ಮುಂಬಯಿ (www.vknews. in) : ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಹಿಳಾ ಉಪಸಮಿತಿಯ ಸಂಯೋಜನೆಯಲ್ಲಿ ಜುಲೈ 28 ರವಿವಾರದಂದು ಥಾಣೆ ಪಶ್ಚಿಮದ ನಾಮ್ದೇವ್ ವಾಡಿ ಸಭಾಗೃಹದಲ್ಲಿ ಆಷಾಢೋತ್ಸವ ಮತ್ತು ಮನೋರಂಜನಾ ಕಾರ್ಯಕ್ರಮ ಜರಗಿತು. ಮಹಿಳಾ ಸದಸ್ಯೆಯರು ಕುಂದಾಪುರ ಶೈಲಿಯ ಸುಮಾರು 36 ಬಗೆಯ ವಿವಿಧ ಖಾದ್ಯ-ವೈವಿಧ್ಯಗಳನ್ನು ಹಾಗೂ ಆಷಾಢ ಮಾಸದಲ್ಲಿ ಊರುಗಳಲ್ಲಿ ತಯಾರಿಸುವ ತಿಂಡಿ-ತಿನಿಸುಗಳನ್ನು ಸಮುದಾಯದ ಜನತೆಗೆ ಆಷಾಢೋತ್ಸವದ ಮೂಲಕ ಪರಿಚಯಿಸಿದರು.
ಮನೋರಂಜನೆಯ ಅಂಗವಾಗಿ ಸಂಘದ ಸದಸ್ಯರು ಮತ್ತು ಮಕ್ಕಳು ಸಮೂಹ ಗೀತೆ, ನೃತ್ಯ, ಪ್ರಹಸನ ಮತ್ತು ಕನ್ನಡ ಭಕ್ತಿಗೀತೆ, ಚಿತ್ರಗೀತೆಗಳನ್ನು ಹಾಡುವುದರ ಮೂಲಕ ನೆರೆದ ಸಮುದಾಯ ಬಾಂಧವರ ಮನರಂಜಿಸಿದರು. ನ್ಯಾಯವಾದಿ ಶಕುಂತಲಾ ಆನಂದ ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಆಷಾಢೋತ್ಸವಕ್ಕೆ ಶುಭ ಕೋರಿ ಸಂಘಟನೆ ಬಲಿಷ್ಠ ಪಡಿಸುವಲ್ಲಿ ತಾವೆಲ್ಲರು ಶ್ರಮಿಸಬೇಕು ನಾವು ಮುಂದೆ ಹೋಗಲೇ ಬೇಕೆಂಬ ಗಟ್ಟಿ ನಿರ್ಧಾರದಿಂದ ಮುನ್ನೆಡೆದಾಗ ಯಶಸ್ಸು ಪಡೆಯಲು ಸಾಧ್ಯವಾಗುವುದು ಹಿಂದೆ ಊರಿನಲ್ಲಿ ಆಚರಿಸುತ್ತಿರುವ ಹಬ್ಬವನ್ನು ಇಂದು ನಾವೆಲ್ಲರು ಸೇರಿಕೊಂಡು ಇಲ್ಲಿ ಸಂಭ್ರಮದಿAದ ಆಚರಿಸುತ್ತಿದ್ದೇವೆ ಮಹಿಳಾ ಸಮಿತಿಯ ಕಾರ್ಯ ಶ್ಲಾಘನೀಯ ಇಂತಹ ಉತ್ಸವಗಳು ನಿರಂತರವಾಗಿ ನೆಡೆಯುತ್ತಿದ್ದಲ್ಲಿ ಮುಂಬರುವ ಯುವ ಪೀಳಿಗೆ ಕೂಡ ಇದನ್ನು ಅನುಸರಿಸಿಕೊಂಡು ಹೋಗಬಹುದು ಎಂದರು
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೂರ್ಯ ಎಸ್. ಪೂಜಾರಿ ಮಾತನಾಡುತ್ತಾ ನಾವು ಹಿಂದೆ ಸಾಕಷ್ಟು ಬಡತನವನ್ನು ನೋಡಿದ್ದೇವೆ ಇಂದಿನ ಯುವ ಪೀಳಿಗೆಗೆ ಆ ಬಡತನದ ಅರಿವು ಇಲ್ಲ ಅಂದು ಅನುಭವಿಸಿದ ಬಡತನದಿಂದ ನಾವು ಮುಕ್ತರಾಗಿದ್ದೇವೆ ಪ್ರತಿ ವರ್ಷ ನಮ್ಮ ಸಂಘದ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಈ ಆಷಾಢೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ. ಈ ವರ್ಷ ಜನವರಿಯಲ್ಲಿ ಕ್ರೀಡೋತ್ಸವ ನೆಡೆಸಲು ಸಾಧ್ಯವಾಗಿಲ್ಲ ಎಕೆಂದರೆ ಕಳೆದ ವರ್ಷ ನಾವು ಒಂದು ನೂತನ ಕಾರ್ಯಾಲಯ ಖರೀದಿಸಿರುವುದರಿಂದ ಅದರ ಶುಭಾರಂಭ ಸೆಪ್ಟೆಂಬರ್ನಲ್ಲಿ ಮಾಡಿದ್ದೇವೆ ಅದಕ್ಕಾಗಿ ವಾರ್ಷಿಕೋತ್ಸವ ಜನವರಿಯಲ್ಲಿ ಆಯಿತು.
ಬಳಿಕ ಶಾಲಾ ಮಕ್ಕಳ ಪರೀಕ್ಷೆ ಆರಂಭವಾಯಿತು ಅದ್ದರಿಂದ ಕ್ರೀಡೋತ್ಸವದಲ್ಲಿ ಭಾಗವಹಿಸುವವರಿಗೆ ಅನಾನುಕೂಲವಾಗಬಾರದು ಎಂಬ ನಿಟ್ಟಿನಲ್ಲಿ ಕ್ರೀಡೋತ್ಸವವನ್ನು ಮುಂದೂಡಲಾಗಿದ್ದು ಬಹುತೇಕ ಅದು ನವೆಂಬರ್ನಲ್ಲಿ ಆಗಬಹುದು. ನಮ್ಮ ಸಂಘದಿಂದ ಅಸಹಾಯಕರಿಗೆ ವೈದ್ಯಕೀಯ ನೆರವು ನೀಡುತ್ತಿದ್ದು ಊರಿನಿಂದ ಸಾಕಷ್ಟು ಅರ್ಜಿಗಳು ಬರುತ್ತಿದೆ ಸೂಕ್ತ ದಾಖಲೆಗಳೊಂದಿಗೆ ಬಂದ ಅರ್ಜಿಗೆ ಸಂಘದ ವತಿಯಿಂದ ನೆರವು ನೀಡಿರುವುದಲ್ಲದೆ ಇನ್ನು ಕೆಲವೊಮ್ಮೆ ಸಮಿತಿಯವರು ಸೇರಿ ಧನ ಸಂಗ್ರಹಿಸಿ ಹೆಚ್ಚುವರಿ ಮೊತ್ತದ ಸಹಾಯಧನ ನೀಡಿದ ನಿದರ್ಶನಗಳಿವೆ, ಅದು ಅಲ್ಲದೆ ಕೆಲವು ಸಂದರ್ಭದಲ್ಲಿ ನಾನೇ ಸ್ವಂತ ನನ್ನಿಂದಾದಷ್ಟು ಧನಸಹಾಯ ಮಾಡಿರುವುದು ಕೂಡ ಇದೆ.
ಅಸಹಾಯಕರಿಗೆ ನೆರವು ನೀಡಿರುವುದಲ್ಲದೆ ನನ್ನಿಂದಾದ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿರುವ ಆತ್ಮತೃಪ್ತಿ ಇದೆ. ಸಂಘದಲ್ಲಿ ನೆಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಉಪಸ್ಥಿತರಿದ್ದು ಸಂಘಟನೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸುವುದರೊಂದಿಗೆ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು
ಈಗಾಗಲೇ ಸಂಘದಿಂದ ಹಲವಾರು ಸೌಲಭ್ಯಗಳು ಸದಸ್ಯರಿಗೆ ದೊರಕುತ್ತಿದೆ ಅದರ ಸದುಪಯೋಗವನ್ನು ಸದಸ್ಯರು ಪಡೆದುಕೊಂಡು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ತಾವೆಲ್ಲರು ಶ್ರಮಿಸಬೇಕು ಎಂದರು.
ಸಭಾಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉದ್ಘಾಟಕರಾದ ನ್ಯಾಯವಾದಿ ಶಕುಂತಲಾ ಆನಂದ ಪೂಜಾರಿ, ಮುಖ್ಯ ಅತಿಥಿ ಸುಜಾತ ವಿಶ್ವನಾಥ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ, ಯುವ ಅಭ್ಯುದಯ ಸಮಿತಿಯ ಉಪಕಾರ್ಯಾಧ್ಯಕ್ಷ ಉಮೇಶ ಎನ್. ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರುಗಳಾದ ಆನಂದ ಎಮ್. ಪೂಜಾರಿ ಮತ್ತು ಮಂಜುನಾಥ ಬಿಲ್ಲವ ಶಿರೂರು, ಉಪಾಧ್ಯಕ್ಷ ನರಸಿಂಹ ಎಮ್. ಬಿಲ್ಲವ, ಆಂತರಿಕ ಲೆಕ್ಕ ಪರಿಶೋಧಕ ರಾಜೀವ್ ಎಮ್. ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಸುಶೀಲ ಎಸ್. ಪೂಜಾರಿ, ವಿಜಯ ಎಮ್. ಚಂದನ್, ಕಮಲ ಎಮ್. ಪೂಜಾರಿ ಪ್ರಾರ್ಥಿಸಿದರೆ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ ಸ್ವಾಗತಿಸಿದರೆ ಕೊನೆಯಲ್ಲಿ ಜೊತೆ ಕಾರ್ಯದರ್ಶಿ ಶಾರದಾ ಬಿ. ಪೂಜಾರಿ ವಂದಿಸಿದರು.
ಮಹಿಳಾ ಸಮಿತಿಯ ಉಪಕಾರ್ಯಾಧ್ಯಕ್ಷೆಯರಾದ ಯಶೋದಾ ಎಸ್. ಪೂಜಾರಿ ಮತ್ತು ರೇಖಾ ಎನ್. ಬಿಲ್ಲವ, ಜೊತೆ ಕಾರ್ಯದರ್ಶಿ ಕುಸುಮ ಎ. ಪೂಜಾರಿ, ಸದಸ್ಯೆಯರಾದ ಬೇಬಿ ಆರ್ ಪೂಜಾರಿ, ಸುಮತಿ ಎಸ್. ಪೂಜಾರಿ, ಗಿರಿಜಾ ಕೆ. ಹೊಕ್ಕೋಳಿ, ಸುಶೀಲ ಆರ್. ಪೂಜಾರಿ, ಪೂರ್ಣಿಮಾ ಎಸ್. ಪೂಜಾರಿ, ನಾಗರತ್ನ ಎನ್. ಪೂಜಾರಿ ಸಹಕರಿಸಿದರು. ಮಹಿಳಾ ಸಮಿತಿಯೊಂದಿಗೆ ಸಂಘದ ಸದಸ್ಯೆಯರಾದ ಯಶೋದಾ ಪಿ. ಪೂಜಾರಿ, ಶೋಭಾ ಎ. ಪೂಜಾರಿ, ಗೀತಾ ಎಸ್. ಪೂಜಾರಿ, ಸುಮತಿ ಎಮ್. ಪೂಜಾರಿ, ಮತ್ತು ರಾಧಾ ಎಸ್. ಪೂಜಾರಿ ಆಷಾಢೋತ್ಸವಕ್ಕಾಗಿ ವಿವಿಧ ಖಾದ್ಯಗಳನ್ನು ತಯಾರಿಸಿದ್ದರು.
ಮನೋರಂಜನಾ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಹರೀಶ ಎನ್. ಪೂಜಾರಿ ಮತ್ತು ಸಭಾ ಕಾರ್ಯಕ್ರಮವನ್ನು ಲಕ್ಷ್ಮಣ ಪೂಜಾರಿ ಕೊಡೇರಿ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.