ಬಂಟ್ವಾಳ(www.vknews.in): ಸಜೀಪ ಮುನ್ನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಾವರ ಕೇಂದ್ರದ ಕಟ್ಟಡವು ಹಲವು ವರ್ಷಗಳಿಂದ ಸಂಪೂರ್ಣ ಶಿಥಿಲಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ. 1959ರಲ್ಲಿ ಈ ಶಾಲಾ ಕಟ್ಟಡ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಕಟ್ಟಡದ ಬಹುಭಾಗ ಮಣ್ಣಿನಿಂದ ನಿರ್ಮಿಸಿರುವ ಕಾರಣ ಮಳೆ ನೀರು ಬಿದ್ದು ಕಳೆದ ಐದಾರು ವರ್ಷಗಳಿಂದ ಮಣ್ಣಿನ ಪದರುಗಳು ಕಳಚಿ ಬೀಳುತ್ತಿವೆ. ಕಟ್ಟಡದ ಹಂಚಿನ ಛಾವಣಿಗೆ ತುಕ್ಕು ಹಿಡಿದು ಹೊರ ಚಾಚಿಕೊಂಡಿವೆ. ಗೋಡೆಗಳು ಬಿರುಕು ಬಿಟ್ಟಿದ್ದರಿಂದ ಮಕ್ಕಳು, ಸಿಬ್ಬಂದಿ ನಿತ್ಯ ಪ್ರಾಣಭಯದಲ್ಲೇ ಇರುವಂತಾಗಿದೆ ಎಂದು ಶಾಲಾ ಮುಖ್ಯಧ್ಯಾಪಕರಾದ ರವಿಕುಮಾರ್ ಅವರು ತಿಳಿಸಿದರು ಈ ಶಾಲೆಯಲ್ಲಿ ಪ್ರಸ್ತುತ 156 ವಿದ್ಯಾರ್ಥಿಗಳಿದ್ದು ಕಟ್ಟಡದ ದುಸ್ಥಿತಿ ಕಂಡ ಪಾಲಕರು, ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಇತ್ತೀಚಿಗೆ ಈ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಇಳಿಕೆಯಾಗಿದೆ. ಶಿಥಿಲಗೊಂಡಿರುವ ಈ ಶಾಲೆಯ ಅಭಿವೃದ್ಧಿಗಾಗಿ ಹಲವಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಸ್ಥಳೀಯ ಪಂಚಾಯತ್ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ ಕಳೆದ ವಾರದಿಂದ ವಿಪರೀತ ಗಾಳಿ,ಮಳೆ ಆಗುತ್ತಿದ್ದು ಇಲ್ಲಿ ಕಲಿಯುತ್ತಿರುವ ಮಕ್ಕಳ ಸುರಕ್ಷತೆ ಖಾತ್ರಿ ಪಡಿಸಲು ಸ್ಥಳೀಯ ಪಂಚಾಯತ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿಯೂ ಇತ್ತ ಯಾರೂ ತಿರುಗಿ ಕೂಡ ನೋಡಿಲ್ಲ ಎಂದು ಹಳೆ ವಿದ್ಯಾರ್ಥಿಯಾದ ಹಾಕಿಂ ಕೋಟೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ಶಾಲೆಯ ಗೋಡೆ ಬಿರುಕು ಬಿಟ್ಟು ಸಂಪೂರ್ಣ ಶಿಥಿಲಗೊಂಡು ಅಪಾಯದ ಮುನ್ಸೂಚನೆ ನೀಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು. 65ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡಬೇಕೆನ್ನುವುದು ಗ್ರಾಮಸ್ಥರ ಒಕ್ಕೊರೊಳ ಅಗ್ರಹ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಶಾಲೆಯ ಹಳೆ ವಿದ್ಯಾರ್ಥಿಯಾದ ಅನ್ಸಾರ್ ರಾಯಲ್ ಅವರು ತಿಳಿಸಿದ್ದಾರೆ.ನಿಯೋಗದಲ್ಲಿ ಪಂಚಾಯತ್ ಸದಸ್ಯರಾದ ಸಿದ್ದೀಕ್ ಅರಫಾ, ಜಮಾಲ್ ರಾಯಲ್ ಹಾಗೂ ಸ್ಥಳೀಯರಾದ ಉಬೈದುಲ್ಲಾ ಅವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.