ಮಂಗಳೂರು (www.vknews.in) : 2024 ರಲ್ಲಿ ರಾಜ್ಯದ ಎಸ್. ಎಸ್. ಎಲ್. ಸಿ. ಮತ್ತು ಪಿ. ಯು. ಸಿ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಸಾಮಾನ್ಯ , ಮುಸ್ಲಿಂ , ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕಗಳನ್ನು ನೀಡಿ ಮತ್ತು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವೊಂದು ಆಗಸ್ಟ್ 18, ಆದಿತ್ಯವಾರದಂದು ಸಯ್ಯದ್ ಅಬ್ದುಲ್ ರಹಿಮಾನ್ ಬಾಫಕಿ ತಂಘಳ್ ಫೌಂಡೇಶನ್ ಕರ್ನಾಟಕ, ಲೈಪ್ ಪಬ್ಲಿಷಿಂಗ್ ಮಂಗಳೂರು ಹಾಗು ಎಮ್. ಎಸ್. ಎಫ್. ಕರ್ನಾಟಕ ಇವುಗಳ ಸಹಕಾರದೊಂದಿಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಇದರ ಅಧ್ಯಕ್ಷರಾದ ಡಾ. ಶೇಖ್ ಬಾವ ಮಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬದ್ರಿಯಾ ಜುಮಾ ಮಸ್ಜಿದ್ ಜಪ್ಪು ಕುಡುಪ್ಪಾಡಿ ಇದರ ಮುದರ್ರಿಸರಾದ ಬಹುI ಹೈದರ್ ಅಲೀ ಅಹ್ಸನಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಅಲೈಡ್ & ಹೆಲ್ತ್ ಕೇರ್ ಕೌನ್ಸಿಲ್ ಇದರ ಅಧ್ಯಕ್ಷರಾದ ಡಾ.ಇಫ್ತಿಕಾರ್ ಅಲೀ ಫರೀದ್ ಉದ್ಘಾಟಿಸಿ ಮಾತನಾಡಿದ ಅವರು ಬಾಫಖಿ ಫೌಂಡೇಶನ್ ಕೈಗೆತ್ತಿಕೊಳ್ಳುವ ಉನ್ನತ ವಿದ್ಯಾಭ್ಯಾಸಕ್ಕೆ ನೀಡುವ ಪ್ರಯೋಜಕತ್ವಕ್ಕೆ ಸಂಪೂರ್ಣ ಸಹಕರಿಸುವ ಭರವಸೆ ನೀಡಿದರು.
ಉನ್ನತ ವಿದ್ಯಾಭ್ಯಾಸದ ಕುರಿತುಳ್ಳು ವಿಷಯದ ಬಗ್ಗೆ ಆಳ್ವಾಸ್ ಕಾಲೇಜು ಇದರ ಪ್ರಾಂಶುಪಾಲರಾದ ಡಾ.ಕುರಿಯನ್ ಸರ್ ಅವರು ಉನ್ನತ ಶಿಕ್ಷಣದ ಬಗ್ಗೆ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನದ ಶಿಬಿರವನ್ನು ಆಯೋಜಿಸಿ ಕೊಟ್ಟರು. ಎಸ್ಸೆಸ್ಸೆಲ್ಸಿಯಲ್ಲಿ ಒಟ್ಟು 357 ಮತ್ತು ಪಿಯುಸಿ ಯಲ್ಲಿ 254 ವಿದ್ಯಾರ್ಥಿಗಳಿಗೆ ಹಾಗೂ ಶೇಕಡಾ 100% ಪಲಿತಾಂಶ ಪಡೆದ 325 ಶಾಲಾ-ಕಾಲೇಜುಗಳಿಗೆ ಪುರಸ್ಕಾರವನ್ನು ನೀಡಲಾಯಿತು. ಜಿಲ್ಲೆಯ ಒಟ್ಟು 40 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ವರ್ಣ ಪದಕವನ್ನು ನೀಡಿ ಗೌರವಿಸಲಾಯಿತು. ಉನ್ನತ ಶಿಕ್ಷಣ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಸಮಿತಿಯು ಘೋಷಿಸಿತು.
ಕಾರ್ಯಕ್ರಮದ ಪ್ರಾಯೋಜಕರಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ , ಕಣಚೂರು ಮೆಡಿಕಲ್ ಕಾಲೇಜ್, ಆಜಾದ್ ಮನ್ಶೂರ್, ಸುಲ್ತಾನ್ ಗೋಲ್ಡ್ , ಅಡ್ವಕೇಟ್ ಮುಹಮ್ಮದಲೀ , ಬಿ.ಎಮ್ ಹಾರಿಸ್ , ಹಜ್ಜಾಜ್ ಗ್ರೂಪ್, ಅಡ್ವಕೇಟ್ ಮುಝಫ್ಫರ್, ಅಡ್ವಕೇಟ್ ರಿಯಾಝ್ , ಶೌಕತ್ , ಕರ್ನಿರೆ ಬ್ರದರ್ಸ್ , ಹಮೀದ್ ಪಳ್ನೀರ್ , ಶಂಸುದ್ಧೀನ್ ,ಯೂಸುಫ್ ಕಮಾಲ್ , ಮಹಬೂಬ್ , ಸಿತಾರ್ ಮಜೀದ್ ಹಾಜಿ ಅಡ್ಯಾರ್ ಕಣ್ಣೂರು , ಕೆ.ಎಚ್. ಹಮೀದ್ ಕಣ್ಣೂರು ಮುಂತಾದವರು ಸಹಕರಿಸಿದರು.
ಬೆಳಿಗ್ಗೆಯ ಉಪಹಾರ ಮತ್ತು ನೀರಿನ ವ್ಯವಸ್ಥೆಯನ್ನು ಪಕೀರಪ್ಪ ಮಾಸ್ಟರ್, ಅದ್ದು ಹಾಜಿ ,ರಶೀದ್ ಹಾಜಿ , ಸಮದ್ ಹಾಜಿ ಮತ್ತು ಜಲೀಲ್ ನೀಡಿದರು. ಅಡ್ವಕೇಟ್ ಸುಲೈಮಾನ್ ಎಸ್ ಮಂಗಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಕನ್ವೀನರ್ ಎ. ಎಸ್.ಇ ಕರೀಮ್ ಕಡಬ ಸ್ಕಾಲರ್ಶಿಪ್ ಘೋಷಿಸಿದರು.ಸಯ್ಯಿದ್ ಹಬೀಬುಲ್ಲಾಹ್ ಪೂಕೋಯ ತಂಙಳ್ ಪೆರುವಾಯಿ ಅವರು ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು. ಬಿಲ್ಡ್ ಅಪ್ ಕಾಸರಗೋಡ್ ಕೋಶಾಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಝುಲೈಖಾ ಮಾಹಿನ್ ಕಾರ್ಯಕ್ರಮಕ್ಕೆ ಶುಭ ಕೋರಿ ಸಹಕರಿಸಿದರು.
ವಕ್ಛ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ , ಸಾಮಾಜಿಕ ಕಾರ್ಯಕರ್ತ ಡಿ.ಐ ಕೈರಂಗಳ , ಜಂ-ಇಯ್ಯತ್ತುಲ್ ಫಲಾಹ್ ಜಿಲ್ಲಾಧ್ಯಕ್ಷರಾದ ಕೆ.ಕೆ ಶಾಹುಲ್ ಹಮೀದ್ ಕರಾಯ, ಲತೀಫ್ ಕಂದಕ್ ಕಾರ್ಪೊರೇಟರ್ , ಅಬ್ದುರ್ರಹ್ಮಾನ್ ಮೊಗರ್ಪನೆ, ಅಬ್ದುಲ್ ರಾಝಕ್ ದಮಾಸ್, ಮೊಹಮ್ಮದ್ ಷರೀಫ್ ಕುಡುಪಾಡಿ, ಇಂಜಿನಿಯರ್ ಆಸೀಫ್, ಉದಯ ಹನೀಫ್ ಹಾಜಿ ಕಲ್ಲೇಗ , ಹಾಜಿ ಯೂಸುಫ್ ಜಪ್ಪು , ಪುದು ಗ್ರಾಮ ಪಂಚಾಯತ್ ಸದಸ್ಯರಾದ ಹಾಶೀರ್ ಪೇರಿಮಾರ್ , ಶಬೀರ್ ತಲಪಾಡಿ , ಸಯ್ಯಿದ್ ಬಂಗೇರುಕಟ್ಟೆ , msf ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಸಿರಾಜುದ್ಧೀನ್ ನದ್ವಿ ಉತ್ತರ ಪ್ರದೇಶ , msf ಮಹಿಳಾ ವಿಭಾಗ ಕೇರಳ ರಾಜ್ಯಾಧ್ಯಕ್ಷರಾದ ಶಾಹೀದಾ ಕಾಸರಗೋಡು , ಪ್ರಧಾನ ಕಾರ್ಯದರ್ಶಿ ಹಫ್ಸೀಲಾ ವಡಗರ , msf ದಕ್ಷಿಣ ಕನ್ನಡ ಜಿಲ್ಲಾ ಸದಸ್ಯರು , ಮುಸ್ಲಿಂ ಲೀಗ್ ಜಿಲ್ಲಾ ನಾಯಕರು ಮುಂತಾದವರು ಇದ್ದರು.
ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಸ್ವಾಗತಿಸಿ ,ವಂದಿಸಿದರು. ಝುಲ್ಛಿಕರ್ ಅಲೀ ಎಚ್.ಕಲ್ಲು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಯಶಸ್ವಿಗಾಗಿ ಬಾಫಖಿ ತಂಙಳ್ ಫೌಂಡೇಶನ್ ಕೋಶಾಧಿಕಾರಿ ರಿಯಾಝ್ ಹರೇಕಳ , msf ನಾಯಕರಾದ ಹನೀಫ್ ಕುಂಜತ್ತೂರು , ಆಶೀಖ್ ಮಲ್ಲೂರು , ಸಿದ್ಧೀಖ್ ಕಡಬ , ಸ್ವಲಾಹುದ್ಧೀನ್ ಅಯ್ಯೂಬಿ ಕಡಬ , ಬಿಲಾಲ್ ಕಡಬ , ಜಂಶೀರ್ ಕೈಕಂಬ ಮತ್ತಿತ್ತರರು ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.