(www.vknews.in) ; ಕಡಬದಲ್ಲಿ ಇಂದು ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲೆಯ ಕಬಡ್ಡಿ ಪ0ದ್ಯಾಟದಲ್ಲಿ ಸರಕಾರಿ ಶಾಲಾ ಮಕ್ಕಳ ತಂಡಗಳಿಗೆ ಮೋಸ ಮಾಡಿರುವ ಬಗ್ಗೆ ದೂರು ಬಂದಿದ್ದು, ಮೋಸದ ಬಗ್ಗೆ ತಿಳಿದ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯ ತಂಡವು ಇದರ ಬಗ್ಗೆ ಅನ್ವೇಷಣೆ ಮಾಡಿದಾಗ ಸರಕಾರಿ ಶಾಲಾ ಮಕ್ಕಳಿಗೆ ಅನ್ಯಾಯವಾಗಿದ್ದು ತಿಳಿದು ಬಂದಿದೆ.
ರಾಜ್ಯದ ಹೆಚ್ಚಿನ ಶಾಲೆಗಳಲ್ಲಿ ದೈಹಿಕ ಶಿಕ್ಷಕ ಕೊರತೆ ಒಂದು ಕಡೆ ಆದರೆ ಮಕ್ಕಳ ದಾಖಲಾತಿ ಕಡಿಮೆ ಎನ್ನುವ ಕಾರಣದಿಂದ ದೈಹಿಕ ಶಿಕ್ಷಕರು ಇಲ್ಲದೆ ಇರುವ ಶಾಲೆಗಳು 60% ಇದೆ .
ಈ ದೈಹಿಕ ಶಿಕ್ಷಕರು ಇಲ್ಲದೆ ಇರುವ ಶಾಲೆಗಳಲ್ಲಿ ಮಕ್ಕಳನ್ನು ಕ್ರೀಡೆಗಳಿಗೆ ಸಜ್ಜು ಗೊಳಿಸುವ ಹೊಣೆಯನ್ನು ಶಾಲೆಗಳ ಹಿರಿಯ ವಿದ್ಯಾರ್ಥಿಗಳು, ಅಥವಾ ಸಮುದಾಯವು ಸೇರಿಕೊಂಡು ನಡೆಸುತ್ತಾ ಬಂದಿವೆ.
ಆದರೆ ಪುತ್ತೂರು ಶಿಕ್ಷಣಾಧಿಕಾರಿ ವ್ಯಾಪ್ತಿಯ ಕಡಬ ತಾಲೂಕಿನಲ್ಲಿ ನಡೆದಂತಹ ಕಬಡ್ಡಿ ಪಂದ್ಯಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿನಲ್ಲಿ ಹೊರಡಿಸಿದಂತಹ ಒಂದು ಅದೇಶವು, ಸರಕಾರಿ ಶಾಲೆಗಳನ್ನು ಇಂತಹ ಪಂದ್ಯಾಟದಿಂದ ದೂರ ಮಾಡಿ ಕೇವಲ ಖಾಸಗಿ ಶಾಲೆಗೆ ಪೂರಕವಾಗಿರುವ ರೀತಿಯಲ್ಲಿರುವುದು ವಿಚಿತ್ರವಾದರು ಸತ್ಯವಾಗಿದೆ.
ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದೆ ಇದ್ದ ಸಂದರ್ಭದಲ್ಲಿ ಮಕ್ಕಳಿಗೆ ತರಬೇತಿ ಕೊಟ್ಟ ತರಬೇತು ದಾರರನ್ನು ಪಂದ್ಯಾಟ ನಡೆಯುವ ಸಂದರ್ಭದಲ್ಲಿ ಮಕ್ಕಳಿಗೆ ಮಾಹಿತಿ ನೀಡಲು ಅವಕಾಶವನ್ನು ಕೊಡದೆ ಇರುವುದು ಅಕ್ಷಮ್ಯ ಅಪರಾಧ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಹಾಗೂ ಮಕ್ಕಳ ಮದ್ಯೆ ಬೇಧ ಭಾವ ವನ್ನು ಉಂಟು ಮಾಡಿ ಮಕ್ಕಳಿಗೆ ಸರಕಾರಿ ಶಾಲೆಗಳ ಮೇಲಿನ ಅಭಿಮಾನವನ್ನು ಇಲ್ಲದಾಗಿಸಿದೆ.
ಆದೇಶದಲ್ಲಿ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಿಗೆ ಮಾತ್ರ ಪಂದ್ಯಾಟದ ಸಮಯದಲ್ಲಿ ಮಕ್ಕಳೊಂದಿಗೆ ಇರಲು ಅವಕಾಶವನ್ನು ಕೊಟ್ಟಿದ್ದು ತರಬೇತಿ ಕೊಟ್ಟ ತರಬೇತು ದಾರರಿಗೆ ಅವಕಾಶವನ್ನು ಕೊಡದೆ ಇರುವುದು ಆಶ್ಚರ್ಯವನ್ನು ಉಂಟು ಮಾಡುತ್ತಿದೆ.
ಗುಂಪು ಪಂದ್ಯಾಟಗಳ ಬಗ್ಗೆ ಹಾಗೂ ಅದರಲ್ಲಿ ಭಾಗವಹಿಸುವ ಮಕ್ಕಳ ಬಗ್ಗೆ ತರಬೇತುದಾರರಿಗೆ ಹೆಚ್ಚಿನ ಅರಿವಿದ್ದು, ಪಾಠ ಮಾಡುವ ಶಿಕ್ಷಕರನ್ನು ಆಟದ ಸಮಯದಲ್ಲಿ ಮಕ್ಕಳೊಂದಿಗೆ ಇರಲು ಹೇಳುತ್ತಾ ಇರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಅಲ್ಲಿ ಸೇರಿದ ಎಲ್ಲಾ ಶಿಕ್ಷಣ ಪ್ರೇಮಿಗಳದ್ದಾಗಿದೆ.
ಈ ಅದೇಶವು ಕೇವಲ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿ ಕೊಡಲು ಹಾಗೂ ಸರಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮಕ್ಕಳ ಹಕ್ಕುಗಳಿಂದ ವಂಚಿಸಿ, ಸಮುದಾಯವನ್ನು ಶಾಲೆಯಿಂದ ದೂರ ಮಾಡಲು ಮಾಡುವ ಹುನ್ನಾರದ ಹಾಗೆ ಕಾಣುತ್ತಿದ್ದು ಇದರ ಬಗ್ಗೆ ಕೂಡಲೇ ತನಿಖೆ ನಡೆಸುವುದರೊಂದಿಗೆ ಇವತ್ತು ಆಟದಿಂದ ವಂಚಿತರಾಗಿರುವ ಶಾಲೆಯ ತಂಡಗಳನ್ನು ಸೇರಿಸಿಕೊಂಡು ಮಗದೊಮ್ಮೆ ವಲಯ ಮಟ್ಟದ ಪಂದ್ಯಾಟ ನಡೆಸಲು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಅಗ್ರಹಿಸುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.