(www.vknews.in) : ಇಂತಹದ್ದೊಂದು ಪ್ರಶ್ನೆ ಸಹಜ ಮತ್ತು ಇದಕ್ಕೆ ಉತ್ತರ ಕೂಡಾ ” ಹೌದು” ಎಂದೇ ಆಗಿದೆ. ಟೂರಿಸಂ ಹೆಸರಲ್ಲಿ ಪ್ರಕೃತಿಯನ್ನು ಬೇಕಾ ಬಿಟ್ಟಿ ಬಳಸುವುದರ ಬಗ್ಗೆ ಹೆಚ್ಚಿನವರು ಮಾತನಾಡುತ್ತಾರೆ.ಆದರೆ ಅತಿಯಾದ ಟೀ ಎಸ್ಟೇಟ್ಗಳು ತಂದಿಕ್ಕುವ ಅಪಾಯದ ಬಗ್ಗೆ ಹೆಚ್ಚಿನವರು ಮಾತನಾಡುವುದಿಲ್ಲ.
ವೈಜ್ಞಾನಿಕವಾಗಿ ನೋಡಿದರೆ ನಮಗೆ ಈ ಸರಳ ಸತ್ಯದ ಅರಿವಾಗುತ್ತದೆ. ವಯನಾಡಿನ ಜನರ ಮುಖ್ಯ ಆದಾಯ ಮೂಲಗಳಲ್ಲಿ ಟೀ ಎಸ್ಟೇಟ್ ಪ್ರಮುಖವಾದುದು. ವಯನಾಡು ಮೂಲತಃ ಬೆಟ್ಟ ಗುಡ್ಡ ಮತ್ತು ಕಾಡುಗಳಿಂದಾವೃತವಾದ ಸುಂದರ ನಾಡು. ಟೀ ಉದ್ಯಮವು ಹೆಚ್ಚೆಚ್ಚು ಲಾಭದಾಯಕವಾಗುತ್ತಾ ಬೆಳೆದಂತೆ ಮನುಷ್ಯನಿಗೆ ಇನ್ನಷ್ಟು , ಮತ್ತಷ್ಟು ಬೇಕೆಂಬ ದುರಾಸೆ ಬೆಳೆಯಿತು.ಮನುಷ್ಯನ ಆಸೆಗೆ ಮಿತಿಯುಂಟೇ..?
ನೂರಾರು ವರ್ಷಗಳಿಂದ ಅಲ್ಲಿ ಬೆಳೆದ ಸಹಸ್ರಾರು ಹೆಮ್ಮರಗಳನ್ನು ಕಡಿದು ಆ ಜಾಗವನ್ನೆಲ್ಲಾ ಟೀ ಎಸ್ಟೇಟ್ ಆಗಿ ಪರಿವರ್ತಿಸಿದರು. ದೊಡ್ಡ ದೊಡ್ಡ ಹೆಮ್ಮರಗಳು ಮಣ್ಣಿನ ಸವಕಳಿಯನ್ನು ತಡೆಯುತ್ತಿತ್ತು.ಅವು ನೂರಾರು ವರ್ಷಗಳಿಂದ ಮಣ್ಣಿನೊಂದಿಗೆ ಬೆಸೆದು ತಮ್ಮ ಮತ್ತು ಮಣ್ಣಿನ ಬಂಧವನ್ನು ಗಟ್ಟಿಗೊಳಿಸಿತು. ಆದರೆ ಅದರಿಂದ ಮನುಷ್ಯನಿಗೆ ಭೌತಿಕ ಲಾಭವೇನೂ ಇಲ್ಲ. ಅವನ್ನೆಲ್ಲಾ ಧರೆಗುರುಳಿಸಿ ಟೀ ಎಸ್ಟೇಟ್ ಮಾಡಿದರೆ ವರ್ಷದಲ್ಲೇ ಬೃಹತ್ ಆದಾಯ ಗಳಿಸಬಹುದು ಎಂದು ಹೆಮ್ಮರಗಳನ್ನು ಕಡಿದು ಟೀ ಎಸ್ಟೇಟ್ ನಿರ್ಮಿಸಿದರು.ದೊಡ್ಡ ದೊಡ್ಡ ಗಾತ್ರದ ಹೆಮ್ಮರಗಳು ಐವತ್ತು- ನೂರು ವರ್ಷಗಳಿಂದ ಭದ್ರವಾಗಿ ಹಿಡಿದಿಟ್ಟ ಮಣ್ಣನ್ನು ಪುಟ್ಟ ಪುಟ್ಟ ಟೀ ಗಿಡಗಳಿಗೆ ಹಿಡಿದಿಡಲು ಸಾಧ್ಯವೇ…? ವಯನಾಡಿನ ಭೂ ಕುಸಿತಕ್ಕೆ ಹೀಗೆ ಹೆಮ್ಮರಗಳನ್ನು ಧರೆಗುರುಳಿಸಿ ಅವುಗಳ ಜಾಗದಲ್ಲಿ ನೆಡಲಾದ ಟೀ ಎಸ್ಟೇಟ್ಗಳೂ ಕಾರಣ.
— ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.