(www.vknews.in) ; ಮದರಂಗಿ ಪತ್ರಿಕೆ ಪ್ರಕಾಶಕ ಹಾಗೂ ಆಕ್ಸಿಬ್ಲೂ ಮಿನರಲ್ ವಾಟರ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಡಿ.ಐ.ಅಬೂಬಕರ್ ಕೈರಂಗಳ ಅವರ ಮಗಳ ಪತಿ ಶಮೀರ್ ಅವರು ವಿದೇಶದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿರುವ ತರುಣ.
ತನ್ನ ತಾಯ್ನಾಡು ಭಾರತ ದೇಶದ ಮೇಲಿನ ಅದಮ್ಯ ಪ್ರೀತಿಯ ಸಂಕೇತವಾಗಿ ತನ್ನ ಸ್ನೇಹಿತರಿಗೆ ಸ್ವಾತಂತ್ರ್ಯೋತ್ಸವ ದಿನವಾದ ಇಂದು ಕೇಕ್ ವಿತರಿಸಿ ಜುಬೈಲ್ ನಲ್ಲಿ ಅವರು ವಿಶಿಷ್ಟ ರೀತಿಯಲ್ಲಿ ಸಂಭ್ರಮ ಪಟ್ಟರು !
ಡಿ.ಐ.ಅಬೂಬಕರ್ ಕೈರಂಗಳ ಅವರ ಮಗಳ ಮದುವೆಗೆ ನಾನು ಹೋಗಲೇಬೇಕಾಗಿತ್ತು. ಯಾಕೆಂದರೆ ಡಿ.ಐ.ಸರ್ ಅವರು ನನಗೆ ಅಷ್ಟು ಆತ್ಮೀಯರು. ಆದರೆ ಏನೋ… ಕಾರಣಾಂತರಗಳಿಂದ ಕೊಡಾಜೆ ಇಂಡಿಯನ್ ಆಡಿಟೋರಿಯಂ ನಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಹಲವಾರು ಮಹಾನ್ ವ್ಯಕ್ತಿಗಳು ಭಾಗವಹಿಸಿದ ಮದುವೆಗೆ ನನಗೆ ಹೋಗಲಾಗಿರಲಿಲ್ಲ.
ಭಾರತ ಸ್ವಾತಂತ್ರ್ಯ ದಿನವಾದ ಇಂದು ಡಿ.ಐ.ಅಬೂಬಕರ್ ಕೈರಂಗಳ ಅವರ ಅಳಿಯನ ದೇಶಪ್ರೇಮವನ್ನು ಕಂಡು ಸಂತೋಷವಾಯಿತು. ಮಾದರೀ ಯುವಕನಾಗಿರುವ ಶಮೀರ್ ಡಿ.ಐ.ಸರ್ ಅವರಿಗೆ ಹೇಳಿ ಮಾಡಿಸಿದ ಅಳಿಯ. ಶಮೀರ್ ದಂಪತಿಗಳ ದಾಂಪತ್ಯ ಜೀವನದಲ್ಲಿ ಅಲ್ಲಾಹು ಸಮೃದ್ಧಿ ನೀಡಲಿ. ಡಿ.ಐ.ಅಬೂಬಕರ್ ಕೈರಂಗಳ ಹಾಗೂ ಅವರ ಕುಟುಂಬದವರಿಗೆ ಕರುಣಾನಿಧಿ ಅಲ್ಲಾಹು ಸಕಲೈಶ್ವರ್ಯಗಳನ್ನು ಕರುಣಿಸಲಿ.
— ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.