ಮಂಗಳೂರು (www.vknews.in) : ಮಂಡ್ಯ ನಾಗಮಂಗಲದಲ್ಲಿ ನಡೆದ ಗಲಭೆ ಪೂರ್ವ ಯೋಜಿತ, ಉದ್ದೇಶ ಪೂರಕ ಗಲಭೆ ಸೃಷ್ಟಿಸಲಾಗಿದೆ, ಗಲಭೆಯ ನಂತರ ನಿರೀಕ್ಷಿತ ಹೇಳಿಕೆಗಳು ಬರುತ್ತಿದೆ. ಪ್ರತಾಪ್ ಸಿಂಹ ತಲವಾರು ಬಗ್ಗೆಗಿನ ಹೇಳಿಕೆಯನ್ನು ನೀಡಿ ಜನರನ್ನು ಪ್ರಚೋದಿಸುತ್ತಿದ್ದಾರೆ.
ಪ್ರತಾಪ್ ತಿಳಿಯಲಿ, ಭಾರತದಲ್ಲಿ ಟಿಪ್ಪು ಇತಿಹಾಸ ಅಸ್ತಿತ್ವದಲ್ಲಿ ಇರುವವರೆಗೆ ಇತರರಿಗೆ ತಲವಾರು ನಿರ್ವಹಣೆ ಅಸಾಧ್ಯ. ಟಿಪ್ಪು ಸುಲ್ತಾನರು ಬಿಟ್ಟು ಹೋದ ಧೈರ್ಯಯುತ ಗಂಡೆದೆ ಮತ್ತು ಧೀರತ್ವದ ತಲವಾರು ಗಾರಿಕೆ ಯಾರಿಗಿದೆ? ತಲವಾರುಗಳನ್ನು ನಿರ್ವಹಣೆ ಮಾಡುವುದು, ಬೆತ್ತಲೆ ಲೋಕದಲ್ಲಿ ಪ್ರತಾಪ್ ಸಿಂಹ ಕಾಗದದ ಹುಲಿಯಾಗಿ ಬರೆದಂತಲ್ಲ.
ಪ್ರಚೋದಿತ ಹೇಳಿಕೆಗಳಲ್ಲಿ ಕರ್ನಾಟಕ ಜನರನ್ನು ಈ ಹಿಂದೆ ಮೂರ್ಖರನ್ನಾಗಿಸಿ ಬಲಿ ಪಶು ಮಾಡಿದಂತಲ್ಲ ಮುಂದಿನ ದಿನಗಳು ಎಂದು ಬಿಜೆಪಿ,ಜೆಡಿಎಸ್,ಆರ್ ಎಸ್ ಎಸ್ ತಿಳಿಯಲಿ.
ಕೆ.ಅಶ್ರಫ್ ( ಮಾಜಿ ಮೇಯರ್) ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.