(www.vknews.in) ; ಕೆ.ಸಿ.ಎಫ್ ಐ.ಸಿ ಪ್ರೊಫೆಸನಲ್ ವಿಂಗ್ ಕಾರ್ಯದರ್ಶಿ,ಕೆ.ಸಿ.ಎಫ್ ಬಹರೈನ್ ರಾಷ್ಟೀಯ ಸಮಿತಿ ಸಾರಥಿ, ಸುಳ್ಯ ವೆಲ್ಫೇರ್ ಅಶೋಷಿಯೇಶನ್ ಸೇರಿದಂತೆ ಹಲವು ಸುನ್ನೀ ಸಂಘ ಸಂಸ್ಥೆ ಗಳಲ್ಲಿ ಸಕ್ರೀಯರಾಗಿದ್ದ ಬಶೀರ್ ಕಾರ್ಲೆ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯಾರಾದರು.
ಅವರ ಮರಣದ ವಾರ್ತೆ ಬಹರೈನ್ ಕೆ.ಸಿ.ಎಫ್ ನ ಎಲ್ಲಾ ಕಾರ್ಯ ಕರ್ತರಿಗೂ ಸಹಿಸಲಾಗದ ದುಃಖವನ್ನು ತಂದಿತ್ತು.ಕೆ.ಸಿ.ಎಫ್ ಬಹರೈನಿನ ಪ್ರಾರಂಭಿಕ ಘಟ್ಟದಿಂದಲೇ ಸಕ್ರೀಯರಾಗಿದ್ದು ಸಂಘಟನೆಗಾಗಿ ಅಹರ್ನಿಶಿ ದುಡಿದಿದ್ದರು.ಎಲ್ಲರೊಂದಿಗೂ ಉತ್ತಮ ಒಡನಾಟವನ್ನು ಹೊಂದಿದ್ದ ಅವರು ಎರಡು ವರ್ಷಗಳ ಹಿಂದೆ ಐ.ಸಿ.ಕ್ಯಾಬಿನೆಟ್ ಅಂಗವಾಗಿ ಆಯ್ಕೆಯಾಗಿದ್ದರು.
ಉತ್ತಮ ಸಂಘಟಕ,ಬಹು ಮುಖ ಪ್ರತಿಭೆಯಾಗಿದ್ದ ಅವರು ಸದಾ ಲವ ಲವಿಕೆಯಿಂದ ಇದ್ದು ಎಲ್ಲಾ ಕಾರ್ಯಕರ್ತರಿಗೂ ಸ್ಪೂರ್ತಿಯ ಸೆಲೆಯಾಯಾಗಿದ್ದರು. ಕೆ.ಸಿ.ಎಫ್ ನ ಹಲವು ಕಾರ್ಯಕ್ರಮಗಳಿಗೆ ತನ್ನ ಆಕರ್ಷಕವಾದ ಶೈಲಿಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿದ್ದರು. ದಫ್ ನಲ್ಲಿ ವಿಶೇಷ ಕಾಳಜಿಯಿದ್ದ ಅವರು ಬಹರೈನ್ ದಫ್ ತಂಡದಲ್ಲಿ ಸಕ್ರೀಯರಾಗಿದ್ದರು. ಒಂದೂವರೆ ವರ್ಷ ಹಿಂದೆ ಆಲ್ಪಕಾಲದ ರಜಾ ನಿಮಿತ್ತ ಅವರು ಊರಿಗೆ ಯಾತ್ರೆ ಹೋಗುವ ಒಂದು ದಿನದ ಮುಂಚೆ ಅವರನ್ನು ಭೇಟಿಯಾಗಿ ದ್ದೆ. ಬಹರೈನಿನಲ್ಲಿ ದಫ್ ರಾತೀಬ್ ಅನ್ನು ಯಶಸ್ವಿಯಾಗಿ ನಾವು ಮುಂದುವರಿಸಬೇಕು ಎಂಬ ಮಾತನ್ನು ಹೇಳಿದ್ದರು.
ಹಾಗೆ ಊರಿಗೆ ಹೋದ ಕಾರ್ಲೆಯವರು ಅನಾರೋಗ್ಯ ಪೀಡಿತರಾದ ವಿಚಾರ ಬಹರೈನಿನ ಎಲ್ಲಾ ಕಾರ್ಯಕರ್ತರಲ್ಲೂ ಸಂಚಲ ವನ್ನು ಮೂಡಿಸಿತ್ತು. ಅವರು ಗುಣಮುಖಗರಾಗಲು ನಡೆಸಿದ ದುವಾ ಮಜ್ಲಿಸ್ಗಳಿಗೆ ಲೆಕ್ಕವೇ ಇಲ್ಲ ಎನ್ನಬಹದು. ಎಲ್ಲಾ ರೀತಿಯಿಂದಲೂ ಅವರೊಂದಿಗೆ ಸಾಥ್ ನೀಡಿದ್ದರು. ಸಂಘಟನೆಯೊಂದಿಗೆ ಅವರಿಗೆ ಇದ್ದ ಭಾಂಧವ್ಯಕ್ಕೆ ಅದು ಕೈಗನ್ನಡಿಯಾಗಿತ್ತು. ಇತ್ತೀಚೆಗೆ ಊರಿಗೆ ಹೋದ ಸಂಧರ್ಭ ಸಹ ಕಾರ್ಯ ಕರ್ತರೊಂದಿಗೆ ಅವರನ್ನು ಭೇಟಿಯಾದಾಗಲೂ ಸಂಘಟನೆ ಯ ಮಹತ್ವದ ಬಗ್ಗೆ ಮಾತನಾಡಿದ್ದರು.
ಮಹಾನರಾದ ಖುರ್ರತುಸ್ಸಾದಾತ್ ಅವರ ಅವರ ಅಂತಿಮ ದರ್ಶನಕ್ಕೆ ಹೋದ ಸಂಧರ್ಭ ಅನಾರೋಗ್ಯದ ಮದ್ಯೆಯೂ ತಂಙಳ್ರವರ ಜನಾಝ ತಲುಪಿತಾ ಎಂಬ ವಿಚಾರದ ಬಗ್ಗೆ ನನ್ನೊಂದಿಗೆ ಕರೆ ಮಾಡಿ ಮಾತನಾಡಿದ್ದರು. ಅಹ್ಲು ಬೈತ್ ಹಾಗೂ ಉಲಾಮಾಗಳೊಂದಿಗೆ ಇದ್ದ ಅವರ ಪ್ರೀತ್ಯಾದಾರದ ಪ್ರತಿಫಲನ ಇಂದು ಅವರ ಮರಣದ ದಿವಸ ನಾವು ಕಂಡೆವು.ಅವರಿಗಾಗಿ ನೂರಾರು ಸಾದಾತ್ಗಳು, ಉಲಮಾಗಳು ಪ್ರಾರ್ಥಿಸಿದ್ದರು. ಹಲವು ದುವಾ ಮಜ್ಲಿಸ್ ಗಳು ನಡೆದವು.
ಕೆ.ಸಿ.ಎಫ್ ಬಹರೈನ್ ಇಂದು ಆಯೋಜಿಸಿದ ಖತಮುಲ್ ಖುರ್ಆನ್ ಹಾಗೂ ದುವಾ ಸಂಗಮದಲ್ಲಿ ಅಸಯ್ಯದ್ ಅಲೀ ಭಾಫಕೀ ತಂಙಳ್ ರವರ ಭಕ್ತಿ ನಿರ್ಭರವಾದ ಪ್ರಾರ್ಥನೆಗೆ ಅಲ್ಲಿ ನೆರೆದ ಕಾರ್ಯಕರ್ತರೆಲ್ಲ ರೂ ಕಣ್ಣೀರಿಳಿಸುತ್ತಾ ಆಮೀನ್ ಹೇಳುತ್ತಿದ್ದರು.ಅಲ್ಲಾಹುವೇ ನೀನು ಎಲ್ಲವನ್ನು ಖಬೂಲ್ ಮಾಡು.ಬಶೀರ್ ಕಾರ್ಲೆಯವರ ಖಬರ್ ಅನ್ನು ಪ್ರಕಾಶಮಯವನ್ನಾಗಿ ಮಾಡು. ಅಗಲಿದ ಕಟುಂಬ ಬಂಧು ಮಿತ್ರಾಧಿಗಳಿಗೆ ಸಹನೆ ಹಾಗೂ ಸಮಾಧಾನವನ್ನು ಕರುಣಿಸು. ಆಮೀನ್….
✒️ ಹಾರಿಸ್ ಸಂಪ್ಯ,ಬಹರೈನ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.