(www.vknews. in) ; ಎಲ್ಲಿ ಮಾದಕ ದ್ರವ್ಯಗಳನ್ನು (ಡ್ರಗ್ಸ್) ಮಟ್ಟ ಹಾಕಲಾಗಿದೆಯೋ, ಎಲ್ಲಿ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆಯೋ, ಎಲ್ಲಿ ಭೂಗತ ದೊರೆಗಳ ಜಾಡನ್ನು ಬೇಧಿಸಲಾಗಿದೆಯೋ, ಎಲ್ಲಿ ಸಮಾಜಘಾತುಕರ ಸದ್ದಡಿಸಲಾಗಿದೆಯೋ, ಎಲ್ಲಿ ಸ್ಮಗ್ಲಿಂಗ್, ಹವಾಲ, ವೇಶ್ಯಾವಾಟಿಕೆ, ಮಟ್ಕಾ ನಿಗ್ರಹಿಸಲಾಗಿದೆಯೋ, ಎಲ್ಲಿ ದರೋಡೆ-ಡಕಾಯಿತಿ, ರೌಡಿಸಂ ದಮನ ಮಾಡಲಾಗಿದೆಯೋ ಅಲ್ಲೆಲ್ಲಾ CCB ತಂಡದ ಅದ್ಭುತ ಸಾಹಸ ನಡೆದಿದೆ ಎಂದೇ ಅರ್ಥ.
ಎಲ್ಲಿ CCB ತಂಡದ ಸದಸ್ಯರಿಗೆ ಮುಖ್ಯಮಂತ್ರಿ ಪದಕ ನೀಡಲಾಗಿದೆಯೋ, ಎಲ್ಲಿ ರಾಷ್ಟ್ರಪತಿ ಪದಕ ನೀಡಲಾಗಿದೆಯೋ, ಎಲ್ಲಿ ಇಲಾಖಾ ಪುರಸ್ಕಾರ ಸಾರ್ವಜನಿಕ ಪ್ರಶಂಸೆಗಳು ಸಿಗುತ್ತಿವೆಯೋ ಅಲ್ಲೆಲ್ಲಾ CCB, ACP, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಸಹಾಯಕ, ಸಬ್ ಇನ್ಸ್ಪೆಕ್ಟರ್, ಎಚ್.ಸಿ., ಪಿ.ಸಿ.ಗಳ ಹೆಸರು ಇದ್ದೇ ಇರುತ್ತದೆ. ಹಲವಾರು ಪ್ರಶಸ್ತಿ, ಪುರಸ್ಕಾರ, ಚಿನ್ನ ಬೆಳ್ಳಿಗಳ ಪದಕಗಳನ್ನು ಪಡೆದಿರುವ ಮಂಗಳೂರು ನಗರ CCB ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಎಂದಾಕ್ಷಣ ಕಳ್ಳ ಖದೀಮರು, ಕಾಳ ಸಂತೆಕೋರರು, ಭೂಗತ ದೊರೆಗಳು, ರೌಡಿಗಳು, ಪುಂಡರು ಇತ್ಯಾದಿ ಸಮಾಜ ಘಾತುಕರು, ದೇಶ ದ್ರೋಹಿಗಳು ಒಮ್ಮೆಲೆ ಬೆಚ್ಚಿ ಬೀಳುತ್ತಾರೆ.
ಯಾವುದೇ ಪ್ರಕರಣಗಳು CCB ತಂಡದ ಕೈಗೆ ಬಂದರೆ ಆ ಪ್ರಕರಣಗಳು ಪತ್ತೆಯಾಗುವುದರಲ್ಲಿ ಸಂದೇಹವಿಲ್ಲ. ನೂರಾರು ಭೀಕರ ಪ್ರಕರಣಗಳನ್ನು ಪತ್ತೆ ಮಾಡಿ ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ಅಕ್ರಮ ಸಂಪತನ್ನು ಸ್ವಾಧೀನ ಪಡಿಸಿ ಕೊಟ್ಟ ಕೀರ್ತಿ ಮಂಗಳೂರು ನಗರ ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ ವಾಲ್ ಹಾಗೂ ಅವರ ನೇತೃತ್ವದ CCB ತಂಡಕ್ಕೆ ಸಲ್ಲಬೇಕು.
ಮಂಗಳೂರು ನಗರ ಸಹಿತ ತಾನು ಸೇವೆ ಸಲ್ಲಿಸಿದ ಎಲ್ಲಾ ಕಡೆಗಳಲ್ಲೂ ಪೊಲೀಸ್ ಇಲಾಖೆ ಗೆ ಕೀತಿ೯ ತಂದ ಧೀಮಂತ ಪೋಲಿಸ್ ಕಮಿಷನರ್ ಅನುಪಂ ಅಗರ್ ವಾಲ್ ಮಂಗಳೂರು ನಗರದಾದ್ಯಂತ ಅನುಷ್ಠಾನದಲ್ಲಿದ್ದ ಎಲ್ಲಾ ರೀತಿಯ ಅನಿಷ್ಟತೆಗಳನ್ನು CCB ತಂಡದ ಅಧಿಕಾರಿಗಳು, ಸಿಬ್ಬಂದಿಗಳ ಮೂಲಕ ಬಗ್ಗು ಬಡಿಸಿ ಮಂಗಳೂರು ನಗರದಾದ್ಯಂತ ನಿಭೀ೯ತಿಯ ವಾತಾವರಣವನ್ನು ಸೃಷ್ಟಿಸಿದ ಮಂಗಳೂರು ನಗರದ ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ ವಾಲ್, ಉಪ ಪೊಲೀಸ್ ಕಮಿಷನರ್ ಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ಹಾಗೂ CCB , ACP ಮನೋಜ್ ಕುಮಾರ್ ನಾೃಕ್ ಇನ್ಸ್ಪೆಕ್ಟರ್ ಶ್ಯಾಮಂ ಸುಂದರ್, ಎಸ್ಐ. ನರೇಂದ್ರ, ಸೀನಪ್ಪ, ಸುದೀಪ್, ಶರಣಪ್ಪ, ASI ಗಳಾದ ಸುಜನ್ ಶೆಟ್ಟಿ, ರಾಮಣ್ಣ, ಮೋಹನ್, ಹಾಗೂ ಜಬ್ಬರ್ ಸಿಬ್ಬಂದಿಗಳು ಇನ್ನಷ್ಟು ಕಾಲ ಮಂಗಳೂರು ನಗರ CCB ಯಲ್ಲೇ ಸೇವೆ ಸಲ್ಲಿಸಬೇಕೆಂಬ ಹಂಬಲ ಜನತೆಯದ್ದಾಗಿದೆ.
ಈ ಪರಾಕ್ರಮಿಗಳಿಗೆ ಎಂತಹ ಪ್ರಶಸ್ತಿ ಯನ್ನು ಕೊಟ್ಟರೂ ಸಾಕಾಗದು. ತಮ್ಮ ಅತ್ಯಮೋಘ ಕಾರ್ಯದಕ್ಷತೆಯಿಂದ ಕಮಿಷನರ್ ಅನುಪಂ ಅಗರ್ ವಾಲ್ ಹಾಗೂ CCB ತಂಡ ಇನ್ನಷ್ಟು ಪ್ರಶಸ್ತಿ, ಪದಕಗಳನ್ನು ಪಡೆದು ರಾಜ್ಯ ಪೋಲಿಸ್ ಇಲಾಖೆಯ ಉತ್ಕೃಷ್ಟ ಅಧಿಕಾರಿಗಳಾಗಿ ಮೆರೆಯಲಿ ಎಂಬುವುದು ಜನತೆಯ ಹಾರೈಕೆ.
*ಶೇಖ್ ಇಸಾಕ್* *ಸಂಪಾದಕರು* *-ಕಾಕೋ೯ಟಕ* *ಸಾಪ್ತಾಹಿಕ*
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.