(www.vknews.in) : ಕೆಸಿಎಫ್ ಬಹ್ರೈನ್ ರಾಷ್ಟೀಯ ಸಮಿತಿಯ ನಾಯಕ, ಸಕ್ರಿಯ ಸುನ್ನೀ ಕಾರ್ಯಕರ್ತ, ಪ್ರತಿಭಾವಂತ ಯುವ ಮುಂದಾಳು, ಸಮಾಜ ಸೇವಕ ಎಲ್ಲವೂ ಆಗಿದ್ದ ಪ್ರೀತಿಯ ಗೆಳೆಯ ಬಶೀರ್ ಕಾರ್ಲೇ, ಸುಳ್ಯ (50 ವಯಸ್ಸು) ಇಂದು (2024 ಸೆಪ್ಟೆಂಬರ್ 1 ಭಾನುವಾರ) ಮುಂಜಾನೆ ನಿಧನರಾದರು.
ದಶಕಗಳ ಹಿಂದಿನಿಂದಲೇ ಸುಳ್ಯ ಪ್ರದೇಶದಲ್ಲಿ SSF ಕಟ್ಟಿ ಬೆಳೆಸಿ, ನಾಯಕತ್ವ ಕೊಟ್ಟು ಭರವಸೆ ಮೂಡಿಸಿದ್ದ ಬಶೀರ್, ಉದ್ಯೋಗ ನಿಮಿತ್ತ ಬಹರೈನ್ ಗೆ ತೆರಳಿ ಪ್ರವಾಸಿ ಜೀವನ ನಡೆಸುವಾಗಲೂ ಸಿಕ್ಕ ಬಿಡುವುಗಳನ್ನು ಬಳಸಿ, KCF, ಸುಳ್ಯಅಸೋಸಿಯೇಷನ್,ಮುಂತಾದ ಊರಿನ ಎಲ್ಲ ಸುನ್ನೀ ಸಂಘ-ಸಂಸ್ಥೆಗಳ ಪೋಷಕ ಸಮಿತಿಗಳಲ್ಲಿ ಮತ್ತು ಸಮಾಜ ಸೇವಾ ಘಟಕಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು, ಕುಂಬ್ರ ಮರ್ಕಝುಲ್ ಹುದಾದ ಬಹರೈನ್ ಘಟಕದ ಸಜೀವ ಸಾರಥಿಯಾಗಿದ್ದರು. ಅವರ ಅನಿರೀಕ್ಷಿತ ವಿಯೋಗವು ಅತ್ಯಂತ ನೋವು ತಂದಿದೆ.
ಅನಾರೋಗ್ಯ ಪೀಡಿತರಾಗಿ, ತಲೆಯ ಶಸ್ತ್ರ ಕ್ರಿಯೆಗೆ ಒಳಗಾಗಿ ಬಳಿಕ ಚೇತರಿಸಿಕೊಂಡು ಬದುಕಿಗೆ ಮರಳಿ ಬರುವಷ್ಟರಲ್ಲಿದ್ದ ಅವರು ಇದೀಗ ಅಲ್ಲಾಹನ ಕರೆಗೆ ಓಗೊಟ್ಟು ಅವನ ಕಾರುಣ್ಯದೆಡೆಗೆ ತೆರಳಿದ್ದಾರೆ. ಅವರು ಪತ್ನಿ, ಒಬ್ಬ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು, ಅಪಾರ ಬಂಧು, ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ,
ಬಶೀರ್ ಕಾರ್ಲೇ ಅವರ ಪಾರತ್ರಿಕ ವಿಜಯಕ್ಕಾಗಿ ಎಲ್ಲರೂ ದುಆ ಮಾಡಲು ಮತ್ತು ಮಯ್ಯಿತ್ ನಮಾಝ್ ಮಾಡಲು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ. ಅಲ್ಲಾಹು ಅವರಿಗೆ ಮಗ್ಫಿರತ್ ಮರ್ಹಮತ್ ನೀಡಲಿ, ಕುಟುಂಬಕ್ಕೆ ಸಹಿಸುವ ಶಕ್ತಿ ನೀಡಿ ಅನುಗ್ರಹಿಸಲಿ -ಆಮೀನ್
ಡಾ. ಎಮ್ಮೆಸ್ಸೆಂ. ಝೖನೀ ಕಾಮಿಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.