(www.vknews. in) ; ಹಿಂದಿನ B,J.P. ಸರಕಾರದ ಕೃಪೆಯಿಂದ ಪುತ್ತೂರಿನ ವಿವಿಧ ಇಲಾಖೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಭ್ರಷ್ಟ ಅಧಿಕಾರಿಗಳು ಹೇರಳ ಅಕ್ರಮ ಸಂಪತ್ತು ಮಾಡಿ ಮತ್ತೆ ಪುತ್ತೂರಲ್ಲೇ ನೆಲೆಯೂರಿದ್ದಾರೆ. ಶಾಸಕರುಗಳ- ಸಚಿವರುಗಳ ಮನೆ ಬಾಗಿಲಲ್ಲಿ ಜೊಲ್ಲು ಸುರಿಸುತ್ತಾ ಅಂಗಲಾಚಿ ಕಾದು ಕಾದು ಹೇಗಾದರೂ ತಮ್ಮ ವಗಾ೯ವಣೆಯನ್ನು ರದ್ದು ಪಡಿಸಲು ಯಶಸ್ವಿಯಾಗಿದ್ದಾರೆ.
ಮರಗಳ್ಳರೊಂದಿಗೆ ಶಾಮೀಲಾಗಿ ಅರಣ್ಯ ಲೂಟಿಯ ಪಾಲುದಾರರಾಗಿರುವ ಇಲ್ಲಿನ ಅರಣ್ಯಾಧಿಕಾರಿಗಳು ಬಾರೀ ಹಣ ನುಂಗಿ, 8-10 ವರ್ಷಗಳಿಂದ ಇಲ್ಲೇ ತಳವೂರಿದ ತಾಲೂಕು ಪಂಚಾಯತ್ ಕಚೇರಿಯ ಸಿಬ್ಬಂದಿಗಳು, ಜನ ಸಾಮಾನ್ಯ ರನ್ನು ಪೀಡಿಸಿ ಹಣ ಮಾಡುತ್ತಿರುವ ತಾಲೂಕು ಕಚೇರಿಯ ಸಿಬ್ಬಂದಿಗಳು ಕಾಮಗಾರಿಗಳಲ್ಲಿ ಪರ್ಸಂಟೇಜು ಪಡೆದು ಕೊಬ್ಬಿರುವ ಎಂಜಿನಿಯರುಗಳು, ಲಂಚದ ಶರಾಬು ಕುಡಿಯುತ್ತಿರುವ ಅಬಕಾರಿ ಅಧಿಕಾರಿಗಳು, ಕೃಷಿಯುತ್ಪನ್ನ ಸಮಿತಿಯನ್ನು ಬುಡದಿಂದಲೇ ಕೊರೆಯುವ ಎದುರು ಬಾಲದ ಹೆಗ್ಗಣಗಳೂ, ವಿದ್ಯಾ ಇಲಾಖೆಯ ಬಿಳಿ ಕಾಗೆಗಳೂ, ಸಾರಿಗೆ ಇಲಾಖೆಯಲ್ಲಿ ಲಂಚಕ್ಕಾಗಿ ಬಾಯಿ ಬಿಡುತ್ತಿರುವ ರಣ ಹದ್ದುಗಳು, ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳಿಂದಲೂ ಲಂಚ ಹೀರುವ ಸರಕಾರಿ ವೈದ್ಯ ಶಿಖಾಮಣಿಗಳು, ಕೆಲ ಲಂಚಕೋರ ಪೋಲೀಸರು, ನಗರ ಸಭಾ ಕಚೇರಿಯ ಕಾಮುಕ-ಭ್ರಷ್ಟ ಅಧಿಕಾರಿಗಳು ಇವರೆಲ್ಲರೂ ಇರುವಷ್ಟು ಕಾಲ ಪುತ್ತೂರು ಉದ್ಧಾರ ಆಗುವುದಿಲ್ಲ.
ಆದುದರಿಂದ ದಿಟ್ಟೆದೆಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕೆಂಗಣ್ಣು ಬೀರುವ ಜನಪ್ರಿಯ ಶಾಸಕ ಶ್ರೀ ಆಶೋಕ್ ಕುಮಾರ್ ರೈಗಳು ಪುತ್ತೂರಿನ ದುಷ್ಟ-ಭ್ರಷ್ಟ ಅಧಿಕಾರಿಗಳನ್ನು ನಿದಾ೯ಕ್ಷಿಣ್ಯವಾಗಿ ನೀರಿಲ್ಲದ ಕಡೆ ವಗಾ೯ಯಿಸಿ ಲಂಚ ಕೋರತನವನ್ನು ಅಳಿಸಿದರೆ ಮಾತ್ರ ಜನೋಪಯೋಗಿ ಕಾರ್ಯಕ್ರಮಗಳು ಯಶಸ್ವಿ ಯಾಗಿ ಅನುಷ್ಠಾನಗೊಳ್ಳಲು ಸಾಧ್ಯ. ವಗಾ೯ವಣೆಯನ್ನು ರದ್ದು ಪಡಿಸಿ ಕೊಂಡ ಪುತ್ತೂರಿನ ಭ್ರಷ್ಟ – ಪರಮ ನೀಚ ಅಧಿಕಾರಿಗಳ ಭ್ರಷ್ಟಾಚಾರದ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಹಾಗೂ ಶಾಸಕರ ಗಮನಕ್ಕೆ ತರಲಿದ್ದೇವೆ.
ಶೇಖ್-ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.