸವಣೂರು , ಸಂಘಟನಾ ಕಾರ್ಯದರ್ಶಿ ಸಫಾಹತ್ ಬೆಂಗ್ರೆ, ತೋಡಾರು ಪಂಚಾಯತ್ ಸದಸ್ಯರಾದ ಎಂಎ ಅಶ್ರಫ್ ಅವರು ಸಂತಾಪಸೂಚಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.