ಬೆಂಗಳೂರು (www.vknews.in) : ಭಾರತವು 78ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಪ್ರಮುಖ ಜೀವನಶೈಲಿ ಮತ್ತು ಮೊಬೈಲ್ ಪರಿಕರಗಳ ಬ್ರ್ಯಾಂಡ್ ಆಗಿರುವ ಕೆಡಿಎಂ “ಕೆಡಿಎಂ ಭಾರತ್ ಕಾ ಚಾರ್ಜರ್” ಎಂಬ ತನ್ನ ಹೊಸ ಪ್ರಚಾರ ಅಭಿಯಾನ ಆರಂಭಿಸಿದೆ. ಈ ಜಾಹೀರಾತಿನಲ್ಲಿ ಕೆಡಿಎಂ ಮೊಬೈಲ್ ಫೋನ್ ಚಾರ್ಜರ್ಗಳನ್ನು ಪ್ರದರ್ಶಿಸಲಾಗುತ್ತದೆ.
ಇಂದು ಮೊಬೈಲ್ ಫೋನ್ಗಳು ‘ಅಭಿವೃದ್ಧಿಯ ಸಾಧನ’ಗಳಾಗಿ ಬದಲಾವಣೆ ಹೊಂದಿವೆ. ಜೊತೆಗೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ವಿಶೇಷವಾಗಿ ಕೆಡಿಎಂ ಚಾರ್ಜರ್ ಗಳು ಮೊಬೈಲ್ ಚಾರ್ಜ್ ಮಾಡಿದಂತೆ ಬೇರೆ ಯಾವ ಚಾರ್ಜರ್ ಚಾರ್ಜ್ ಮಾಡುವುದಿಲ್ಲ. ಹಾಗಾಗಿ ಕೆಡಿಎಂ ಚಾರ್ಜರ್ ಗಳು ನಿಜವಾಗಿಯೂ ಭಾರತ್ ಕಾ ಚಾರ್ಜರ್ ಆಗಿವೆ. ಈ ಚಾರ್ಜರ್ ಗಳು ಮೊಬೈಲ್ ಮತ್ತು ದೇಶದ ಆರ್ಥಿಕತೆ ಎರಡನ್ನೂ ಚಾರ್ಜ್ ಮಾಡುತ್ತವೆ.
ಕೈನೆಟಿಕ್ ಡೈನಾಮಿಕ್ ಮೊಬೈಲ್ ಚಾರ್ಜಿಂಗ್ ಟೆಸ್ಟಿಂಗ್ ಟೆಕ್ನಾಲಜಿ (ಕೆಡಿಎಂ-ಟಿ ಟೆಕ್ನಾಲಜಿ) ಹೊಂದಿರುವ ಕೆಡಿಎಂ ಚಾರ್ಜರ್ 100% ಸ್ಥಳೀಯವಾಗಿ ತಯಾರಿಸಿರುವ ಉತ್ಪನ್ನವಾಗಿದೆ. ಭಾರತದಲ್ಲಿ ಈ ಚಾರ್ಜರ್ ಅನ್ನು ನಿಮ್ಮ ಮೊಬೈಲ್ ಫೋನ್ ಅತಿಯಾಗಿ ಬಿಸಿ ಆಗದಂತೆ, ಅಧಿಕ ಚಾರ್ಜ್ ಆಗದಂತೆ ಮತ್ತು ವೋಲ್ಟೇಜ್ ಏರಿಳಿತಗಳಿಂದ ರಕ್ಷಿಸುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ತಯಾರಿಸಲಾಗುತ್ತದೆ. ಕೆಡಿಎಂ ಸಂಸ್ಥೆಯು ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಿ ಮಹಿಳಾ ಸಬಲೀಕರಣದಲ್ಲಿಯೂ ತೊಡಗಿಸಿಕೊಂಡಿದೆ. 20230ರ ವೇಳೆಗೆ ಕಂಪನಿಯು ಕೆಡಿಎಂ ಟ್ರೈನಿಂಗ್ ಆಂಡ್ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ಮೂಲಕ 50000 ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುವ ಗುರಿಯನ್ನು ಹೊಂದಿದೆ.
ಈ ಕುರಿತು ಮಾತನಾಡಿದ ಕೆಡಿಎಂ ಸಂಸ್ಥಾಪಕ ಎನ್ ಡಿ ಮಾಲಿ, “ಭಾರತವು 2047ರ ವೇಳೆಗೆ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲಿದ್ದು, ಆ ಕಾರಣದಿಂದ ನಾವು ಭಾರತದಲ್ಲಿ ಎಲ್ಲಾ ಕೆಡಿಎಂ ಉತ್ಪನ್ನಗಳನ್ನು ತಯಾರಿಸಲು ಬಯಸುತ್ತೇವೆ” ಎಂದು ಹೇಳಿದರು.
ಕೆಡಿಎಂ ನ ಸಹ-ಸಂಸ್ಥಾಪಕರಾದ ಬಿ ಹೆಚ್ ಸುತಾರ್, “ಎಲ್ಲಾ ಮನೆಯಲ್ಲೂ ಕೆಡಿಎಂ ಎಂಬ ಘೋಷವಾಕ್ಯಕ್ಕೆ ಪೂರಕವಾಗಿ ಮುಂದೆ ಸಾಗುವ ಉದ್ದೇಶ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಗುಣಮಟ್ಟದ ಕೆಡಿಎಂ ಚಾರ್ಜರ್ ಮೂಲಕ ಪ್ರತಿಯೊಬ್ಬ ಭಾರತೀಯ ಮನೆಯನ್ನು ತಲುಪಲು ಬಯಸುತ್ತೇವೆ. ನಮ್ಮ ಚಾರ್ಜರಕ್ ಮೂಲಕ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಉದ್ದೇಶವನ್ನೂ ಹೊಂದಿದ್ದೇವೆ” ಎಂದರು.
ಕೆಡಿಎಂ ಚಾರ್ಜರ್ಗಳು ಭಾರತದಾದ್ಯಂತ ಇರುವ ವಿತರಕರು, ಡೀಲರ್ ಗಳು ಮತ್ತು ರಿಟೇಲ್ ವ್ಯಾಪಾರ ಅಂಗಡಿಗಳಲ್ಲಿ ಲಭ್ಯವಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.