(www.vknews.in) ; ಸ.ಉ.ಹಿ.ಪ್ರಾ. ಶಾಲೆ ಮುಕ್ವೆ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಯು ಹಿರಿಯ ವಿದ್ಯಾರ್ಥಿಗಳು ಶಾಲಾ SDMC ಹಾಗೂ ಶಿಕ್ಷಕರ ಸಹಾಭಾಗೀತ್ವವದಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು.
SDMC ಅಧ್ಯಕ್ಷ ಶ್ರೀ ಮುಬೀನ್ ಸಾಹೇಬ್ ರವರು ಮಹಾ ಸಭೆಯ ಸಭಾಧ್ಯಕ್ಷತೆ ವಹಿಸಿದರು. ಶ್ರೀ ರಾಮ್ ಕನ್ಸ್ಟ್ರಕ್ಷನ್ ಮಾಲಕರು ಶಾಲಾ ಹಿತೈಷಿಯು ಆದ ಶ್ರೀ ಪ್ರಸನ್ನ ಭಟ್ ಪಂಚವಟಿಯವರು ಪ್ರಸ್ತಾವಿಕ ಮಾತುಗಳನ್ನಾಡಿ ಶುಭಹಾರೈಸಿದರು. ಶಿಕ್ಷಕ ಚರಣ್ ಕುಮಾರ್ ಪ್ರಾರ್ಥಿಸಿದರು. ಮುಖ್ಯಗುರುಗಳಾದ ಕಾರ್ಮೆಲಸ್ ಅಂದ್ರಾದೆ ಯವರು ಸಂಘದ ಮಹತ್ವ ಹಾಗೂ ಜವಾಬ್ದಾರಿಗಳ ಕುರಿತು ಮಾತಾಡಿದರು. ನಿಕಟ ಪೂರ್ವ ಅಧ್ಯಕ್ಷರಾದ ರವಿ ಮನಿಯಾ ರವರು ಸರ್ವರ ಸಹಕಾರವನ್ನು ಸ್ಮರಿಸಿದರು. ನಿಕಟ ಪೂರ್ವ ಕೋಶಾಧಿಕಾರಿ ನವೀನ್ ಡಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು…ನಿಕಟ ಪೂರ್ವ ಕಾರ್ಯದರ್ಶಿ Pm ಆಶ್ರಪ್ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು 48ಹಿರಿಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದರು
ಹಿರಿಯ ವಿದ್ಯಾರ್ಥಿ ಸಂಘದ ಹೊಸ ಕಾರ್ಯಕಾರಿ ಸಮಿತಿ..
ಅಧ್ಯಕ್ಷರು:-ಸೋಮಪ್ಪ ಗೌಡ
ಉಪಾಧ್ಯಕ್ಷರು:- ಸಲೀಂ ಮುಕ್ವೆ
ಪ್ರಧಾನ ಕಾರ್ಯದರ್ಶಿ:- ಶಿಹಾಬ್ ಪಿಕೆ
ಜೊತೆ ಕಾರ್ಯದರ್ಶಿ:-ರಘುನಾತ್ ಮಣಿಯ
ಕೋಶಾಧಿಕಾರಿ:-ಗುರುಪ್ರಸಾದ್
ಸಂಘಟನಾ ಕಾರ್ಯದರ್ಶಿ:-ಸಿರಾಜ್ ಮಣಿಯ
ಸದಸ್ಯರು 1.ನವೀನ್ ಡಿ 2.ಆರ್ಷದ್ ಮಣಿಯ 3.ಶಿವಪ್ರಸಾದ್ ಎಲಿಕ 4.ರಫೀಕ್ ಮಣಿಯ 5.ವಲೇರಿಯನ್ ತೋರಸ್ 6.ಆಬಿದ್ ಮುಕ್ವೆ 7.ರಮೇಶ
ಆಯ್ಕೆಯಾದ ಸಮಿತಿ ಸದಸ್ಯರಿಗೆ ಅಭಿನಂದನೆಗಳು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.